ಬೆಂಗಳೂರು ನಮ್ಮ ಮೆಟ್ರೋ ಸಮೀಪ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ, ಬಾಡಿಗೆಯೂ ಹೆಚ್ಚಳ
ಬೆಂಗಳೂರು: ಬೆಂಗಳೂರಿನ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಇದೀಗ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಆಗುತ್ತಿದ್ದು, ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ. ಮೆಟ್ರೋ ಹೊಸ ಮಾರ್ಗಗಳಲ್ಲಿ ಹಾಗೂ ನಮ್ಮ ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಸತಿ ಬೇಡಿಕೆ ಶೇ.8 ರಿಂದ ಶೇ.19 ರಷ್ಟು ಹೆಚ್ಚಳವಾಗಿದೆ.
ನಮ್ಮ ಮೆಟ್ರೋ ನಿಲ್ದಾಣದ ಸಮೀಪದ ಪ್ರದೇಶಗಳಲ್ಲಿ ಭೂಮಿ ಬೆಲೆ ಹಾಗೂ ಮನೆಗಳ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದ ಪ್ರದೇಶದಲ್ಲಿ ಮನೆಗಳ ಬೆಲೆ ಶೇ. 13ರಷ್ಟು ಹೆಚ್ಚಳವಾಗಿದೆ. ಜಯನಗರದಲ್ಲಿ ಶೇ. 11 ರಷ್ಟು ಏರಿಕೆಯಾಗಿದ್ದರೆ, ಈ ನಿಲ್ದಾಣಗಳ ಸಮೀಪದ ಬಾಡಿಗೆ ಮೌಲ್ಯವು ಶೇ.18 ರಷ್ಟು ಏರಿಕೆಯಾಗಿದೆ. ಇದು ನಗರದ ಇನ್ನುಳಿದ ಪ್ರದೇಶಗಳ ಸರಾಸರಿಗಿಂತಲೂ ಹೆಚ್ಚಾಗಿದೆ ಎಂದು ನೋಬ್ರೋಕರ್ ವರದಿ ಮಾಡಿದೆ. ಬೆಂಗಳೂರು ಮೆಟ್ರೋ ನಿಲ್ದಾಣಗಳ ಬಳಿ ವಸತಿ ಬೇಡಿಕೆ ಶೇ. 8ರಿಂದ 19 ರಷ್ಟು ಏರಿಕೆಯಾಗಿದೆ.

ಮೆಟ್ರೋ ತಂದ ಬಂಪರ್
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಭೂಮಿ ಹಾಗೂ ಮನೆ ಬೆಲೆ ಹೆಚ್ಚಳವಾಗಿದೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನ ಮೆಟ್ರೋ ನಿಲ್ದಾಣಗಳ ಸಮೀಪದಲ್ಲಿ ಮನೆಗಳನ್ನು ಹುಡುಕುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣದ ಸಮೀಪ ಪ್ರದೇಶಗಳಲ್ಲಿ ಮನೆ ಬಾಡಿಗೆ ದರ ಹೆಚ್ಚಳವಾಗಿದೆ. 2025ರಲ್ಲಿ ವಸತಿ ಮಾರುಕಟ್ಟೆಗಳಿಗೆ ಮೆಟ್ರೋ ಸಂಪರ್ಕ ಬೂಸ್ಟ್ ನೀಡಿದೆ.
ಈ ಮಾರ್ಗದಲ್ಲಿ ರಿಯಲ್ ಎಸ್ಟೇಟ್ ಬೂಸ್ಟ್
ಬೆಂಗಳೂರಿನ ಪೂರ್ವ ಐಟಿ ಕಾರಿಡಾರ್ ಹಾಗೂ ನಮ್ಮ ಮೆಟ್ರೋ ನೇರಳೆ ಮಾರ್ಗ / Purple line Metro ದಲ್ಲಿ ರಿಯಲ್ ಎಸ್ಟೇಟ್ ಬೂಸ್ಟ್ ಕಂಡಿದೆ. ವೈಟ್‌ಫೀಲ್ಡ್ ಭಾಗದಲ್ಲಿ ವಸತಿ ಪ್ರದೇಶದ ಬೆಲೆಯು ಶೇ.14% ಏರಿಕೆ ಕಂಡಿದೆ. ಕೆ.ಆರ್.ಪುರಂ ಭಾಗದಲ್ಲಿ ಶೇ 18% ಮತ್ತು ವಿಜಯನಗರದಲ್ಲಿ ಶೇ 9% ರಷ್ಟು ಏರಿಕೆ ಕಂಡಿದೆ. ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಜಯನಗರವು ಶೇ13% ಬೇಡಿಕೆ ಹೆಚ್ಚಳವಾಗಿದೆ. ರಾಜಾಜಿನಗರ ಭಾಗದಲ್ಲಿ ಶೇ 9% ಹೆಚ್ಚಳ ಆಗಿದೆ. ಇನ್ನು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲೂ ವಸತಿ ಪ್ರದೇಶಗಳ ಬೆಲೆ ಹೆಚ್ಚಳವಾಗಿದೆ. ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಶೇ 12% ಮತ್ತು ಬೊಮ್ಮನಹಳ್ಳಿ ಶೇ 8% ಪ್ರಾಪರ್ಟಿ ಬೆಲೆ ಹೆಚ್ಚಳವಾಗಿದೆ.
ಮನೆಗಳ ಖರೀದಿ ಬೇಡಿಕೆ ಹೆಚ್ಚಳ
ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ರಾಜಾಜಿನಗರ ಹಾಗೂ ಜಯನಗರದಲ್ಲಿ ಮನೆಗಳ ಖರೀದಿಯೂ ಹೆಚ್ಚಳವಾಗಿದೆ. ಈ ಭಾಗದಲ್ಲಿ ನಿವೇಶನಗಳು ಹಾಗೂ ಭೂಮಿ ಬೆಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಜನ ಹೂಡಿಕೆ ಮಾಡುವುದು ಹೆಚ್ಚಳವಾಗಿದೆ. ರಾಜಾಜಿನಗರದಲ್ಲಿ ಶೇ 13% ಹಾಗೂ ಜಯನಗರದಲ್ಲಿ ಶೇ 11% ಏರಿಕೆ ಕಂಡುಬಂದಿದೆ. ಇಲ್ಲಿ ಮನೆ ಖರೀದಿಸಲು ಇನ್ನೂ ಜನರ ಆಸಕ್ತಿ ಮುಂದುವರಿದಿದೆ. ಕೆ.ಆರ್.ಪುರಂನಲ್ಲಿ ಬಂಡವಾಳ ಮೌಲ್ಯವು ಶೇ 9% ಹೆಚ್ಚಾಗಿವೆ. ಇಂದಿರಾನಗರ ಮತ್ತು ಮಲ್ಲೇಶ್ವರಂನಂತಹ ಪ್ರೀಮಿಯಂ ಪ್ರದೇಶಗಳಲ್ಲಿ 5ರಿಂದ 6%ರಷ್ಟು ಮಾತ್ರ ಏರಿಕೆ ಆಗಿದೆ. ಈಗಾಗಲೇ ಭೂಮಿ ಬೆಲೆ ದುಬಾರಿ ಆಗಿರುವ ಪ್ರದೇಶಗಳಲ್ಲಿ ಬೆಲೆಗಳು ಸ್ಥಿರವಾಗಿವೆ.
ಮೆಟ್ರೋ ನೇರ ಸಂಪರ್ಕ ಇಲ್ಲದ ಪ್ರದೇಶದಲ್ಲೂ ಭೂಮಿ ಬೆಲೆ ಹೆಚ್ಚಳ
ಇನ್ನು ಬೆಂಗಳೂರಿನ ನಮ್ಮ ಮೆಟ್ರೋ ಮಾರ್ಗದಲ್ಲಿ ಮಾತ್ರವಲ್ಲದೆ. ಹೊಸದಾಗಿ ಮೆಟ್ರೋ ಮಾರ್ಗ ನಿರ್ಮಾಣ ಆಗುತ್ತಿರುವ ಪ್ರದೇಶಗಳಲ್ಲಿ ಹಾಗೂ ಮೆಟ್ರೋ ನಿಲ್ದಾಣದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಪ್ರದೇಶಗಳಲ್ಲೂ ರಿಯಲ್ ಎಸ್ಟೇಟ್ ಬೂಸ್ಟ್ ಸಿಕ್ಕಿದೆ. ಮೆಟ್ರೋದಿಂದ ನೇರವಾಗಿ ಸಂಪರ್ಕ ಹೊಂದಿಲ್ಲದ ಪ್ರದೇಶಗಳಲ್ಲಿಯೂ ಸಹ ಹೂಡಿಕೆ ಹೆಚ್ಚಾಗಿದೆ. ಬೆಂಗಳೂರಿನ ಬೆಳ್ಳಂದೂರು ಮುಂತಾದ ಪ್ರದೇಶಗಳಲ್ಲಿ ಭೂಮಿ ಬೆಲೆಯು ಶೇ 18% ಬೆಲೆ ಏರಿಕೆ ಕಂಡಿದೆ. ಬೊಮ್ಮನಹಳ್ಳಿಯಲ್ಲಿ 13% ಹೆಚ್ಚಳವಾಗಿದೆ. ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ಮೆಟ್ರೋ ಜಾಲ ವಿಸ್ತರಣೆ ಆಗುವುದು ಸಹ ಇದಕ್ಕೆ ಕಾರಣವಾಗಿದೆ.












Click it and Unblock the Notifications