ಮದುವೆ ಮುರಿದಿದ್ದಕ್ಕೆ ರಾಜರಾಜೇಶ್ವರಿ ನಗರ ಯುವತಿ ಆತ್ಮಹತ್ಯೆ

ನಿಶ್ಚಿತಾರ್ಥದ ಬಳಿಕ ಮದುವೆ ಮುರಿದಿದ್ದಕ್ಕೆ ಮನನೊಂದು ಯುವತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ನಡೆದಿದೆ.

ಬೆಂಗಳೂರು, ಮಾರ್ಚ್ 2: ನಿಶ್ಚಿತಾರ್ಥದ ಬಳಿಕ ಮದುವೆ ಮುರಿದಿದ್ದಕ್ಕೆ ಮನನೊಂದು ಯುವತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ನಡೆದಿದೆ.

ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂಬಿಎ ಪದವೀಧರೆ ನಾಗಲಕ್ಷ್ಮೀ ಮಂಗಳವಾರ ಸಂಜೆ ಬೆಡ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ತಂದೆ ಪಾದರಕ್ಷೆ ಮಳಿಗೆ ನಡೆಸುತ್ತಿದ್ದಾರೆ.[ದರೋಡೆಗೆ ಹೊಂಚು ಹಾಕುತ್ತಿದ್ದ ರೌಡಿ ಶೀಟರ್ ಮೇಲೆ ಫೈರಿಂಗ್]

ಆಗಿದ್ದೇನು?

ನಾಗಲಕ್ಷ್ಮೀ ಮತ್ತು ಐರ್ಲೆಂಡ್ ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಕೆಲಸದಲ್ಲಿದ್ದ ಕಾರ್ತಿಕ್ ಒಬ್ಬರಿಗೊಬ್ಬರು ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿದ್ದರು. ನಂತರ ಮಾತುಕತೆಗಳನ್ನೆಲ್ಲಾ ನಡೆಸಿ ಮದುವೆಯಾಗುವುದಕ್ಕೆ ನಿರ್ಧರಿಸಿದ್ದರು. ಇದಕ್ಕೆ ಕುಟುಂಬದವರ ಒಪ್ಪಿಗೆಯೂ ಸಿಕ್ಕಿ ಮದುವೆ ನಿರ್ಧಾರವಾಗಿತ್ತು. ಮದುವೆಯಾಗಲೆಂದೇ ಕಾರ್ತಿಕ್ ಹೈದರಾಬಾದಿಗೆ ಬಂದು ನೆಲೆಸಿದ್ದರು.

Bengaluru: Lady got suicide after her marriage broken

ಆದರೆ ಇದರ ಮಧ್ಯೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ತಿಕ್ ತಂದೆ ತೀರಿಕೊಂಡಿದ್ದರು. ಹೀಗಾಗಿ ಒಂದು ವರ್ಷ ಬಿಟ್ಟು ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರಲಾಗಿತ್ತು. ಕೊನೆಗೆ ಇದೇ ಮೇ 22, 2017ರಂದು ಮದುವೆ ನಿಶ್ಚಯವಾಗಿತ್ತು.[ಕಮ್ಮನಹಳ್ಳಿ ಪ್ರಕರಣದ ಆರೋಪಿಗಳನ್ನು ಗುರುತಿಸಿದ ಸಂತ್ರಸ್ತೆ]

ರಾಜಲಕ್ಷ್ಮೀ ತಂದೆ ತಾಯಿ ಕಲ್ಯಾಣ ಮಂಟಪ ಬುಕ್ ಮಾಡಿ ಮದುವೆಗೆ ಬೇಕಾದ ಸಿದ್ಧತೆಗಳನ್ನೆಲ್ಲಾ ನಡೆಸುತ್ತಿದ್ದರು.

ನಡೆಯಿತು ದುರಂತ

ಏನಾಯಿತೋ ಗೊತ್ತಿಲ್ಲ ಕಳೆದ 10 ದಿನಗಳ ಹಿಂದೆ ಕಾರ್ತಿಕ್ ಕಡೆಯಿಂದ ನಾಗಲಕ್ಷ್ಮಿಗೆ ವಾಟ್ಸ್ ಆ್ಯಪ್ ಸಂದೇಶ ಬಂದಿತ್ತು. ಇದರಲ್ಲಿ ನಾನು ನಿನ್ನನ್ನು ಮದುವೆಯಾಗುತ್ತಿಲ್ಲ ಎಂದು ಕಾರ್ತಿಕ್ ತಿಳಿಸಿದ್ದರು. ಮದುವೆ ಮುರಿಯದಂತೆ ಹಿರಿಯರೆಲ್ಲಾ ಮಾತುಕತೆ ನಡೆಸಿ ಪ್ರಯತ್ನ ನಡೆಸಿದರೂ ಕಾರ್ತಿಕ್ ಒಪ್ಪಲು ಸಿದ್ಧವಿರಲಿಲ್ಲ.[ರಾಜಕಾಲುವೆಗೆ ಬಿದ್ದು 7 ವರ್ಷದ ಬಾಲಕ ಸಾವು]

ನಾಗಲಕ್ಷ್ಮೀ ಜತೆ ಕಾರ್ತಿಕ್ ಮಾತನ್ನೂ ಆಡುತ್ತಿರಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಂದೆಗೆ ಡೆತ್ ನೋಟನ್ನು ಇ ಮೇಲ್ ಮಾಡಿದ್ದಾರೆ. 'ಮದುವೆ ರದ್ದಾಗಿರುವುದರಿಂದ ಸ್ನೇಹಿತರು ಮತ್ತು ಸಂಬಂಧಿಕರ ಪ್ರಶ್ನೆಗೆ ಉತ್ತರಿಸಲು ಆಗುತ್ತಿಲ್ಲ. ನಿರ್ಧಾರದಿಂದ ನಿಮಗೂ ಬೇಸರವಾಗಿರಬಹುದು,' ಎಂದು ಮೇಲ್ ನಲ್ಲಿ ಬರೆದಿದ್ದಾರೆ.

ಮೂಲಗಳ ಪ್ರಕಾರ ಕಾರ್ತಿಕ್ ಕುಟುಂಬ ಹೆಚ್ಚಿನ ವರದಕ್ಷಿಣೆಗೆ ಒತ್ತಾಯಿಸಿತ್ತು ಎನ್ನಲಾಗಿದೆ. ನಾಗಲಕ್ಮೀ ತಂದೆಯ ದೂರಿನ ಮೇರೆಗೆ ಎಂ.ಆರ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+