ಆದಿಶೇಷನ ಕೃಪೆಗೆ ಪಾತ್ರರಾಗಿ, ನಾಗಪಂಚಮಿ ದಿನದಂದು ಆಶ್ಲೇಷ ಬಲಿ
ಬೆಂಗಳೂರು, ಆಗಸ್ಟ್ 07: ಹಬ್ಬಗಳ ಮಾಸ ಶ್ರಾವಣ ಇನ್ನೇನು ಆರಂಭವಾಗುತ್ತಿದೆ. ನಾಡಿಗೆ ದೊಡ್ಡದು ಎಂದು ಕರೆಸಿಕೊಳ್ಳುವ ನಾಗರ ಪಂಚಮಿ ಆಗಸ್ಟ್ 16 ಗುರುವಾರ ಎದುರಾಗಿದೆ.
ಆಚಾರ್ಯ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ನಾಗರ ಪಂಚಮಿ ನಿಮಿತ್ತ ಆಶ್ಲೇಷಾ ಬಲಿ, ನಾಗ ತನು ತರ್ಪಣ, ನಾಗ ಸುಬ್ರಹ್ಮಣ್ಯಾರಾಧನೆ ಆಯೋಜಿಸಲಾಗಿದೆ. ಆಸ್ತಿಕರು ಆದಿಶೇಷನ ಕೃಪೆಗೆ ಪಾತ್ರರಾಗಲು ಇಲ್ಲಿದೆ ಸದಾವಕಾಶ.

ಬೆಳಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದೆ. ಭಕ್ತರು ನಾಗ ದೇವತೆಯ ಕೃಪೆಗೆ ಪಾತ್ರರಾಗಲು ನೋಂದಣಿ ಮಾಡಿಕೊಳ್ಳಬಹುದು.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂದರಂತೆ ಆರಂಭವಾಗುತ್ತವೆ.
ನಾಗರ ಪಂಚಮಿ ಹಬ್ಬ ವನ್ನು ಭಾರತದ ಹಲವು ಭಾಗಗಳಲ್ಲಿ ಹಿಂದುಗಳು ಆಚರಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ಮತ್ತಷ್ಟು ಮಹತ್ವದ ಸ್ಥಾನವಿದೆ. ಈ ದಿನ ಹಾವಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ ಶೇಷ ನಾಗ ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಸ್ತುತಿಸಲಾಗುತ್ತದೆ.












Click it and Unblock the Notifications