ಬೆಂಗಳೂರಿನ ಮೊಮೋಸ್‌ ವ್ಯಾಪಾರಿಯ ಒಂದು ದಿನದ ಆದಾಯ ಕೇಳಿದ್ರೆ ಶಾಕ್‌ ಗ್ಯಾರಂಟಿ

ಮೊದಲೆಲ್ಲ ಕೈತುಂಬಾ ಸಂಬಳ ಬರೋ ಕೆಲಸ ಸಿಕ್ಕರೆ ಸಾಕು ಎನ್ನುತ್ತಿದ್ರು. ಆದ್ರೆ ಈಗ ಕೆಲಸ ಎಲ್ಲ ಯಾಕೆ? ಈಗೆಲ್ಲ ಬಿಸಿನೆಸ್‌ ಮಾಡಿದ್ರೆ ನೆಮ್ದಿಯಾಗಿ ಇರ್ಬೋದು ಅಂತಿದ್ದಾರೆ. ಯಾಕಂದ್ರೆ ತಿಂಗಳಿಡೀ ದುಡಿಯುವ ಸಂಬಳವನ್ನ ಕೆಲವರು ಒಂದು ದಿನದಲ್ಲೇ ಸಂಪಾದನೆ ಮಾಡ್ತಿದ್ದಾರೆ. ಇದರ ಮುಂದೆ ಯಾವ ಸಾಫ್ಟ್‌ವೇರ್‌, ಐಟಿ ಕೆಲಸಗಳೂ ಬೇಡ ಅನ್ನೋ ಹಾಗಾಗಿದೆ. ಸದ್ಯ ಬೆಂಗಳೂರಿನ ಮೋಮೋ ಮಾರಾಟ ಮಾಡುವ ವ್ಯಾಪಾರಿಯೊಬ್ಬರ ದಿನದ ಆದಾಯ ಕೇಳಿ ಎಲ್ಲರೂ ಶಾಕ್‌ ಆಗಿದ್ದಾರೆ. ಕೆಲಸ ಬಿಟ್ಟು ನಡೀರಿ ಬಿಸಿನೆಸ್‌ ಮಾಡೋಣ ಅಂತಿದ್ದಾರೆ.

ಹೌದು, ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಬೆಂಗಳೂರಿನಲ್ಲಿ ಬೀದಿ ಬದಿಯ ಮೊಮೋಸ್‌ ಮಾರಾಟಗಾರನ ಆ ಒಂದು ದಿನದ ಆದಾಯ ಎಷ್ಟು ಎಂಬುದು ಬಹಿರಂಗವಾಗಿದೆ. ಇದನ್ನು ಕೇಳಿ ಎಲ್ಲರೂ ಒಮ್ಮೆ ಶಾಕ್‌ ಆಗಿದ್ದಾರೆ. ಇನ್‌ಸ್ಟಾಗ್ರಾಮ್ ಕಂಟೆಂಟ್‌ ಕ್ರಿಯೇಟರ್‌ವೊಬ್ಬರು ಆನ್‌ಲೈನ್‌ನಲ್ಲಿ ಹಂಚಿಕೊಂಡ ವಿಡಿಯೋ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಮೋಮೋಸ್‌ ಮಾರಾಟಗಾರ ತಿಂಗಳಿಗೆ ಸುಮಾರು ಬರೋಬ್ಬರಿ 31 ಲಕ್ಷ ರೂಪಾಯಿ ಗಳಿಸುತ್ತಾನೆ ಎಂದು ರಿವೀಲ್‌ ಆಗಿದೆ. ದಿನಕ್ಕೆ ಸುಮಾರು 1 ಲಕ್ಷ ರೂಪಾಯಿ ಆದಾಯ ಗಳಿಸುತ್ತಾನೆ. ಇದು ಸಾಮಾನ್ಯ ಬಿ.ಕಾಂ ಪದವೀಧರರ ಸಂಬಳಕ್ಕಿಂತ ಹೆಚ್ಚು ಎಂದು ಹೋಲಿಕೆ ಮಾಡಿದ್ದಾರೆ.

Bengaluru Momo Seller 1 Lakh Per Day Income Shocks Internet

ಕೆ.ಕೆ.ಮೊಮೊಸ್ ಎಂದು ಕರೆಯಲ್ಪಡುವ ಈ ಅಂಗಡಿಯು ಬೆಂಗಳೂರಿನಲ್ಲಿರುವ ಜನಪ್ರಿಯ ಆಹಾರ ಮಳಿಗೆ. ಇದು ರಸ್ತೆಬದಿಯಲ್ಲೇ ಇದ್ದರೂ ಈ ವ್ಯವಹಾರದಿಂದ ದಿನಕ್ಕೆ ಒಂದು ಲಕ್ಷ ರೂಪಾಯಿ ಲಾಭ ಮಾಡುತ್ತಿದೆ. ಆ ವೀಡಿಯೊದಲ್ಲಿ ಹೇಗೆ ಇಷ್ಟು ದೊಡ್ಡ ಮೊತ್ತವನ್ನು ಗಳಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ. ನಾನು ಗ್ರಾಹಕರಿಗೆ ಮೊಮೋಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಅವರು ಅದನ್ನು ಇಷ್ಟಪಟ್ಟರು. ಈ ಅಂಗಡಿ ನಿಜವಾಗಿಯೂ ಎಷ್ಟು ಪ್ರಸಿದ್ಧವಾಗಿದೆ ಎಂದು ನಂಬಲು ಸಾಧ್ಯವಾಗಲಿಲ್ಲ. ಕೇವಲ ಒಂದು ಗಂಟೆಯಲ್ಲೇ ನಾವು 118 ಪ್ಲೇಟ್ ಮೊಮೋಗಳನ್ನು ಮಾರಾಟ ಮಾಡಿದ್ದೇವೆ. ಒಂದು ಪ್ಲೇಟ್ ಮೋಮೋ ಬೆಲೆ 110 ರೂಪಾಯಿ. ನಾವು ಇಂದು ಸುಮಾರು 950 ಪ್ಲೇಟ್‌ ಮೊಮೋ ಮಾರಾಟ ಮಾಡಿದ್ದೇವೆ ಎಂದು ವಿವರಿಸಿದ್ದಾರೆ.

ಈ ಅಂಗಡಿಯು ಪ್ರತಿದಿನ ಸುಮಾರು 950 ಪ್ಲೇಟ್‌ಗಳನ್ನು ಮಾರಾಟ ಮಾಡುತ್ತದೆ. ಪ್ರತಿಯೊಂದರ ಬೆಲೆ ಸುಮಾರು 110 ರೂಪಾಯಿ ಆದರೆ ಒಂದೇ ದಿನದಲ್ಲಿ ಒಟ್ಟು ಒಂದು ಲಕ್ಷ ರೂಪಾಯಿಯಷ್ಟು ಆದಾಯವಾಗುತ್ತದೆ. ಮಾರಾಟಗಾರರ ಆದಾಯವು ಕಠಿಣ ಪರಿಶ್ರಮ ಮತ್ತು ದೀರ್ಘ ಸಮಯದಿಂದ ಬರುತ್ತದೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ನಾನು ಒಂದು ವರ್ಷದಲ್ಲಿ ಗಳಿಸುವಷ್ಟು ಕೂಡ ಇಲ್ಲ, ಒಂದು ಪ್ಲೇಟ್‌ಗೆ 110 ರೂಪಾಯಿ ಯಾರು ಕೊಟ್ಟು ಯಾರು ಖರೀದಿಸುತ್ತಿದ್ದಾರೆ? ಈಗೆಲ್ಲ ಪ್ರತಿಯೊಬ್ಬರೂ ಬಿಕಾಂ ಪದವೀಧರರಿಗಿಂತ ಹೆಚ್ಚು ಸಂಪಾದಿಸುತ್ತಾರೆ. ಒಂದು ಗಂಟೆಯಲ್ಲಿ ಅವನು 118 ಪ್ಲೇಟ್‌ಗಳ ಮೊಮೋಗಳನ್ನು ಹೇಗೆ ಮಾರಿದ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಸುಳ್ಳು, ರಸ್ತೆ ಬದಿಯಲ್ಲಿ ಒಂದು ಪ್ಲೇಟ್ ಮೊಮೋ 110 ರೂಪಾಯಿಗೆ ಸಿಗಲ್ಲ, 900 ಪ್ಲೇಟ್‌ ಮಾರಾಟ ಮಾಡುವುದು ಕೂಡ ನಂಬಲು ಸಾಧ್ಯವಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+