Bengaluru Roads: ₹50 ಲಕ್ಷ ಪರಿಹಾರ ಕೋರಿ ಬಿಬಿಎಂಪಿಗೆ ನೋಟಿಸ್ ನೀಡಿದ ವ್ಯಕ್ತಿ
ಬೆಂಗಳೂರು, ಮೇ 21: ಬೆಂಗಳೂರು ಸಂಚಾರ ದಟ್ಟಣೆ, ಅಪಘಾತ, ರಸ್ತೆಗುಂಡಿಗಳು ಹಾಗೂ ಮಳೆಗಾಲದಲ್ಲಿ ಪ್ರವಾಹ ಸಮಸ್ಯೆಯಿಂದ ಹೆಸರುವಾಸಿಯಾಗಿದೆ. ಇಲ್ಲಿನ 1.40 ಕೋಟಿ ಜನಸಂಖ್ಯೆ ನಾಗರಿಕ ಸಂಸ್ಥೆಗಳಿಗೆ ನೀರು, ರಸ್ತೆ ಸೇರಿ ಮೂಲಸೌಕರ್ಯಗಳ ತೆರಿಗೆ ಕಟ್ಟುತ್ತಾರೆ. ಹೀಗಿದ್ದರೂ ಸಹಿತ ಸೂಕ್ತ ವ್ಯವಸ್ಥೆ, ರಸ್ತೆಗುಂಡಿ ದುರಸ್ತಿ ಕಾರ್ಯ, ಉತ್ತಮ ರಸ್ತೆ ನಿರ್ಮಿಸುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಿಫಲವಾಗಿದೆ. ಈ ಸಂಬಂಧ ಸಾಮಾನ್ಯ ಪ್ರಜೆಯೊಬ್ಬರು ಬಿಬಿಎಂಪಿಗೆ ನೋಟಿಸ್ ನೀಡಿದ್ದಾರೆ.
ಹೌದು, ಇದು ಅಚ್ಚರಿ ಅನ್ನಿಸಿದರೂ ಸತ್ಯ ನಗರದ 'ಕಳಪೆ' ರಸ್ತೆಗಳಿಂದಾಗಿ ಕಂಗೆಟ್ಟಿರುವ ವ್ಯಕ್ತಿಯೊಬ್ಬರು 50 ಲಕ್ಷ ರೂಪಾಯಿ ನೋಟಿಸ್ ಅನ್ನು ಬಿಬಿಎಂಪಿಗೆ ಕಳುಹಿಸಿದ್ದಾರೆ. ಅಸಮರ್ಪಕ ರಸ್ತೆಗೆ, ಹಾನಿಗೊಳಗಾದ ರಸ್ತೆಗಳಿಂದ ದೈಹಿಕ ಸಮಸ್ಯೆ ಅನುಭವಿಸುವಂತಾಗಿದೆ. ಬೆನ್ನುಮೂಳೆ ಮತ್ತು ಕುತ್ತಿಗೆಯ ಸ್ಥಿತಿಯನ್ನು ತೀವ್ರವಾಗಿ ಹದಗೆಟ್ಟಿದೆ. ಆಟೋ ಅಥವಾ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸಲು ಸಾಧ್ಯವಾಗದಂತಹ ಸ್ಥಿತಿ ಇದೆ ಎಂದು ನೋಟಿಸ್ ನೀಡಿದ ದಿವ್ಯ ಕಿರಣ್ ಎಂಬುವವರು ದೂರಿದ್ದಾರೆ.

ನಗರದಲ್ಲಿ ವಾಹನ ಚಲಾಯಿಸಲು ಯೋಗ್ಯವಲ್ಲದ ರಸ್ತೆಗಳು ಇವೆ. ಇದರಿಂದ ದೈಹಿಕ ಯಾತನೆ ಅನುಭವಿಸಭೇಕಾಗಿದೆ. ಕೇಲವ ದೈಹಿಕ ಮಾತ್ರವಲ್ಲದೇ ಭಾವನಾತ್ಮಕವಾಗಿಯು ಕಿರಿ ಕಿರಿ ಆಗಿದೆ. ಆದ್ದರಿಂದ ತೆರಿಗೆ ಪಾವತಿಸುವ ನನಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 50 ಲಕ್ಷ ರೂ. ಪರಿಹಾರ ನೀಡಬೇಕೆಂದು 43 ವರ್ಷದ ದಿವ್ಯ ಕಿರಣ್ ನೋಟಿಸ್ ಮೂಲಕ ಆಗ್ರಹಿಸಿದ್ದಾರೆ.
ರಿಚ್ಮಂಡ್ ಟೌನ್ ನಿವಾಸಿ ದಿವ್ಯ ಕಿರಣ್ ಅವರು, ನಾನು ತೆರಿಗೆ ಪಾವತಿಸಿದರೂ ಸಹಿತ ಸಮರ್ಪಕ ಮೂಲಸೌಕರ್ಯ ಒದಗಿಸಿಲ್ಲ ಎಂದು ಬಲವಾಗಿ ನೋಟಿಸ್‌ನಲ್ಲಿ ಆರೋಪಿಸಿದ್ದಾರೆ. ತೀವ್ರ ಕುತ್ತಿಗೆ ಮತ್ತು ಬೆನ್ನು ನೋವಿನಿಂದ ಬಳಲುವಂತಾಗಿದೆ. ಮೂಳೆ ಚಿಕಿತ್ಸೆಗಾಗಾಗಿ ಐದಾರು ಬಾರಿ ಆಸ್ಪತ್ರೆಗೆ ತೆರಳಿದ್ದೇನೆ. ನಾಲ್ಕು ತುರ್ತು ಭೇಟಿ ಮಾಡಿದ್ದೇನೆ ಎಂದು ಅವರು ಆರೋಗ್ಯ ಸಮಸ್ಯೆ, ರಸ್ತೆಗುಂಡಿ, ಅಸಹಜ ರಸ್ತೆಗಳಿಂದ ತೊಂದರೆ ಗೀಡಾಗಿದ್ದನ್ನು ಅವರು ವಿವರಿಸಿದ್ದಾರೆ.
ನೋಟಿಸ್‌ಗೆ ಬಿಬಿಎಂಪಿ ಹೇಳಿದ್ದೇನು?
ಬಿಬಿಎಂಪಿ ವ್ಯಾಪ್ತಿಯಲ್ಲಿ ಚೂರು ಮಳೆ ಬಂದರೆ ಸಾಕು ಎಲ್ಲೆಂದರಲ್ಲಿ ನೀರು ತುಂಬಿಕೊಳ್ಳುತ್ತದೆ. ರಸ್ತೆಗಳು ಜಲಾವೃತಗೊಂಡು ನದಿಯಂತಾಗುತ್ತವೆ. ಇದು ಜನರಿಗೆ ಭಾರೀ ಸಂಕಷ್ಟ ತಂದೊಡ್ಡುತ್ತಿದೆ. ಕೆಲವು ಭಾರಿ ಜೀವ ಹಾನಿಗಳಿಗೂ ಕಾರಣವಾಗಬಹುದು. ಭಾನುವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಬೆಂಗಳೂರಿನ ಮಾನ ಜಾಗತಿ ಮಟ್ಟದಲ್ಲಿ ಹಾಳಾಗಿದೆ. ದೋಣಿಯಲ್ಲಿ ಮನೆಯಿಮದ ಹೊರ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಆದರೆ ಅವರ ನೋಟಿಸ್‌ಗೆ ಬಿಬಿಎಂಪಿ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎಂದು ತಿಳಿದು ಬಂದಿದೆ.
ಬೆನ್ನು ಹಾಗೂ ಮೂಳೆ ನೋವಿನಿಂದ ನನ್ ಕಕ್ಷಿದಾರರು ಬಳಲುತ್ತಿದ್ದಾರೆ. ಐದಾರು ಭಾರಿ ಚಿಕಿತ್ಸೆ ಪಡೆದಿದ್ದಾರೆ. ಆ ನೋವು ನಿವಾರಣೆಗೆ ಚಿಕಿತ್ಸೆ ಇತರ ಕ್ರಮ ಕೈಗೊಳ್ಳಬೇಕಾಯಿತು. ಔಷಧಿಗಳಿಗೆ ಹಣ ನೀಡಿದ್ದಾರೆ. ನೋವು ನಿವಾರಕ ಪಡೆದಿದ್ದಾರೆ ಎಂದು ನೋಟಿಸ್ ನೀಡಿದ ದಿವ್ಯ ಕಿರಿಣ್ ವಕೀಲ್ ಅವರು ತಿಳಿಸಿದ್ದಾರೆ ಎಂದು ವರದಿ ಆಗಿದೆ.
ಭಾವನಾತ್ಮಕ ಹಾಗೂ ದೈಹಿಕ ನೋವಿಗೆ ಪರಿಹಾರವಾಗಿ 50 ಲಕ್ಷ ರೂ. ಪರಿಹಾರ ನೀಡಬೇಕು. ಇನ್ನೂ ಚಿಕಿತ್ಸೆ ಪಡೆದ ವೆಚ್ಚವನ್ನು 15 ದಿನಗಳಲ್ಲಿ ಪಾವತಿಸಬೇಕೆಂದು ನೋಟಿಸ್‌ನಲ್ಲಿ ಒತ್ತಾಯಿಸಿದ್ದಾರೆ.












Click it and Unblock the Notifications