Bengaluru Airport: ಬೆಂಗಳೂರು ಕೆಂಪೇಗೌಡ ಅಂತಾರಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್-1ರ ಅಭಿವೃದ್ಧಿ ಕಾಮಗಾರಿ ಬಿಗ್ ಅಪ್ಡೇಟ್
Bengaluru Airport: ಬೆಂಗಳೂರಿನ ಕೆಂಪೇಗೌಡ ಅಂತಾರಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತದೆ. ಈ ಕಾಮಗಾರಿಯನ್ನು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಎರಡು ತಿಂಗಳೊಳಗೆ ಪ್ರಾರಂಭ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಏನೆಲ್ಲ ಹೊಸ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಹಾಗೂ ಇದರ ಕಾಮಗಾರಿ ಯಾವಾಗ ಮುಕ್ತಾಯವಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಟರ್ಮಿನಲ್ 1 ನವೀಕರಣ ಕಾರ್ಯವು 2026ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಇದು ದೇಶೀಯ ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸೌಲಭ್ಯಗಳನ್ನು ಒದಗಿಸಲಿದೆ. ಇನ್ನು "ಇದರ ನವೀಕರಣದ ಕಾಮಗಾರಿಯೂ ಆಗಸ್ಟ್ 2024ರ ವೇಳೆಗೆ ಪ್ರಾರಂಭವಾಗುತ್ತದೆ. ಅಲ್ಲದೆ ಇದೀಗ ಕಾಮಗಾರಿಗೆ ಸುಗಮಗೊಳಿಸುವ ದೃಷ್ಟಿಯಿಸಮದ ಪೂರ್ವಸಿದ್ಧತಾ ಚಟುವಟಿಕೆಗಳು ನಡೆಯುತ್ತಿವೆ" ಎಂದು BIAL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ," ಎನ್ನುವ ಮಾಹಿತಿ ಲಭ್ಯವಾಗಿದೆ.

ಮೇ 24, 2008ರಂದು ಕಾರ್ಯಾಚರಣೆಯನ್ನು ಆರಂಭಿಸಿದ ವಿಮಾನನಿಲ್ದಾಣದ ಟರ್ಮಿನಲ್ 1ರಲ್ಲಿ ದೇಶೀಯ ವಿಮಾನಗಳಿಗೆ ಮಾತ್ರ ಕಾರ್ಯನಿರ್ವಹಣಗೆ ಅವಕಾಶ ನೀಡಲಾಗಿತ್ತು. ಟರ್ಮಿನಲ್ 2ನಲ್ಲಿ ಕೆಲವು ದೇಶೀಯ ವಿಮಾನಗಳ ಜೊತೆಗೆ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಗೆ ಮೀಸಲಾಗಿದೆ. ಟರ್ಮಿನಲ್-2ನಲ್ಲಿ ಜನವರಿ 15, 2023ರಂದು ದೇಶೀಯ ವಿಮಾನಗಗಳ ಕಾರ್ಯಾಚರಣೆ ಮತ್ತು ಸೆಪ್ಟೆಂಬರ್ 12, 2023ರಂದು ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳು ಆರಂಭವಾದವು.
ಇನ್ನು ನವೀಕರಣ ಹಿನ್ನೆಲೆ ಟರ್ಮಿನಲ್-1ರ ಕೊಠಡಿಗಳ ಸ್ಥಳಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ಪಶ್ಚಿಮ ಬಸ್ ಬೋರ್ಡಿಂಗ್ ಗೇಟ್‌ಗಳ ಕೆಡವುವಿಕೆ ಮತ್ತು ಕಚೇರಿ ಸ್ಥಳಗಳ ಸ್ಥಳಾಂತರ ಸೇರಿದಂತೆ ಕೆಲಸಗಳೊಂದಿಗೆ ಕಾಮಗಾರಿ ಪ್ರಾರಂಭವಾಗುತ್ತದೆ. "ಈ ಪ್ರಾಥಮಿಕ ಹಂತಗಳು 2025ರ ಆರಂಭದಲ್ಲಿ ಪ್ರಾರಂಭವಾಗುವ ಪ್ರಮುಖ ಕೆಲಸಗಳಿಗೆ ದಾರಿ ಮಾಡಿಕೊಡುತ್ತವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಗೇಜ್ ಹ್ಯಾಂಡ್ಲಿಂಗ್ ಸಿಸ್ಟಮ್ಸ್, ಚೆಕ್-ಇನ್, ಸೆಕ್ಯುರಿಟಿ, ಡಿಪಾರ್ಚರ್ ಲಾಂಜ್‌ಗಳು/ಹೋಲ್ಡ್ ರೂಮ್‌ಗಳು ಮತ್ತು ವರ್ಗಾವಣೆ ಭದ್ರತೆಯಂತಹ ಸೌಲಭ್ಯಗಳನ್ನು ಇಲ್ಲಿ ಕಾಣಲಾಗುತ್ತದೆ. "ಪ್ರಯಾಣಿಕರನ್ನು ಹೆಚ್ಚಿಸಲು ಹೆಚ್ಚು ಸೌಕರ್ಯಗಳು ಮತ್ತು ಕಾರ್ಯಾಚರಣೆಯ ಸೌಲಭ್ಯಗಳಿಗೆ ಅನುಗುಣವಾಗಿ ನವೀಕರಣ ಮಾಡಲಾಗುತ್ತದೆ. ಈಗಾಗಗಲೇ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳು ಟರ್ಮಿನಲ್-2ಗೆ ಸ್ಥಳಾಂತರಗೊಂಡಿದ್ದು, ಇದೀಗ ಇಲ್ಲಿ ಟರ್ಮಿನಲ್-1ರ ದೇಶೀಯ ವಿಮಾನಗಳ ಕಾರ್ಯಚರಣೆ ಮಾಡಲು ಅನುವು ಮಾಡಿಕೊಡಲಾಗುತ್ತದೆ," ಎಂದು ಬಿಐಎಎಲ್ ವಕ್ತಾರರು ತಿಳಿಸಿದರು.
ಕಾರ್ಯಾಚರಣೆಗೆ ಅಡ್ಡಿಯಾಗುವುದನ್ನು ತಪ್ಪಿಸಲು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಟರ್ಮಿನಲ್-1ರಲ್ಲಿ ಈ ಅಭಿವೃದ್ಧಿ ಕಾಮಗಾರಿಯನ್ನು ಮಾಡಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಮತ್ತೊಂದೆಡೆ "2026ರ ಅಂತ್ಯದ ವೇಳೆಗೆ ಕೆಲಸಗಳು ಬಹುತೇಕ ಪೂರ್ಣಗೊಳ್ಳುವ ನಿರೀಕ್ಷೆಯಿದೆ," ಅಂತಲೂ ಹೇಳಿದ್ದಾರೆ.
ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಟರ್ಮಿನಲ್-1 ಅನ್ನು ಅಭಿವೃದ್ಧಿ ಮಾಡಲು ಯೋಜಿಸುತ್ತಿದ್ದೇವೆ ಎಂದು BIAL ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖವಾಗಿ ಈ ಅಭಿವೃದ್ಧಿ ಕಾಮಗಾರಿಯು, ಚೆಕ್-ಇನ್ ಬ್ಯಾಗೇಜ್ ಇಲ್ಲದೆ ಪ್ರಯಾಣಿಕರಿಗೆ ಮೀಸಲಾದ ಪ್ರವೇಶವನ್ನು ಒಳಗೊಂಡಿರುತ್ತದೆ. ವಿಶ್ರಾಂತಿಗಾಗಿ ಸ್ಥಳವಕಾಶ, ಯುವ ಪ್ರಯಾಣಿಕರನ್ನು ರಂಜಿಸಲು ಮಕ್ಕಳ ಆಟದ ಪ್ರದೇಶ, ಶೌಚಾಲಯಗಳು, ಸುಧಾರಿತ ಎಸ್ಕಲೇಟರ್‌ಗಳು, ಎಲಿವೇಟರ್‌ಗಳು ಸೇರಿದಂಯೆ ಅಗತ್ಯ ಸುಧಾರಿತ ಸೇವೆಗಳನ್ನು ಒದಗಿಸಲಾಗುತ್ತದೆ.
ಪ್ರಸ್ತುತ, "ಟರ್ಮಿನಲ್ 1 ಮತ್ತು 2ರಲ್ಲಿ ವಾರ್ಷಿಕ 52 ಮಿಲಿಯನ್ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಟರ್ಮಿನಲ್ ನವೀಕರಣ ಪೂರ್ಣಗೊಂಡ ನಂತರ, ಒಟ್ಟು ಪ್ರಯಾಣಿಕರ ಸಾಮರ್ಥ್ಯವು 60 ಮಿಲಿಯನ್‌ಗೆ ಹೆಚ್ಚಾಗುತ್ತದೆ. ಟರ್ಮಿನಲ್-2ನ ನೇ ಹಂತದಲ್ಲಿ 20 ಮಿಲಿಯನ್ ಸಾಮರ್ಥ್ಯದ ಪ್ರಯಾಣಿಕರು ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಈ ಮೂಲಕ ಇದು ವಿಮಾನ ನಿಲ್ದಾಣದ ದಕ್ಷಿಣ ಭಾಗದಲ್ಲಿ 40 ಪ್ರತಿಶತ ಪ್ರದೇಶದ ಅಭಿವೃದ್ಧಿ ಹೊಂದಿದ್ದು, ಇದು 45 ಮಿಲಿಯನ್ ಪ್ರಯಾಣಿಕರನ್ನು ಪೂರೈಸುತ್ತದೆ," ಎಂದು ಬಿಐಎಎಲ್ ಅಧಿಕಾರಿ ಹೇಳಿದರು.
ಇತ್ತೀಚೆಗೆ ಅಂತಾರಾಷ್ಟ್ರೀಯ ಕಾರ್ಯಾಚರಣೆಯನ್ನು ಆರಂಭಿಸಿದ ಟರ್ಮಿನಲ್-2, ಪ್ರಸ್ತುತ ಗಂಟೆಗೆ ಗರಿಷ್ಠ 1,400 ದೇಶಿಯ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದ್ದು, ಗಂಟೆಗೆ 1,300 ಅಂತರಾಷ್ಟ್ರೀಯ ಸೇವೆಯ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಇದು ಪ್ರಸ್ತುತ ಅದರ ಒಟ್ಟಾರೆ ಸಾಮರ್ಥ್ಯದ 45-50 ಪ್ರತಿಶತದಷ್ಟು ಕಾರ್ಯನಿರ್ವಹಿಸುತ್ತಿದೆ. ಈ ವಿಸ್ತರಣೆಯು ಹೆಚ್ಚುತ್ತಿರುವ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಮತ್ತು ಸೇವೆಯ ವಿಸ್ತರಣೆಯೇ ನಮ್ಮ ಪ್ರಮುಖ ಆದ್ಯೆತೆಯಾಗಿದೆ ಎಂದು ಹೇಳಿದ್ದಾರೆ.
ಮುಂಬರುವ ಟರ್ಮಿನಲ್-3 ಸ್ಥಿತಿಯ ಮಾತನಾಟಿದ ಅಧಿಕಾರಿಗಳು, "ಬೆಂಗಳೂರು ವಿಮಾನ ನಿಲ್ದಾಣವು 2030ರ ದಶಕದ ಆರಂಭದಲ್ಲಿ ವಿಮಾನ ಸೇವೆಗೆ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಈ ಮೂಲಕ ವಾರ್ಷಿಕವಾಗಿ 90-100 ಮಿಲಿಯನ್ ಪ್ರಯಾಣಿಕರನ್ನು ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳಿ ಹೇಳಿದ್ದಾರೆ.












Click it and Unblock the Notifications