ಮದ್ದೇವಣಾಪುರ ಮಠದಲ್ಲಿ ರಾಸಲೀಲೆ, ಸ್ವಾಮೀಜಿ ನಾಪತ್ತೆ
Recommended Video

ಬೆಂಗಳೂರು, ಅಕ್ಟೋಬರ್ 26 : ಯಲಹಂಕದ ಮದ್ದೇವಣಾಪುರ ಮಠದ ಸ್ವಾಮೀಜಿಯ ಪುತ್ರನ ರಾಸಲೀಲೆಯ ವಿಡಿಯೋ ಬಯಲಾಗಿದ್ದು, ಮಠದ ಪೀಠಾಧಿಪತಿ ಶಿವಚಾರ್ಯ ಸ್ವಾಮೀಜಿ ಪುತ್ರ ದಯಾನಂದ ಅಲಿಯಾಸ್ ನಂಜೇಶ್ವರ ಸ್ವಾಮೀಜಿ ಎಲ್ಲಿದ್ದಾರೆ ಎನ್ನುವುದು ಈವರೆಗೆ ಸುಳಿವು ಸಿಕ್ಕಿಲ್ಲ.
ಆದರೆ, ಮಠದ ಮುಂದೆ ನೂರಾರು ಭಕ್ತರು ಸೇರಿದ್ದು, ಕೈಡಲೇ ಪೀಠಾಧಿಪತಿ ಸ್ಥಾನದಿಂದ ಶಿವಚಾರ್ಯ ಸ್ವಾಮೀಜಿ ಅವರನ್ನು ಕಿತ್ತೊಗೆಯುವಂತೆ ಪಟ್ಟು ಹಿಡಿದಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್. "ಈವರೆಗೆ ಯಾವುದೇ ದೂರು ದಾಖಲಾಗಿಲ್ಲ. ವಿಡಿಯೋದಲ್ಲಿರುವ ಯುವತಿಗೆ ಅನ್ಯಾಯವಾಗಿದ್ದರೇ ದೂರು ನೀಡಬಹುದು.
ಅಥವಾ ಮಠದ ಟ್ರಸ್ಟಿಗಳು ದೂರು ನೀಡಿದರೆ ವಿಚಾರಣೆ ನಡೆಸಲಾಗುತ್ತದೆ. ಕಂಪ್ಲೇಟ್ ನೀಡುವವರೆಗೆ ನಾವು ಏನು ಮಾಡುವುದಕ್ಕೆ ಆಗಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮದ್ದೇವಣಾಪುರ ಮಠದ ಪೀಠಾಧಿಪತಿ ಶಿವಚಾರ್ಯ ಸ್ವಾಮೀಜಿ ಪುತ್ರ ದಯಾನಂದ ಅಲಿಯಾಸ್ ನಂಜೇಶ್ವರ ಸ್ವಾಮೀಜಿ ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯ ವಿವಿಧ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇದೀಗ ದಯಾನಂದನ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಮಠ ಬಿಟ್ಟು ತೆರಳಿ ಬೇರೆ ಸಭ್ಯ ಉತ್ತರಾಧಿಕಾರಿಯನ್ನು ನೇಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ವಿಷಯ ಹರುಡುತ್ತಿದ್ದಂತೆಯೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠದ ಮುಂದೆ ಜಮಾಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಠದ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.












Click it and Unblock the Notifications