ಬೆಂಗಳೂರು ಭಾರತದಲ್ಲೇ ವಾಸಯೋಗ್ಯ ನಗರ
ವಾರಣಾಸಿ, ಜ. 23: ಮುಂಬೈ ಮತ್ತು ಚೆನ್ನೈಗೆ ಹೋಲಿಸಿದರೆ ಭಾರತದಲ್ಲೇ ಬೆಂಗಳೂರು ವಾಸಯೋಗ್ಯ ಮಹಾನಗರ ಎಂದು ಸಮೀಕ್ಷೆಯೊಂದು ಹೇಳಿದೆ. ವಿಶ್ವದ ವಾಸಯೋಗ್ಯ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 171 ನೇ ಸ್ಥಾನ. ಉಳಿದಂತೆ ಚೆನ್ನೈ ಮತ್ತು ಮುಂಬೈ ಎರಡೂ 182 ನೇ ಸ್ಥಾನವನ್ನು ಹಂಚಿಕೊಂಡಿವೆ.
ನವದೆಹಲಿಯ ವಾಯುಮಾಲಿನ್ಯ ಉಳಿದೆಲ್ಲಡಗಿಂತ ಜಾಸ್ತಿಯಾಗಿದ್ದು ಭಾರತದಲ್ಲೇ ಅತ್ಯಂತ ಕೆಟ್ಟ ಸ್ಥಿತಿ ಹೊಂದಿದೆ. ಬೀಜಿಂಗ್ ನಂತರ ದೆಹಲಿಯೇ ಏಷ್ಯಾದಲ್ಲಿ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ನಗರವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.[ಹಾಸನದಲ್ಲಿ ಅತಿ ಕಡಿಮೆ ವಾಯುಮಾಲಿನ್ಯ]

ವಾಸಯೋಗ್ಯ ನಗರಗಳ ಕುರಿತಾಗಿ ಸರ್ವೆ ನಡೆಸಿದ ಅಂತಾರಾಷ್ಟ್ರೀಯ ಮಟ್ಟದ ಮಾಹಿತಿ ಮತ್ತು ತಂತ್ರಜ್ಙಾನ ಸಂಸ್ಥೆ ಇಸಿಎ, ಸಿಂಗಪುರ್ ಅತ್ಯಂತ ಕಡಿಮೆ ಮಾಲಿನ್ಯ ಹೊಂದಿರುವ ನಗರ. ಇದರ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸಿಡ್ನಿ ಮತ್ತು ಅಡಿಲೇಡ್ ಇವೆ.
ಉತ್ತಮ ವಾತಾವರಣ, ನಾಗರಿಕರಿಗೆ ನೀಡಿರುವ ಸೌಲಭ್ಯಗಳು, ಅಪರಾಧ ಪ್ರಕರಣ, ಆರೋಗ್ಯ ಸೇವೆಗಳು ಎಲ್ಲವನ್ನು ಲೆಕ್ಕ ಹಾಕಿದಾಗ ಸಿಂಗಪುರ್ ಮೊದಲ ಸ್ಥಾನ ಗಳಿಸಿಕೊಂಡಿದೆ ಎಂದು ಇಸಿಎ ಏಷ್ಯಾ ರಿಜಿನಲ್ ಡೈರೆಕ್ಟರ್ ಲೀ ಕ್ವಾನೆ ತಿಳಿಸಿದ್ದಾರೆ.
ಪ್ರಮುಖವಾಗಿ ವಾಯುಮಾಲಿನ್ಯವನ್ನು ಗಣನೆಗೆ ತೆಗೆದುಕೊಂಡಿರುವ ಸಮೀಕ್ಷೆ ಭಾರತದ ಮಟ್ಟಿಗೆ ಬೆಂಗಳೂರೇ ಉತ್ತಮ ಪರಿಸರ ಹೊಂದಿದ್ದು ವಾಸಯೋಗ್ಯವಾಗಿದೆ ಎಂದು ಹೇಳಿದೆ.












Click it and Unblock the Notifications