Namma Metro: 2024ರಲ್ಲಿ ನಮ್ಮ ಮೆಟ್ರೋದಲ್ಲಾಗದ ಅಭಿವೃದ್ಧಿ; ಹಳದಿ ಮಾರ್ಗ ಆರಂಭ ಮತ್ತಷ್ಟು ವಿಳಂಬ

Bengaluru Namma Metro: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ನಗರದ ಬಹುತೇಕ ಮಂದಿ ಟ್ರಾಫಿಕ್‌ ಜಂಜಾಟದಿಂದ ತಪ್ಪಿಸಿಕೊಳ್ಳಲು ಈ ಸಾರಿಗೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗೆ ಇದರಕ್ಲಿ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಮತ್ತೊಂದೆಡೆ ಪ್ರಯಾಣಿಕರ ಬೇಡಿಕೆ ಮೇರೆಗೆ ಮೆಟ್ರೋ ಜಾಲ ವಿಸ್ತರಣೆ ಆಗುತ್ತಲಿದೆ.

ಆದರೆ ನಮ್ಮ ಮೆಟ್ರೋದಲ್ಲಿ 2024ರಲ್ಲಿ ಅಭಿವೃದ್ಧಿಯೇ ಆಗಿಲ್ಲ. ಈ ವರ್ಷ ಹಸಿರು ಮಾರ್ಗದ ಸಣ್ಣ ಭಾಗವವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದ್ದು ಬಿಟ್ಟರೆ, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.

Bengaluru Namma Metro No Progress in 2024 Yellow line Opening delayed again

ಬಹುನಿರೀಕ್ಷಿತ ಮಟ್ರೋ ಯೋಜನೆಗಳಲ್ಲಿ ಹಳದಿ ಮಾರ್ಗವೂ ಒಂದಾಗಿದೆ. ಇದು ಈ ವರ್ಷವೇ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ, ಕಾರಣಂತರಗಳಿಂದ ಮತ್ತಷ್ಟು ವಿಳಂಬವಾಗಿದೆ. ರೋಲಿಂಗ್ ಸ್ಟಾಕ್‌ನ ವಿತರಣೆಯಲ್ಲಿನ ವಿಳಂಬದಿಂದಾಗಿ ಬಹುನಿರೀಕ್ಷಿತ ಹಳದಿ ಮಾರ್ಗದ ಉದ್ಘಾಟನೆಯನ್ನು ಮತ್ತೆ ಮುಂದೂಡಲಾಯಿತು.

ಚೀನಾದಲ್ಲಿ ತಯಾರಾದ ಒಂದೇ ಒಂದು ಮಾದರಿ ರೈಲು ಸೆಟ್ ಫೆಬ್ರವರಿ 14, 2024ರಂದು ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಆಗಮಿಸಿತ್ತು. ಇದನ್ನು ಡಿಪೋದ ಹಳಿಗಳ ಮೇಲೆ ಪರೀಕ್ಷೆಗೆ ಒಳಪಡಿಸಲಾಯಿತು. ಬಳಿಕ ಹಳದಿ ಮಾರ್ಗದಲ್ಲಿ ಮಟ್ರೋ ಕಾರ್ಯಾಚರಣೆ ಡಿಸೆಂಬರ್ 2024ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆ ಇತ್ತು. ಆದರೆ, ಉಳಿದ ರೈಲು ಸೆಟ್‌ಗಳ ಕೊರತೆಯಿಂದಾಗಿ ಮತ್ತಷ್ಟು ವಿಳಂಬವಾಗಿದೆ.

ಆರ್‌ವಿ ರಸ್ತೆ-ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದಲ್ಲಿ ಮೆಟ್ರೋ ಜನವರಿ 2025ರಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಕಳೆದ ತಿಂಗಳ ಆರಂಭದಲ್ಲಿ ಬಿಎಂಆರ್‌ಸಿಎಲ್ ಮಾಹಿತಿ ನೀಡಿತ್ತು. ಮಾರ್ಗದಲ್ಲಿ ವಾಣಿಜ್ಯ ಸಂಚಾರ ಪ್ರಾರಂಭಿಸಲು ರೈಲು ಬೋಗಿಗಳಿಗೆ ಕಾಯಲಾಗುತ್ತಿದೆ. ಎರಡನೇ ಪ್ರೊಟೊಟೈಪ್‌ ರೈಲು ಜನವರಿ 15ಕ್ಕೆ ಹೆಬ್ಬಗೋಡಿಗೆ ತಲುಪಲಿದೆ ಎನ್ನುವ ಮಾಹಿತಿ ಇತ್ತೀಚೆಗಷ್ಟೇ ಲಭ್ಯವಾಗಿತ್ತು.

ಹಳದಿ ಮಾರ್ಗವು 18.82 ಕಿಮೀ ಉದ್ದವಿದ್ದು, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 16 ನಿಲ್ದಾಣಗಳನ್ನು ಒಳಗೊಂಡಿದೆ. ವಿಶೇಷವಾಗಿ ಬೆಂಗಳೂರು ದಕ್ಷಿಣದ ಇನ್ಫೋಸಿಸ್ ಮತ್ತು ಬಯೋಕಾನ್‌ನಂತಹ ಪ್ರಮುಖ ಕಂಪನಿಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಸಂಪರ್ಕ ಸಾಧಿಸುವ ನಿರೀಕ್ಷೆಯಿದೆ. ಈ ಮಾರ್ಗವು ಆರ್‌ವಿ ರಸ್ತೆ ನಿಲ್ದಾಣದಲ್ಲಿ ಹಸಿರು ಮತ್ತು ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಪಿಂಕ್ ಲೈನ್‌ನೊಂದಿಗೆ ಸಂಪರ್ಕ ಸಾಧಿಸಲಿದೆ.

ಹಳದಿ ಮಾರ್ಗದ ಕಾಮಗಾರಿಯಲ್ಲಿ ಹಲವಾರು ಹಿನ್ನೆಡೆಗಳಾಗಿವೆ. 2019ರಲ್ಲಿ, CRRC BMRCLಗೆ 216 ಮೆಟ್ರೋ ಕೋಚ್‌ಗಳನ್ನು ಪೂರೈಸಲು ₹1,578 ಕೋಟಿ ಗುತ್ತಿಗೆಯನ್ನು ನೀಡಲಾಯಿತು. ಆದರೆ, ಒಪ್ಪಂದದ ಪ್ರಕಾರ, ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವಲ್ಲಿ ಕಂಪನಿಯು ಹಿನ್ನಡೆ ಕಂಡಿತು.

ಇತ್ತೀಚೆಗೆ, ಸಿಆರ್‌ಆರ್‌ಸಿಯು ಕೋಲ್ಕತ್ತಾ ಮೂಲದ ಟಿಟಾಗಢ್ ವ್ಯಾಗನ್ಸ್‌ ಸಹಭಾಗಿತ್ವದಲ್ಲಿ ಮೆಟ್ರೋಗೆ ಉಳಿದ ಕೋಚ್‌ಗಳನ್ನು ತಲುಪಿಸಿದೆ. ಈ ಪಾಲುದಾರಿಕೆಯು ಕೆಲವು ಕಳವಳಗಳನ್ನು ಕಡಿಮೆಗೊಳಿಸಿದೆ. ಆದರೂ, ಯೋಜನೆಗೆ ಮೀಸಲಿಟ್ಟ ಸಮಯ ತುಂಬಾ ವಿಳಂಬವಾಗಿರುವುದು ಇದೀಗ ಗಮರ್ಹವಾಗಿದೆ.

ಈ ವರ್ಷ ಮೆಟ್ರೋದ ಒಂದು ಮಾರ್ಗವನ್ನು ಮಾತ್ರ ಉದ್ಘಾಟಿಸಲಾಯಿತು. ನಾಗಸಂದ್ರ-ಮಾದಾವರವರೆಗಿನ ಹಸಿರು ಮಾರ್ಗದ 3.14 ಕಿಲೋ ಮೀಟರ್ ವಿಸ್ತರಣೆಯ ಮಾರ್ಗದಲ್ಲಿ ನವೆಂಬರ್ 7, 2024ರಂದು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಮಾರ್ಗದ ನಿರ್ಮಾಣವು 2017ರಲ್ಲಿ ಪ್ರಾರಂಭವಾಗಿದ್ದು, ಹಲವಾರು ಹಿನ್ನಡೆಗಳು ಆದವು. ಅಂತಿಮವಾಗಿ 7 ವರ್ಷಗಳ ನಂತರ ಪೂರ್ಣಗೊಂಡಿತು.

ಮತ್ತೊಂದೆಡೆ ಡಿಸೆಂಬರ್ 6, 2024ರಂದು ಕರ್ನಾಟಕ ರಾಜ್ಯ ಸಚಿವ ಸಂಪುಟವು ರೆಡ್ ಲೈನ್‌ನ ಹಂತ 3Aಗೆ ಅನುಮೋದನೆ ನೀಡಿದೆ. ಈ ಹಂತವು ಆಗ್ನೇಯದಲ್ಲಿರುವ ಸರ್ಜಾಪುರ-ಉತ್ತರದ ಹೆಬ್ಬಾಳಕ್ಕೆ ಸಂಪರ್ಕಿಸುತ್ತದೆ. ಪಿಂಕ್ ಲೈನ್ ಅನ್ನು 2025ರಲ್ಲಿ ತೆರೆಯಲು ಯೋಜಿಸಲಾಗಿದೆ. ಮೊದಲ ಹಂತ 7.5-ಕಿಲೋ ಮೀಟರ್‌ವರೆಗೂ ಸೆಪ್ಟೆಂಬರ್ 2025ರ ವೇಳೆಗೆ ಕಾರ್ಯಾಚರಣೆಯನ್ನು ನಿಗದಿಪಡಿಸಲಾಗಿದೆ. ಎರಡನೇ ಹಂತವು 13.8 ಕಿಲೋ ಮೀಟರ್ ಸುರಂಗ ಮಾರ್ಗವನ್ನು ಒಳಗೊಂಡಿದ್ದು, ಜೂನ್ 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+