ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು 10 ಪಥದ ರಸ್ತೆ ಯಾವಾಗ ಪೂರ್ಣ?

|
Google Oneindia Kannada News

ಬೆಂಗಳೂರು, ಮಾರ್ಚ್ 17; ಬೆಂಗಳೂರು-ಮೈಸೂರು ನಡುವಿನ 10 ಪಥದ ರಸ್ತೆ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ? ಎಂಬುದು ಉಭಯ ನಗರಗಳ ಜನರ ಪ್ರಶ್ನೆಯಾಗಿದೆ. ಈ ಯೋಜನೆ ಪೂರ್ಣಗೊಂಡರೆ ಮೈಸೂರು-ಬೆಂಗಳೂರು ಪ್ರಯಾಣದ ಅವಧಿ 90 ನಿಮಿಷಕ್ಕೆ ಇಳಿಕೆಯಾಗಲಿದೆ.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಈ ಯೋಜನೆ ಕುರಿತು ಪ್ರಶ್ನಿಸಿದರು. ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಈ ಕುರಿತು ಉತ್ತರ ನೀಡಿದ್ದಾರೆ. "2022ರ ಡಿಸೆಂಬರ್ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ" ಎಂದು ಸಚಿವರು ಹೇಳಿದರು.

ರಾಜ್ಯದ 5 ರಾಷ್ಟ್ರೀಯ ಹೆದ್ದಾರಿಗಳಿಗೆ ಶಂಕುಸ್ಥಾಪನೆ ಮಾಡಿದ ಗಡ್ಕರಿ ರಾಜ್ಯದ 5 ರಾಷ್ಟ್ರೀಯ ಹೆದ್ದಾರಿಗಳಿಗೆ ಶಂಕುಸ್ಥಾಪನೆ ಮಾಡಿದ ಗಡ್ಕರಿ

"ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು 2022ರ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ. ಎರಡು ಪ್ಯಾಕೇಜ್‌ಗಳಲ್ಲಿ ಈ ಹೆದ್ದಾರಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ" ಎಂದು ಸಚಿವರು ವಿವರಣೆ ನೀಡಿದರು.

ಈ ಕಾಮಗಾರಿ ಮುಗಿದರೆ ಮೈಸೂರು-ಬೆಂಗಳೂರು ಪ್ರಯಾಣ 90 ನಿಮಿಷ!ಈ ಕಾಮಗಾರಿ ಮುಗಿದರೆ ಮೈಸೂರು-ಬೆಂಗಳೂರು ಪ್ರಯಾಣ 90 ನಿಮಿಷ!

Bengaluru Mysuru road

"ಬೆಂಗಳೂರು-ನಿಡಘಟ್ಟ ನಡುವಿನ ಒಂದನೇ ಪ್ಯಾಕೇಜ್‌ 56.20 ಕಿ. ಮೀ. ಒಳಗೊಂಡಿದೆ. ನಿಡಘಟ್ಟ-ಮೈಸೂರು ನಡುವಿನ ಎರಡನೇ ಪ್ಯಾಕೇಜ್ 61.104 ಕಿ. ಮೀ. ಯಾಗಿದೆ" ಎಂದು ಸಚಿವರು ಕಲಾಪದಲ್ಲಿ ಉತ್ತರ ಕೊಟ್ಟರು.

ಹುಬ್ಬಳ್ಳಿ-ಧಾರವಾಡ ಬೈಪಾಸ್ 6 ಪಥದ ರಸ್ತೆ ನಿರ್ಮಾಣಕ್ಕೆ ಚಾಲನೆ ಹುಬ್ಬಳ್ಳಿ-ಧಾರವಾಡ ಬೈಪಾಸ್ 6 ಪಥದ ರಸ್ತೆ ನಿರ್ಮಾಣಕ್ಕೆ ಚಾಲನೆ

1ನೇ ಹಂತದ ಕಾಮಗಾರಿ; "ಬೆಂಗಳೂರು-ನಿಡಘಟ್ಟ ನಡುವಿನ 56.20 ಕಿ. ಮೀ. ಒಂದನೇ ಹಂತದ ಕಾಮಗಾರಿಯನ್ನು 2022ರ ಮೇ 2ರೊಳಗೆ ಮುಕ್ತಾಯಗೊಳಿಸುವಂತೆ ಸೂಚಿಸಲಾಗಿತ್ತು. ಈ ಪ್ಯಾಕೇಜ್‌ಗೆ 2190 ಕೋಟಿಗೆ ಅನುಮೋದನೆ ನೀಡಲಾಗಿತ್ತು. ಸಿವಿಲ್ ಕಾಮಗಾರಿಗೆ 875.90 ಕೋಟಿ ಮತ್ತು ಭೂಸ್ವಾಧೀನಕ್ಕೆ 2018.75 ಕೋಟಿ ವೆಚ್ಚವಾಗಿದೆ" ಎಂದು ಸಚಿವರು ವಿವರಣೆ ನೀಡಿದರು.

"ನಿಡಘಟ್ಟ-ಮೈಸೂರು 2ನೇ ಹಂತದ ಕಾಮಗಾರಿಯನ್ನು 2022 ಸೆಪ್ಟೆಂಬರ್ 7ಕ್ಕೆ ಮುಕ್ತಾಯಗೊಳಿಸುವಂತೆ ಗಡುವು ನೀಡಲಾಗಿತ್ತು. ಕೋವಿಡ್ ಪರಿಸ್ಥಿತಿ ಮತ್ತು ಭೂ ಸ್ವಾಧೀನದ ಕಾರಣ ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ" ಎಂದರು.

ಬೆಂಗಳೂರು-ಮೈಸೂರು 2ನೇ ಹಂತದ ಪ್ಯಾಕೇಜ್‌ ಕಾಮಗಾರಿಗೆ 2283 ಕೋಟಿ ರೂ.ಗೆ ಅನುಮೋದನೆ ನೀಡಲಾಗಿತ್ತು. ಆದರೆ ಸಿವಿಲ್ ಕಾಮಗಾರಿಗೆ 882.66 ಕೋಟಿ ಮತ್ತು ಭೂ ಸ್ವಾಧೀನಕ್ಕೆ 1278.13 ಕೋಟಿ ರೂ. ವೆಚ್ಚವಾಗಿದೆ.

ದಸರಾಗೆ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು; ಬೆಂಗಳೂರು-ಮೈಸೂರು 10 ಪಥದ ರಸ್ತೆ ಕಾಮಗಾರಿ 2022ರ ಮೈಸೂರು ದಸರಾ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು. ಆದರೆ ಈಗ ಲೋಕೋಪಯೋಗಿ ಸಚಿವರೇ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಪ್ರಸ್ತುತ ಮೈಸೂರು-ಬೆಂಗಳೂರು ನಡುವಿನ ಅಂತರ 143 ಕಿ. ಮೀ. ಆಗಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಅಂತರ 118 ಕಿ. ಮೀ.ಗೆ ಇಳಿಕೆಯಾಗಲಿದೆ. ಅಲ್ಲದೇ ಉಭಯ ನಗರಗಳ ನಡುವೆ 90 ನಿಮಿಷದ ಅವಧಿಯಲ್ಲಿ ಸಂಚಾರ ನಡೆಸಬಹುದಾಗಿದೆ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಯೋಜನೆ ಕುರಿತು ಮಾತನಾಡಿದ್ದು, "ಸದ್ಯ ಮೈಸೂರು-ಬೆಂಗಳೂರು ಪ್ರಯಾಣಿಸಲು ಸುಮಾರು 3 ಗಂಟೆ ಸಮಯ ಹಿಡಿಯುತ್ತದೆ. ದಶಪಥ ರಸ್ತೆ ಪ್ರಯಾಣದಲ್ಲಿ ಇದು 90 ನಿಮಿಷಕ್ಕೆ ಕಡಿತಗೊಳ್ಳಲಿದೆ. ಯಾವುದೇ ಅಡಚಣೆಯಿಲ್ಲದೇ ಕ್ಷಿಪ್ರಗತಿಯಲ್ಲಿ ಸಾಗಬಹುದು. ಈ ಯೋಜನೆ ಜನರಿಗೆ ವರದಾನವಾಗಲಿದೆ" ಎಂದು ಹೇಳಿದ್ದಾರೆ.

10 ಪಥದ ಎಕ್ಸ್‌ಪ್ರೆಸ್ ವೇನಲ್ಲಿ 9 ಬೃಹತ್ ಸೇತುವೆ, 44 ಸಣ್ಣ ಸೇತುವೆ, 8.7 ಕಿ.ಮೀ. ಉದ್ದದ ಎಲಿ ವೇಟೆಡ್ ಹೈವೇ, 4 ರೈಲು ಮೇಲ್ಸೇತುವೆ, 28 ವೆಹಿಕುಲರ್ ಅಂಡರ್‌ಪಾಸ್, 13 ಪಾದಚಾರಿಗಳ ಅಂಡರ್‌ ಪಾಸ್ ಇರಲಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರು 3 ಟೋಲ್ ಪ್ಲಾಜಾಗಳಲ್ಲಿ ಟೋಲ್ ಪಾವತಿ ಮಾಡಬೇಕು.

Recommended Video

ಇಲ್ನೋಡಿ..ಹುಟ್ಟಿದ ಎರಡೇ ಗಂಟೆಯಲ್ಲಿ‌ ಮಗು ಆಸ್ಪತ್ರೆಯಿಂದ ಹೇಗೆ ನಾಪತ್ತೆಯಾಯ್ತು ಅಂತಾ..| Oneindia Kannada

ರಸ್ತೆಯ ವಿಶೇಷತೆಗಳು; ಬೆಂಗಳೂರು-ಮೈಸೂರು 10 ಪಥದ ರಸ್ತೆ ರಾಜ್ಯದ ಮೊದಲ ಆಕ್ಸಸ್ ಕಂಟ್ರೋಲ್ಡ್ ಹೈವೇ ಎಂಬ ಹೆಗ್ಗಳಿಕೆ ಹೊಂದಲಿದೆ. ಮೈಸೂರಿನಿಂದ ಬೆಂಗಳೂರಿನವರೆಗೆ ರಸ್ತೆಯ ಎರಡು ಭಾಗದಲ್ಲೂ 6 ಅಡಿ ಫೆನ್ಸಿಂಗ್ ಹಾಕಲಾಗಿರುತ್ತದೆ. ಎಲ್ಲೆಂದರಲ್ಲಿ ಸರ್ವೀಸ್‌ ರಸ್ತೆಗಳಿಗೆ ವಾಹನ ನುಗ್ಗುವಂತಿಲ್ಲ.

English summary
In legislative council PWD minister C. C. Patil said that Bengaluru – Mysuru 10 lale project will complete in 2022 December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X