ಲೈಂಗಿಕ ಕಿರುಕುಳ, ಬೆಂಗ್ಳೂರು ಮಹಾರಾಣಿ ಕಾಲೇಜ್ ಪ್ರಾಧ್ಯಾಪಕ ಅಮಾನತು
ಕಾಲೇಜ್ ಉತ್ಸವದ ವೇಳೆ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ವಿದ್ಯಾರ್ಥಿನಿಯೊಬ್ಬರು ನೀಡಿರುವ ದೂರಿನ ಮೇರೆಗೆ ಮಹಾರಾಣಿ ಮಹಿಳಾ ಕಾಲೇಜ್ ಪ್ರಾಧ್ಯಾಪಕನನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು, ಮಾರ್ಚ್. 20 : ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಾರಾಣಿ ಮಹಿಳಾ ಕಾಲೇಜ್ ಪ್ರಾಧ್ಯಾಪಕ ಬೇಗೂರು ರಾಮಲಿಂಗಪ್ಪ ಅವರನ್ನು ಕಾಲೇಜ್ ಶಿಕ್ಷಣ ಇಲಾಖೆ ಸೋಮವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಆಂತರಿಕ ದೂರುಗಳ ಸಮಿತಿ ನೀಡಿದ ತನಿಖಾ ವರದಿಯನ್ನು ಆಧರಿಸಿ ರಾಮಲಿಂಗಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಕಾಲೇಜ್ ಶಿಕ್ಷಣ ಇಲಾಖೆ ಆಯುಕ್ತ ಅಜಯ್ ನಾಗಭೂಷಣ್ ತಿಳಿಸಿದ್ದಾರೆ.[ಮತ್ತೆ ಬೆಂಗಳೂರಲ್ಲಿ ಯುವತಿಗೆ ಲೈಂಗಿಕ ಕಿರುಕುಳ?!]

ಕಾಲೇಜ್ ಆವರಣದಲ್ಲಿ ನಡೆದ ಕಾಲೇಜ್ ಉತ್ಸವದ ನಂತರ ರಾಮಲಿಂಗಪ್ಪ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಂಪಸ್ ನಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಮಹಾರಾಣಿ ಕಾಲೇಜ್ ನ ಮತ್ತೊಬ್ಬ ಪ್ರಾಧ್ಯಾಕರನ್ನು ಸಹ ಅಮಾನತುಗೊಳಿಸಲಾಗಿದೆ.












Click it and Unblock the Notifications