ಕೆ.ಸಿ ಜನರಲ್ ಸಾರ್ವಜನಿಕ ಆಸ್ಪತ್ರೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
ಬೆಂಗಳೂರಿನ ಕೆಸಿ ಜನರಲ್ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಬೆಂಗಳೂರಿನ ಕೆಸಿ ಜನರಲ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಕೆಸಿ ಜೆನೆರಲ್ ಆಸ್ಪತ್ರೆ ಕೂಡ ಒಂದಾಗಿದ್ದು, ಇಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭೇಟಿ ನೀಡಿದ್ದೇನೆ. ಶೀಘ್ರದಲ್ಲೇ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರ್ ನಿರ್ಮಾಣವಾಗಲಿದೆ. ಅಲ್ಲದೇ ಶವಗಾರ ತೆರೆಯುವ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರದ ಸಮಸ್ಯೆ ಇದೆ. ರಾಜ್ಯದಾದ್ಯಂತ ಸಿಂಗಲ್ ಯುಸ್ ಡಯಾಲಿಸ್ ಕೇಂದ್ರಗಳನ್ನ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ಐಸಿಯು ಯುನಿಟ್ಸ್ ಗಳನ್ನ ಪರಿಶೀಲಿಸಲಾಗಿದ್ದು, ಕೆಲವು ಭಾಗದಲ್ಲಿ ಲೀಕೇಜ್ ಆಗುತ್ತಿದೆ. ಅವುಗಳನ್ನ ಸರಿಪಡಿಸುವ ಕೆಲಸ ಮಾಡಲಾಗುತ್ತದೆ.
ಕೆಸಿ ಜೆನರಲ್ ಆಸ್ಪತ್ರೆಗೆ ಸಾಕಷ್ಟು ಜನ ಬರ್ತಾರೆ. ಹೀಗಾಗಿ ಕೆಸಿ ಜೆನರಲ್ ಆಸ್ಪತ್ರೆಯ ಸಮಸ್ಯೆಗಳನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ತೇವೆ. ಇನ್ನು ಆಸ್ಪತ್ರೆಯಲ್ಲಿ ಎಲ್ಲಾ ಔಷದಿಗಳನ್ನ ನೀಡಬೇಕು. ಯಾವುದೇ ಔಷದಿಯನ್ನ ಹೊರಗಡೆ ಬರೆಯಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಸೂಚನೆ ನೀಡಿದ್ದಾರೆ.












Click it and Unblock the Notifications