ಬೆಂಗಳೂರಲ್ಲೊಂದು ಡಾಗ್ ಪಾರ್ಕ್: ಇಲ್ಲಿ ಮನುಷ್ಯರೊಬ್ಬರೇ ಹೋಗುವಂತಿಲ್ಲ

ಬೆಂಗಳೂರು, ಡಿಸೆಂಬರ್ 5: ಘನತ್ಯಾಜ್ಯ ವಿಲೇವಾರಿ, ಟ್ರಾಫಿಕ್ ಜಾಮ್ ಕುಡಿಯುವ ನೀರಿನ ಸಮಸ್ಯೆ ಹೀಗೆ ಹತ್ತು ಹಲವು ನಾಗರಿಕ ಸೌಲಭ್ಯ ಕೊರತೆಗಳಿಂದ ಬಳಲುತ್ತಿರುವ ಬೆಂಗಳೂರು, ಮತ್ತೊಂದೆಡೆ ಉಳಿದೆಲ್ಲ ನಾಗರಿಕರುಗಳಿಗಿಂತ ಹೆಚ್ಚು ಪ್ರಮಾಣದ ಉದ್ಯಾನಗಳು, ಹಸಿರು ಪ್ರದೇಶ ಹಾಗೂ ಮಾನವ ವಸತಿಗೆ ಹಿತಕರವಾದ ಅತ್ಯುತ್ತಮ, ನೈಸರ್ಗಿಕ ಪ್ರದೇಶವನ್ನು ಒಳಗೊಂಡಿದೆ.

ಜಾಗತಿಕ ಐಟಿ ಕ್ಷೇತ್ರದಲ್ಲಿ ಬಹುಮುಖ್ಯ ನಗರವೆನಿಸಿಕೊಂಡಿರುವ ಬೆಂಗಳೂರು ಒಂದೆಡೆ ಕೊರತೆಗಳಿಂದ ಬಳಲುತ್ತಿದ್ದರೂ ಇನ್ನೊಂದು ಕಡೆ ಹೊಸದಾಗಿ ಹಸರೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಸತತವಾಗಿ ತೊಡಗಿಸಿಕೊಂಡಿದೆ. ಇದರ ಮಧ್ಯೆಯೇ ಹೊಸ ಹೊಸ ಪ್ರಯೋಗಗಳ ಮೂಲಕ ಇಲ್ಲಿನ ಜನರು ತಮ್ಮ ವಾಸಸ್ಥಳವನ್ನು ಮತ್ತಷ್ಟು ಯೋಗ್ಯಗೊಳಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ.

ಬೆಂಗಳೂರಲ್ಲಿ ಇದೇ ಮೊದಲ ಬಾರಿಗೆ ಸಾಕು ನಾಯಿಗಳಿಗಾಗಿಯೇ ಉದ್ಯಾನವೊಂದನ್ನು ಹೊಂದಿದ ನಗರಗಳ ಕೀರ್ತಿಗೆ ಪಾತ್ರವಾಗಿದೆ. ಬೆಂಗಳೂರಿನ ದೊಮ್ಮಲೂರು ಪ್ರದೇಶದಲ್ಲಿ ಸ್ಥಳೀಯ ನಾಗರಿಕರೇ ಜೊತೆಗೂಡಿ ತಮ್ಮ ಸ್ವಂತ ದುಡ್ಡಿನಲ್ಲಿ ಇದೇ ಮೊದಲ ಬಾರಿಗೆ ಶ್ವಾನಗಳಿಗೂ ಪಾರ್ಕ್ ಒಂದನ್ನು ನಿರ್ಮಿಸಿದ್ದಾರೆ.

Bengaluru now has park dedicated only to dogs

ಇಲ್ಲಿ ಶ್ವಾನಗಳನ್ನು ಅವರ ಮಾಲೀಕರೊಂದಿಗೆ ತೆಗದುಕೊಂಡು ಹೋಗಿ ದಿನವಿಡೀ ಹಸಿರು ಆಹ್ಲಾದಕರ ವಾತಾವರಣದಲ್ಲಿ ಸಮಯವನ್ನು ಕಳೆಯಬಹುದು ಆದರೆ ಮಾಲೀಕರೊಂದಿಗೆ ಶ್ವಾನಗಳನ್ನು ಕರೆದೊಯ್ದರೆ ಮಾತ್ರ ಪ್ರವೇಶವನ್ನು ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+