Bengaluru-Mysuru Expressway: ಸವಾರರೇ ಗಮನಿಸಿ, ಹೆಚ್ಚುವರಿ ಸುರಕ್ಷತಾ ಕ್ರಮಗಳ ಅಳವಡಿಕೆ, ಎಲ್ಲೆಲ್ಲಿ ಏನೇನು? ಮಾಹಿತಿ
ಬೆಂಗಳೂರು, ನವೆಂಬರ್ 16: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bengaluru-Mysuru Expressway) ಹೆದ್ದಾರಿಯಲ್ಲಿ ಅಪಘಾತಗಳು ಒಂದು ಹಂತಕ್ಕೆ ಕಡಿಮೆ ಆಗಿವೆ. ಹೀಗಿದ್ದರು ಪ್ರಯಾಣಿಕರು, ವಾಹನ ಸವಾರರ ಸುರಕ್ಷತಾ ದೃಷ್ಟಿಯಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಈ ರಸ್ತೆಯಲ್ಲಿ ಅಳವಡಿಸಲು ಮುಂದಾಗಿದೆ.
ಕರ್ನಾಟಕ ರಾಜ್ಯದಲ್ಲಿ NH-275 ಹೆದ್ದಾರಿ ಇದು ಉದ್ಯಾನ ನಗರಿಗೂ ಮತ್ತು ಅರಮನೆ ನಗರಿಗೂ ಸಂಪರ್ಕ ಕಲ್ಪಿಸಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರು-ನಿಡಗಟ್ಟ-ಮೈಸೂರು ವಿಭಾಗದಲ್ಲಿ 18 ಕಿಲೋ ಮೀಟರ್‌ನಿಂದ 135.304 ಕಿಲೋ ಮೀಟರ್‌ವರೆಗೆ ಹೆಚ್ಚುವರಿ ಸಿಗ್ನಲಿಂಗ್‌ಗಳನ್ನು (ಸಂಕೇತ) ಹಾಗೂ ಇತರೆ ರಸ್ತೆ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಿದೆ.

ಪ್ರಧಾನಿ ಮೋದಿಯವರು ಈ ಎಕ್ಸ್‌ಪ್ರೆಸ್ ಅನ್ನು ಲೋಕಾರ್ಪಣೆ ಮಾಡಿದ್ದರು. ಆದರೆ ಈ ಹೆದ್ದಾರಿಯಲ್ಲಿ ಅತೀ ವೇಗದ ಚಾಲನೆ ಗಮನಾರ್ಹ ಸಮಸ್ಯೆಯಾಗಿದೆ. ಇದರಿಂದ ಸವಾರರು ಸೇರಿದಂತೆ ಸಾರ್ವಜನಿಕರ ಜೀವಕ್ಕೆ ಅಪಾಯ ಸಂಭವವಿದೆ. ಹೀಗಾಗಿ ಅವರ ಕಾಳಜಿ ದೃಷ್ಟಿಯಿಂದ ಮತ್ತು ಈ ಹೆದ್ದಾರಿಯಲ್ಲಿ ಸುರಕ್ಷಿತ ಚಾಲನೆ ಖಚಿತಪಡಿಸಿಕೊಳ್ಳಲು ಹೆದ್ದಾರಿ ಪ್ರಾಧಿಕಾರ ಅಗ್ರತ್ಯ ಕ್ರಮ ಕೈಗೊಳ್ಳುತ್ತಿದೆ.
ಸರ್ವೀಸ್ ರಸ್ತೆಗಳಲ್ಲಿ ಮನ ಬಂದಂತೆ ಓಡಾಟ
ಈಗಾಗಲೇ ಪ್ರಾಧಿಕಾರವು ಸುರಕ್ಷತೆಗೆ ಅಪಾಯ ಉಂಟುಮಾಡುವ ಕೆಲವು ವಾಹನಗಳಿಗೆ ಈ ಎಕ್ಸ್‌ಪ್ರೆಸ್ ಅನ್ನು ನಿಷೇಧಿಸಿದೆ.
ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ಮೇಲು ಸೇತುವೆ (ROB)ಗಳು ಕಾಣೆಯಾಗಿವೆ. ಹೀಗಾಗಿ ಪಾದಚಾರಿಗಳು ಸುರಕ್ಷಿತವಾಗಿ ಓಡಾಡಲು ಅನುಕೂಲವಾಗುವಂತೆ ವಿವಿಧ ಸ್ಥಳಗಳಲ್ಲಿ 24 ಅಡಿ ಮೇಲ್ಸೇತುವೆ ನಿರ್ಮಿಸಲಿದೆ.

ಮೈಸೂರು ಬೆಂಗಳೂರು ಹೆದ್ದಾರಿಯ ಸರ್ವೀಸ್ ರಸ್ತೆಗಳನ್ನು ನಿರ್ಮೀಸಿದೆ. ಇಲ್ಲಿ ಕೆಲವು ಸವಾರರು ಮನ ಬಂದಂತೆ ಸಂಚರಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಬಿಡದಿ, ರಾಮನಗರ ಮತ್ತು ಚನ್ನಪಟ್ಟಣ ಮತ್ತು ಮಂಡ್ಯದಲ್ಲಿ ರೈಲ್ವೆ ಓವರ್ ಬ್ರಿಡ್ಜ್‌ಗಳ (ಆರ್‌ಒಬಿ) ನಿರ್ಮಾಣವು ಈ ಸರ್ವಿಸ್ ರಸ್ತೆಯಲ್ಲಿ ಪೂರ್ಣಗೊಂಡಿಲ್ಲ. ಇದು ಆದರೆ ಅಡತಡೆ ಇಲ್ಲದೇ ಹೋಗಬಹುದು.
ಪ್ರಸ್ತುತ, ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿನ ವೇಗದ ಮಿತಿಯು ಪ್ರತಿ ಗಂಟೆ 80 ಕಿಲೋ ಮೀಟರ್ ನಿಂದ 100 ಕಿಮೀಗೆ ಇದೆ. ಸವಾರರು ಈ ವೇಗದ ಮೀತಿ ಇನ್ನಷ್ಟು ಹೆಚ್ಚಿಸುವಂತೆಯೂ ಬಯಸಿದ್ದಾರೆ.
ಹೆದ್ದಾರಿ ಪ್ರಾಧಿಕಾರ ಕೈಗೊಳ್ಳುವ ಕ್ರಮಗಳು ಏನೇನು?
* ಹೆದ್ದಾರಿಯಲ್ಲಿ ಯಾವುದೇ ಪಾರ್ಕಿಂಗ್/ನೋ-ಸ್ಟ್ಯಾಂಡಿಂಗ್ ಮತ್ತು ನೋ-ಸ್ಟಾಪ್ಪಿಂಗ್ ಸೈನ್ ಬೋರ್ಡ್‌ಗಳನ್ನು ಅಳವಡಿಸಲಿದೆ.
* ಶೋಲ್ಡರ್ ಮತ್ತು ಮೀಡಿಯನ್ ಮೌಂಟೆಡ್ ಸ್ಪೀಡ್ ಲಿಮಿಟ್ ಸೈನ್ ಬೋರ್ಡ್‌ಗಳು ಕಂಡು ಬರಲಿವೆ.
* ಗ್ಯಾಂಟ್ರಿ ಸ್ಪೀಡ್ ಲಿಮಿಟ್ ಸೈನ್ ಬೋರ್ಡ್ ಜೊತೆಗೆ ಎತ್ತರದ ಮಿತಿ ಎಷ್ಟಿರಬೇಕು ಎಂದು ಸೂಚಿಸುವ ಫಲಕಗಳು ಇಲ್ಲಿ ಅಳವಡಿಕೆ ಆಗಲಿವೆ.
* ತುರ್ತು ಸಹಾಯವಾಣಿ ಸಂಖ್ಯೆ (2400 x 1800mm) ನಾಮಫಲಕ ಅಳವಡಿಕೆ.
* ಹೆವಿ ವೆಹಿಕಲ್ ಗಳಿಗೆ ಅಗತ್ಯ ಸೂಚನೆಗಳ ಫಲಕ
* ತುರ್ತು (SOS) ಕರೆಯ ಕಾಲ್ ಬಾಕ್ಸ್ ಸೈನ್ ಬೋರ್ಡ್‌ಗಳ ನಿಬಂಧನೆ (600 x 900) ಅಳವಡಿಕೆ
* ದ್ವಿಚಕ್ರ ವಾಹನ ಮತ್ತು ಆಟೋ-ರಿಕ್ಷಾ ನಿಷೇಧಿತ ಸೂಚನಾ ಫಲಕ
* ಕೆಲವು ಭಾಗದಲ್ಲಿ (ಕಾನ್ಕೇವ್) 650 ಮೀಟರ್ ಗಿಂತ ಕಡಿಮೆ ವಕ್ರಾಕೃತಿಗಳಲ್ಲಿ ಮೂರು ತಡೆಗೋಡೆ ನಿರ್ಮಾಣ.
* ಸರ್ವಿಸ್ ರಸ್ತೆಗಳಲ್ಲಿ ಜಂಕ್ಷನ್ ಸೂಚನಾ ಫಲಕ.
* ಸರ್ವಿಸ್ ರಸ್ತೆಗಳಲ್ಲಿ ಅಲ್ಲಲ್ಲಿ ವೇಗದ ಮಿತಿ ಜ್ಞಾಪಿಸುವ ಸೂಚನೆಗಳು
* ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ತುರ್ತು ಪ್ರವೇಶ/ನಿರ್ಗಮನದ ಗುರುತು ಹಾಕಲಾಗುವುದು.












Click it and Unblock the Notifications