ಬೆಂಗಳೂರು: ನೇಣಿಗೆ ಶರಣಾದ ವ್ಯಕ್ತಿ ವಿಡಿಯೋ ಡೆತ್ ನೋಟಿನಲ್ಲಿ ಹೇಳಿದ್ದೇನು?
ತನ್ನ ಡೆತ್ ನೋಟನ್ನು ವಿಡಿಯೋ ರೆಕಾರ್ಡ್ ಮಾಡಿ ವ್ಯಕ್ತಿಯೊಬ್ಬ ಬೆಂಗಳೂರಿನ ಕೆಂಗೇರಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ವಿಡಿಯೋದಲ್ಲಿ 'ಹಣ ಕೊಡುವಂತೆ ದಂಪತಿಗಳಿಬ್ಬರು ನನಗೆ ಪೀಡಿಸುತ್ತಿದ್ದರು' ಎಂದು ವ್ಯಕ್ತಿ ದೂರಿದ್ದಾನೆ.
ಬೆಂಗಳೂರು, ಫೆಬ್ರವರಿ 23: ತನ್ನ ಡೆತ್ ನೋಟನ್ನು ವಿಡಿಯೋ ರೆಕಾರ್ಡ್ ಮಾಡಿ ವ್ಯಕ್ತಿಯೊಬ್ಬ ಬೆಂಗಳೂರಿನ ಕೆಂಗೇರಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ವಿಡಿಯೋದಲ್ಲಿ 'ಹಣ ಕೊಡುವಂತೆ ದಂಪತಿಗಳಿಬ್ಬರು ನನಗೆ ಪೀಡಿಸುತ್ತಿದ್ದರು' ಎಂದು ವ್ಯಕ್ತಿ ದೂರಿದ್ದಾನೆ.
ಊರಿಗೆ ಹೋಗಿದ್ದ 42 ವರ್ಷದ ರಣೋಜಿ ರಾವ್ ತಾಯಿ ಮನಗೆ ಬಂದಾಗ, ರಾವ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಪೊಲೀಸರು ಬಂದು ಪರಿಶೀಲನೆ ಮಾಡಿದಾಗ ಆತನ ಮೊಬೈಲಿನಲ್ಲಿ ನೇಣು ಬಿಗಿದುಕೊಳ್ಳುವ ಮೊದಲು ಶೂಟ್ ಮಾಡಿದ ವಿಡಿಯೋ ದೃಶ್ಯಾವಳಿಗಳು ಪತ್ತೆಯಾಗಿವೆ.[ಸಾಲ ಮರುಪಾವತಿಸಲಾಗದೆ ಎಚ್ ಡಿ ಕೋಟೆ ರೈತ ಆತ್ಮಹತ್ಯೆ]

ವಿಡಿಯೋದ ದೃಶ್ಯಾವಳಿಯ ಸಾರಾಂಶ ಮೊಬೈಲ್ ಫೋನುಗಳಲ್ಲಿ ಓಡಾಡುತ್ತಿವೆ. ಅದರಲ್ಲಿ ಆತ," ನಾನು ಸಾವನ್ನಪ್ಪಿದರೆ ನನ್ನ ಮಕ್ಕಳು ಅನಾಥರಾಗುತ್ತಾರೆ ಎಂದು ತಿಳಿದಿದೆ. ಅವರಿಗೆ ಏನೂ ತೊಂದರೆಯಾಗದೇ ಇರಲಿ. ನಾನು ಸಾಲ ಕಟ್ಟಲು ಸಿದ್ದವಿದ್ದೆ. ಆದರೆ ಕೇಳುವುದಕ್ಕೂ ಒಂದು ಇತಿಮಿತಿ ಇರುತ್ತದೆ. ಅವರು ನನ್ನನ್ನು ಸಾಲದ ಸುಳಿಯಲ್ಲಿ ಸಿಲುಕಿ ಹಾಕಿದರು," ಎಂಬರ್ಥದಲ್ಲಿ ಮಾತನಾಡಿದ್ದಾನೆ.[ಮಲಯಾಳಿ ನಟಿ ಮೇಲೆ ದೌರ್ಜನ್ಯ : ಆರೋಪಿ ನಂ.1 ಪಲ್ಸರ್ ಸುನಿ ಅರೆಸ್ಟ್]
ವರದಿಗಳ ಪ್ರಕಾರ ವಕೀಲ ದಂಪತಿ ಬಳಿ ಎರಡು ವರ್ಷದ ಹಿಂದೆ 4.25 ಲಕ್ಷ ರೂಪಾಯಿಗಳನ್ನು ರಣೋಜಿ ಸಾಲವಾಗಿ ಪಡೆದುಕೊಂಡಿದ್ದ. ಇದರಲ್ಲಿ ರಣೋಜಿ ರಾವ್ 2.28 ಲಕ್ಷ ರೂಪಾಯಿಗಳನ್ನು ಈಗಾಗಲೇ ಹಿಂದುರಿಗಿಸಿದ್ದ. ಇನ್ನೂ ಒಂದಷ್ಟು ಹಣ ನೀಡಬೇಕಾಗಿತ್ತು. ಆದರೆ ವಕೀಲ ದಂಪತಿ 20 ಲಕ್ಷ ಹಣಕ್ಕೆ ಬೇಡಿಕೆ ಸಲ್ಲಿಸಿದ್ದರು ಎಂದು ಹೇಳಲಾಗಿದೆ.
ಮಂಗಳವಾರ ತಾಯಿ ಊರಿಗೆ ಹೋದ ಸಂದರ್ಭದಲ್ಲಿ, ಮಕ್ಕಳಿಬ್ಬರನ್ನು ಶಾಲೆಗೆ ಕಳುಹಿಸಿದ ನಂತರ ರಣೋಜಿ ನೇಣು ಬಿಗಿದುಕೊಂಡಿದ್ದಾನೆ. ನೇಣು ಬಿಗಿದುಕೊಳ್ಳುವ ಮೊದಲು ವಿಡಿಯೋ ಶೂಟ್ ಮಾಡಿ ಅದರಲ್ಲಿ ನಡೆದಿದ್ದೆಲ್ಲವನ್ನೂ ರಣೋಜಿ ವಿವರಿಸಿದ್ದಾನೆ.
ಈಗಾಗಲೇ ಪೊಲೀಸರು ಲಾಯರ್ ದಂಪತಿಯ ಮೇಲೆ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಶರಣಾಗುವಂತೆ ದಂಪತಿಗಳಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications