1 ಗಂಟೆಯಲ್ಲಿ 60.5 ಕೋಟಿ ಫಂಡಿಂಗ್ ಬಾಚಿಕೊಂಡ 25 ವಿದ್ಯಾರ್ಥಿಗಳು: ಬೆಂಗಳೂರಿನಲ್ಲಿ ಹೊಸ ಇತಿಹಾಸ ಬರೆದ ಸ್ಟಾರ್ಟ್‌ಅಪ್‌

ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು ಮತ್ತೊಂದು ಐತಿಹಾಸಿಕ ಮೈಲುಗಲ್ಲಿಗೆ ಸಾಕ್ಷಿಯಾಗಿದೆ. ಉದ್ಯಮ ಜಗತ್ತಿನಲ್ಲಿ ಸಾಧನೆ ಮಾಡಲು ವಯಸ್ಸು ಅಡ್ಡಿಯಲ್ಲ ಎಂಬುದನ್ನ ಜೆನ್‌ ಝೀ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಡೆಮೊ ಡೇ ಕಾರ್ಯಕ್ರಮದಲ್ಲಿ ಕೇವಲ 25 ವರ್ಷದೊಳಗಿನ ಯುವ ಉದ್ಯಮಿಗಳು ಮಂಡಿಸಿದ ಹೊಸ ಐಡಿಯಾಗಳಿಗೆ ಪ್ರಭಾವಿತರಾದ ಹೂಡಿಕೆದಾರರು ಕೇವಲ ಒಂದು ಗಂಟೆಯಲ್ಲಿ ಬರೋಬ್ಬರಿ ₹60.5 ಕೋಟಿ ಹೂಡಿಕೆ ಮಾಡುವ ಭರವಸೆ ನೀಡಿದ್ದಾರೆ.

Bengaluru Masters Union Demo Day 25 Student Startups Secure Rs 60 5 Crore Funding in One Hour

ಬೆಂಗಳೂರಿನಲ್ಲಿ ಮೊದಲ ಮಾಸ್ಟರ್ಸ್ ಯೂನಿಯನ್ ಡೆಮೊ ಡೇ ಯಶಸ್ಸು

ಸೆಪ್ಟೆಂಬರ್ 22ರಂದು ಬೆಂಗಳೂರಿನ ಸ್ಟಾರ್ಟ್‌ಅಪ್ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಮೊದಲ ಮಾಸ್ಟರ್ಸ್ ಯೂನಿಯನ್ ಡೆಮೊ ಡೇ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಕಾರ್ಯಕ್ರಮವು ಯುವ ಉದ್ಯಮಿಗಳಿಗೆ ನೇರವಾಗಿ ಹೂಡಿಕೆದಾರರ ಮುಂದೆ ತಮ್ಮ ಐಡಿಯಾಗಳನ್ನ ಪ್ರಸ್ತುತಪಡಿಸಲು ವೇದಿಕೆ ಕಲ್ಪಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಒಟ್ಟು 25 ಸ್ಟಾರ್ಟ್‌ಅಪ್‌ಗಳ ಪೈಕಿ 15 ಮಾಸ್ಟರ್ಸ್ ಯೂನಿಯನ್ ಕ್ಯಾಂಪಸ್‌ನಿಂದ ಬಂದಿದ್ದರೆ, ಉಳಿದ 10 ಸ್ಟಾರ್ಟ್‌ಅಪ್‌ಗಳು ಹೊರಗಿನ ಕ್ಯಾಂಪಸ್‌ಗಳಿಂದ ಬಂದಿದ್ದವು.

ಮಾಸ್ಟರ್ಸ್ ಯೂನಿಯನ್ ವಿಶ್ವವಿದ್ಯಾಲಯದ ಸ್ಥಾಪಕ ಪ್ರಥಮ್ ಮಿತ್ತಲ್ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, "ಬೆಂಗಳೂರು ಭಾರತದ ಅತ್ಯಂತ ಕ್ರಿಯಾಶೀಲ ಸ್ಟಾರ್ಟ್‌ಅಪ್ ಹಾಗೂ ತಂತ್ರಜ್ಞಾನದ ಕೇಂದ್ರವಾಗಿದೆ. ನಮ್ಮ ಮೊದಲ ಡೆಮೊ ಡೇಯನ್ನ ಈ ನಗರದಲ್ಲಿ ಆಯೋಜಿಸಲು ನಮಗೆ ಹೆಮ್ಮೆಯಾಗುತ್ತಿದೆ. ಇದು ನಮ್ಮ ವಿದ್ಯಾರ್ಥಿಗಳಿಗೆ ಒಂದು ಅದ್ಭುತ ಅವಕಾಶವನ್ನು ಒದಗಿಸಿದೆ" ಎಂದು ಹೇಳಿದ್ದಾರೆ. ಮಾಸ್ಟರ್ಸ್ ಯೂನಿಯನ್ ವೆಂಚರ್ಸ್ 25 ವರ್ಷದೊಳಗಿನ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ₹100 ಕೋಟಿ ನಿಧಿಯನ್ನು ಮೀಸಲಿಟ್ಟಿದೆ.

ಎಐ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ವಲಯದತ್ತ ಯುವ ಉದ್ಯಮಿಗಳ ಒಲವು

ಸಾಮಾನ್ಯವಾಗಿ ಸಾಫ್ಟ್‌ವೇರ್ ಅಥವಾ ಗ್ರಾಹಕ ಕೇಂದ್ರಿತ ಉದ್ಯಮಗಳತ್ತ ವಾಲುತ್ತಿದ್ದ ಟ್ರೆಂಡ್ ಈಗ ಬದಲಾಗಿದೆ. ಈ ಡೆಮೊ ಡೇಯಲ್ಲಿ ಪ್ರಸ್ತುತಪಡಿಸಲಾದ ಬಹುತೇಕ ಸ್ಟಾರ್ಟ್‌ಅಪ್‌ಗಳು ಕೃತಕ ಬುದ್ಧಿಮತ್ತೆ, ಹವಾಮಾನ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಸುಧಾರಿತ ಉತ್ಪಾದನಾ ವಲಯಗಳಿಗೆ ಸಂಬಂಧಿಸಿದ್ದಾಗಿದ್ದವು.

ಅತಿ ಹೆಚ್ಚು ಹೂಡಿಕೆ ಬದ್ಧತೆ ಪಡೆದ ಸ್ಟಾರ್ಟ್‌ಅಪ್‌ಗಳ ಪೈಕಿ ಸನ್ಯಾರ್ಕ್, ಸೌಭಾ ಏರಿಯಲ್ ಸಿಸ್ಟಮ್ಸ್ ಹಾಗೂ ಕಾರ್ಬನ್‌ಎಮ್ ಮುಂಚೂಣಿಯಲ್ಲಿವೆ.

ಕಾರ್ಯಕ್ರಮದಲ್ಲಿ 65ಕ್ಕೂ ಹೆಚ್ಚು ಹೂಡಿಕೆದಾರರು ಭಾಗಿ

ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಆಂಟ್ರೆಪ್ರೆನ್ಯೂರ್ಸ್ ಫಸ್ಟ್, ಕಾಯ್ ಕ್ಯಾಪಿಟಲ್, ಅವಾನಾ ಕ್ಯಾಪಿಟಲ್, ಬೀನೆಕ್ಸ್ಟ್ ಮತ್ತು ರೇನ್‌ಮ್ಯಾಟರ್ ಸೇರಿದಂತೆ 65ಕ್ಕೂ ಹೆಚ್ಚು ವೆಂಚರ್ ಕ್ಯಾಪಿಟಲ್ (VC) ಸಂಸ್ಥೆಗಳು ಹಾಗೂ ಏಂಜೆಲ್ ಹೂಡಿಕೆದಾರರು ಭಾಗವಹಿಸಿದ್ದರು.

ಯುವಕರ ಪಿಚ್ (Pitch) ಮುಗಿದ ಕೇವಲ ಒಂದು ಗಂಟೆಯೊಳಗೆ ಹೂಡಿಕೆದಾರರು ₹60.5 ಕೋಟಿ ಮೊತ್ತದ ಸಾಫ್ಟ್ ಫಂಡಿಂಗ್ ಕಮಿಟ್‌ಮೆಂಟ್ ನೀಡಿದ್ದಾರೆ.

ಸಾಫ್ಟ್ ಕಮಿಟ್‌ಮೆಂಟ್ ಎಂದರೇನು?

ಈ ₹60.5 ಕೋಟಿ ಮೊತ್ತವು ತಕ್ಷಣವೇ ಸ್ಟಾರ್ಟ್‌ಅಪ್‌ಗಳ ಬ್ಯಾಂಕ್ ಖಾತೆಗೆ ಜಮೆಯಾಗುವುದಿಲ್ಲ. ಇದೊಂದು ಪ್ರಾಥಮಿಕ ಒಪ್ಪಂದ ಅಥವಾ ಸಾಫ್ಟ್ ಕಮಿಟ್‌ಮೆಂಟ್ ಆಗಿದೆ. ಯಾವುದೇ ಐಡಿಯಾ ಇಷ್ಟವಾದಾಗ ಹೂಡಿಕೆದಾರರು ಈ ಕಮಿಟ್‌ಮೆಂಟ್ ನೀಡುತ್ತಾರೆ. ಬಳಿಕ ಡ್ಯೂ ಡಿಲಿಜೆನ್ಸ್, ಮೌಲ್ಯಮಾಪನ, ದಾಖಲಾತಿ ಪರಿಶೀಲನೆ ಹಾಗೂ ಅಂತಿಮ ಮಾತುಕತೆಗಳ ನಂತರವಷ್ಟೇ ಹಣ ಬಿಡುಗಡೆಯಾಗುತ್ತದೆ.

ಆದಾಗ್ಯೂ, ಪಿಚ್ ಮುಗಿದ ಕೇವಲ 60 ನಿಮಿಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಆಸಕ್ತಿಯನ್ನ ಹೂಡಿಕೆದಾರರು ತೋರಿರುವುದು ಇಂದಿನ ಯುವ ಪೀಳಿಗೆಯ ಆವಿಷ್ಕಾರದ ತಾಕತ್ತನ್ನ ಹಾಗೂ ಬದಲಾಗುತ್ತಿರುವ ಭಾರತದ ಸ್ಟಾರ್ಟ್‌ಅಪ್ ಭವಿಷ್ಯವನ್ನ ಎತ್ತಿ ತೋರಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+