ಬೆಂಗಳೂರು - ಮೈಸೂರು ಕಾರಿಡಾರ್ ನನ್ನದೇ ಪ್ರಯತ್ನ ಎಂದ ಪ್ರತಾಪ್ ಸಿಂಹ ಅವರಿಗೊಂದು ಪತ್ರ
ಬೆಂಗಳೂರು - ಮೈಸೂರು ರಸ್ತೆಯ ನಿರ್ಮಾಣದ ಹಿನ್ನಲೆಯ ಕುರಿತು ಒಂದು ಟಿಪ್ಪಣಿ:
ಬೆಂಗಳೂರು ಮತ್ತು ಮೈಸೂರಿನ ರಸ್ತೆಯ ನಿರ್ಮಾಣವನ್ನು ತಾನೇ ಮಾಡುತ್ತಿರುವಂತೆ ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವ ಸಂಸದ ಪ್ರತಾಪ್ ಸಿಂಹ ಅವರೇ,
ಬೆಂಗಳೂರು ಮತ್ತು ಮೈಸೂರು ರಸ್ತೆಯ ಹಿಂದಿನ ನೈಜ ರುವಾರಿಗಳು ಇವರು, ನೀವಲ್ಲಾ. ಅವರೆಂದರೆ,
ಆಸ್ಕರ್ ಫರ್ನಾಂಡೀಸ್
ಸಿದ್ದರಾಮಯ್ಯ
ಡಾ.ಹೆಚ್.ಸಿ.ಮಹದೇವಪ್ಪ
ನಿತಿನ್ ಗಡ್ಕರಿ ಅವರಾಗಿದ್ದಾರೆ.
ನೀವೇನಿದ್ದರೂ ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳ ಹೆಸರು ಬದಲಾವಣೆ ಮಾಡುವುದಕ್ಕೆ ಮಾತ್ರ ಸರಿ ಅಷ್ಟೇ.

ಬೆಂಗಳೂರು - ಮೈಸೂರು ನಡುವಿನ ರಸ್ತೆಯ ನಿರ್ಮಾಣದ ಹಿನ್ನಲೆ ಈ ಕೆಳಕಾಣಿಸಿದಂತಿದ್ದು. ಈ ಮಾತಿಗೆ ಸರಿಯಾದ ದಾಖಲೆಗಳು ಕೂಡಾ ಇವೆ ಎಂಬುದನ್ನೂ ನೀವು ತಿಳಿಯಬೇಕು ಎಂದು ಅಪೇಕ್ಷಿಸುತ್ತೇನೆ.
2013- 2014 ನೇ ಸಾಲಿನಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಸಾರಿಗೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡೀಸ್ ಅವರು 1,882 ಕಿಲೋ ಮೀಟರ್ ಉದ್ದದ ರಾಜ್ಯ ಮಟ್ಟದ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡಿಸಿದ ಪರಿಣಾಮವಾಗಿ ಸಾಕಷ್ಟು ರಸ್ತೆಗಳು ಉನ್ನತ ದರ್ಜೆಯ ಗುಣಮಟ್ಟಕ್ಕೆ ಬದಲಾಗುವಂತಹ ಅವಕಾಶ ಸೃಷ್ಟಿಯಾಯಿತು.
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಮಗಾರಿಗಳು ಆರಂಭಗೊಂಡ ಬಳಿಕ ಕೇಂದ್ರದಲ್ಲಿ ಸರ್ಕಾರವು ಬದಲಾದ ಕಾರಣ ನಂತರ ಸಾರಿಗೆ ಸಚಿವ ಸ್ಥಾನವನ್ನು ವಹಿಸಿಕೊಂಡ ನಿತಿನ್ ಗಡ್ಕರಿಯವರು ಹಲವು ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದ್ದು ಈ ಪೈಕಿ ಬೆಂಗಳೂರು ಮೈಸೂರು ಹಾಗೂ ಬಂಟ್ವಾಳ ಮಾರ್ಗದ ರಸ್ತೆಯೂ ಕೂಡಾ ಪ್ರಮುಖವಾಗಿರುವಂತದ್ದು ಎಂದು ಈ ವೇಳೆ ನಾನು ಸ್ಮರಿಸುತ್ತೇನೆ.
ನಮ್ಮ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ಪಡೆದಿದ್ದ ಎಷ್ಟೋ ರಸ್ತೆಗಳು ಈಗಲೂ ಸಹ ಕಾಮಗಾರಿ ಹಂತದಲ್ಲಿದ್ದು ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ವಿಶ್ವಮಟ್ಟದ ಮಾನ್ಯತೆಯನ್ನು ಆಗಲೇ ಪಡೆದುಕೊಂಡಿತ್ತು ಎಂದು ಹೇಳಲು ಸಂತಸ ಎನಿಸುತ್ತದೆ.
ಕೋಮುವಾದಿ ಜನರು ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳ ಬಗ್ಗೆ ಎಷ್ಟೇ ಸುಳ್ಳು ಹಬ್ಬಿಸಬಹುದು. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಲಾದ ಅಭಿವೃದ್ಧಿ ಕೆಲಸಗಳು ಮತ್ತು ಅದನ್ನು ಸಾಕ್ಷೀಕರಿಸುವ ದಾಖಲೆಗಳು ಮಾತ್ರ ಸುಳ್ಳಾಡುವುದಿಲ್ಲ ಎಂಬುದನ್ನು ನಿಮ್ಮ ಆದಿಯಾಗಿ ಸುಳ್ಳು ಹೇಳಿಕೊಂಡು ತಿರುಗುವ ನಿಮ್ಮ ಬಿಜೆಪಿ ನಾಯಕರೆಲ್ಲರೂ ಕೂಡಾ ಅರ್ಥ ಮಾಡಿಕೊಳ್ಳಬೇಕು ಎಂದು ಈ ಮೂಲಕ ತಿಳಿಸಲು ಬಯಸುತ್ತೇನೆ!












Click it and Unblock the Notifications