ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Metro Pillar Tragedy: ಮೃತ ಮಹಿಳೆ ಪತಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಜನವರಿ 11: ಬೆಂಗಳೂರಿನಲ್ಲಿ ಮಂಗಳವಾರ ಹೆಣ್ಣೂರು ಬಳಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಕುಸಿದು ಬಿದ್ದ ಪರಿಣಾಮ ಮಹಿಳೆ ಹಾಗೂ ಆಕೆಯ ಮಗು ಪ್ರಾಣ ಕಳೆದುಕೊಂಡಿದ್ದು, ಆ ಭಯಾನಕ ಕ್ಷಣವನ್ನು ಅವರ ಪತಿ ವಿವರಿಸಿದ್ದಾರೆ.

ಬೆಂಗಳೂರಿನ ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವಿನೊಂದಿಗೆ ಸಾವನ್ನಪ್ಪಿದ್ದು, ಆಕೆಯ ಪತಿ ಮತ್ತು ಮಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಮಹಿಳೆಯ ಪತಿ ಲೋಹಿತ್ ಮಾತನಾಡಿ, ಈ ಘಟನೆಯಲ್ಲಿ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ನನ್ನ ಜಗತ್ತು ಕಳಚಿ ಬಿದ್ದಿದೆ ಎಂದಿರುವ ಅವರು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಸರ್ಕಾರಕ್ಕೆ ಸಂದೇಶದಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪುಷ್ಪ ಪ್ರದರ್ಶನ ದಿನಾಂಕ ಪ್ರಕಟಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪುಷ್ಪ ಪ್ರದರ್ಶನ ದಿನಾಂಕ ಪ್ರಕಟ

ಘಟನೆಯ ದುರಂತವನ್ನು ವಿವರಿಸಿದ ಲೋಹಿತ್‌ ಅವರು, ನಾವು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದೆವು, ನಾನು ನನ್ನ ಕುಟುಂಬವನ್ನು ಸಂಬಂಧಪಟ್ಟ ಸ್ಥಳಕ್ಕೆ ಡ್ರಾಪ್ ಮಾಡಿ ನಂತರ ಅಲ್ಲಿಂದ ಹೊರಡಬೇಕಿತ್ತು. ಆದರೆ ಈ ಘಟನೆಯು ಕ್ಷಣಾರ್ಧದಲ್ಲಿ ಸಂಭವಿಸಿತು. ಮೆಟ್ರೋ ಫಿಲ್ಲರ್‌ ಕುಸಿದು ನಾನು ನೋಡುತ್ತಿದ್ದಂತೆ ಹಿಂದೆ ನನ್ನ ಹೆಂಡತಿ ಮತ್ತು ಮಗು ಬಿದ್ದಿದ್ದರು, ಆಗ ನನ್ನ ಕೈಯಲ್ಲಿ ಏನೂ ಮಾಡುವಂತಿರಲಿಲ್ಲ ಎಂದರು.

ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸುರಕ್ಷತಾ ಕ್ರಮಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಸರ್ಕಾರಕ್ಕೆ ನಾನು ಏನು ಹೇಳಲಿ, ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ನೋಡಿಕೊಳ್ಳಬೇಕು. ಇತರರು ಈ ಪರಿಸ್ಥಿತಿಯನ್ನು ಎದುರಿಸದಂತೆ ಎಲ್ಲಾ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

Fixmystreet ಆಪ್‌ ಆರಂಭಿಸಿದ ಬಿಬಿಎಂಪಿ, ಏನಿದರ ವಿಶೇಷತೆ?Fixmystreet ಆಪ್‌ ಆರಂಭಿಸಿದ ಬಿಬಿಎಂಪಿ, ಏನಿದರ ವಿಶೇಷತೆ?

ಮೆಟ್ರೋ ಕಾಮಗಾರಿ ರದ್ದುಗೊಳಿಸುವಂತೆ ಮೃತ ಲೋಹಿತ್‌ ಅವರ ಪತ್ನಿಯ ತಂದೆ ಮದನ್ ಕುಮಾರ್ ಎಂಬುವವರು ಆಗ್ರಹಿಸಿದ್ದು, ಗುತ್ತಿಗೆ ರದ್ದು ಪಡಿಸುವವರೆಗೂ ಮಗಳ ಶವವನ್ನು ತೆಗೆದುಕೊಂಡು ಹೋಗುವುದಿಲ್ಲ. ಗುತ್ತಿಗೆದಾರರ ಪರವಾನಿಗೆ ರದ್ದು ಪಡಿಸುವವರೆಗೆ ನಾನು ಶವವನ್ನು ತೆಗೆದುಕೊಳ್ಳುವುದಿಲ್ಲ. ಇಷ್ಟು ಎತ್ತರದ ಕಂಬಗಳನ್ನು ಕಟ್ಟಲು ಅವರಿಗೆ ಅನುಮತಿ ನೀಡಿದವರು ಯಾರು? ಟೆಂಡರ್ ರದ್ದುಪಡಿಸಿ ಕಾಮಗಾರಿ ಸ್ಥಗಿತಗೊಳಿಸಬೇಕು. ನ್ಯಾಯಾಲಯದಲ್ಲಿ ಏನು ಮಾಡಬೇಕು ಎಂಬುದನ್ನು ನೋಡುತ್ತೇನೆ ಎಂದರು.

ಯಾವ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ

ಯಾವ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ

ಮೃತರ ಅತ್ತೆ ನಿರ್ಮಲಾ ಮಾತನಾಡಿ, ''ದಾವಣಗೆರೆಯಿಂದ 10 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಆಕೆ ಮಕ್ಕಳನ್ನು ಶಾಲೆಗೆ ಬಿಡಲು ಹೋಗಿದ್ದಳು. ಬೆಳಗ್ಗೆ 10:30ರ ಸುಮಾರಿಗೆ ಘಟನೆ ನಡೆದಿದ್ದು, ನಮಗೆ ಆಪಾರ ಕೋಪ ಬಂದಿದೆ. ಈ ಘಟನೆಯ ಬಗ್ಗೆ ನಮಗೆ ನ್ಯಾಯ ಬೇಕು. ಇಲ್ಲಿ ಯಾವುದೇ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿರ್ಮಾಣ ಕಾಮಗಾರಿ ನಿಲ್ಲಿಸಿ

ನಿರ್ಮಾಣ ಕಾಮಗಾರಿ ನಿಲ್ಲಿಸಿ

ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಕುಸಿದು ಇಬ್ಬರು ಜೀವಗಳನ್ನು ಬಲಿತೆಗೆದುಕೊಂಡ ಬೆಂಗಳೂರಿನ ಮೆಟ್ರೋ ಪಿಲ್ಲರ್ ನಿರ್ಮಾಣದ ಗುತ್ತಿಗೆದಾರರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ನಿರ್ಮಾಣ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಘಟನೆಯಲ್ಲಿ ಸಾವನ್ನಪ್ಪಿದ ಮಹಿಳೆಯ ಮಾವ ವಿಜಯಕುಮಾರ್ ತಿಳಿಸಿದ್ದಾರೆ.

ಫಿಲ್ಲರ್‌ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿ

ಫಿಲ್ಲರ್‌ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿ

ಮೆಟ್ರೋ ಪಿಲ್ಲರ್ ನಿರ್ಮಾಣದ ಗುತ್ತಿಗೆದಾರರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸುರಕ್ಷತೆ ಇಲ್ಲದೇ ಸಾಗುತ್ತಿರುವ ಕಾರಣ ಕೂಡಲೇ ಫಿಲ್ಲರ್‌ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರಯಾಣಿಕರನ್ನು ಸಾಗಿಸುವ ಬಸ್ ಅಥವಾ ಇತರ ವಾಹನಗಳು ಆ ಹಂತವನ್ನು ದಾಟಿದ್ದರೆ, ಹೆಚ್ಚಿನ ಸಾವುನೋವುಗಳು ಸಂಭವಿಸಬಹುದು. ನಮ್ಮ ಕೌಟುಂಬಿಕ ಪ್ರಪಂಚವು ನಾಶವಾಗಿದೆ. ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ವಿಜಯಕುಮಾರ್ ಹೇಳಿದರು.

ಅತ್ಯಂತ ದುರದೃಷ್ಟಕರ ಘಟನೆ: ಸಿಎಂ

ಅತ್ಯಂತ ದುರದೃಷ್ಟಕರ ಘಟನೆ: ಸಿಎಂ

ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಬೆಂಗಳೂರಿನ ಮೆಟ್ರೋ ಪಿಲ್ಲರ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಘಟನೆಯ ವಿವರ ಕೇಳಿರುವುದಾಗಿ ಬೊಮ್ಮಾಯಿ ತಿಳಿಸಿದ್ದು, ಅದೊಂದು ಅತ್ಯಂತ ದುರದೃಷ್ಟಕರ ಘಟನೆ. ಗುತ್ತಿಗೆದಾರರ ಕಡೆಯಿಂದ ಅಥವಾ ಇತರ ಕಾರಣಗಳಿಂದ ಯಾವುದೇ ಲೋಪದೋಷಗಳನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲು ಸೂಚನೆಗಳನ್ನು ನೀಡಲಾಗಿದೆ. ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

English summary
A woman and her child lost their lives when an under-construction metro pillar collapsed near Hennur in Bengaluru on Tuesday, her husband has narrated the horrific moment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X