ಬೆಂಗಳೂರು ವಿಮಾನ ನಿಲ್ದಾಣ ವೇಳಾಪಟ್ಟಿ ಬದಲಾವಣೆ, ಇಲ್ಲಿದೆ ಮಾಹಿತಿ
ಫೆಬ್ರವರಿ 8ರಿಂದ ಪ್ರಾರಂಭವಾಗುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಕಾರಣದಿಂದಾಗಿ ಮೂರು ಗಂಟೆಗಳವರೆಗೆ ವಾಯುಪ್ರದೇಶವನ್ನು ನಿರ್ಬಂಧಿಸುವುದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಮಾನ ನಿಲ್ದಾಣವು ಘೋಷಿಸಿದೆ.
ಬೆಂಗಳೂರು, ಫೆಬ್ರವರಿ 6: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ದ್ವೈವಾರ್ಷಿಕ ವೈಮಾನಿಕ ಪ್ರದರ್ಶನದ ಕಾರಣ ಮುಂಬರುವ ಏರೋ ಇಂಡಿಯಾ 2023ರ ಸಮಯದಲ್ಲಿ ಮತ್ತು ಅದರ ಮೊದಲು ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ವಿಮಾನ ನಿಲ್ದಾಣ ನಿರ್ವಾಹಕರು ತಿಳಿಸಿದ್ದಾರೆ.
ಫೆಬ್ರವರಿ 8ರಿಂದ ಪ್ರಾರಂಭವಾಗುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಕಾರಣದಿಂದಾಗಿ ಪ್ರತಿ ದಿನ ಬೆಳಗ್ಗೆ ಮೂರು ಹಾಗೂ ಮಧ್ಯಾಹ್ನ 3 ಗಂಟೆ ವಾಯುಪ್ರದೇಶವನ್ನು ನಿರ್ಬಂಧಿಸುವುದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಮಾನ ನಿಲ್ದಾಣವು ಘೋಷಿಸಿದೆ. ಏರೋ ಇಂಡಿಯಾ ಪ್ರದರ್ಶನದ 14ನೇ ಆವೃತ್ತಿಯು ಫೆಬ್ರವರಿ 13ರಿಂದ 17 ರವರೆಗೆ ಯಲಹಂಕದ ಏರ್‌ಫೋರ್ಸ್ ನಿಲ್ದಾಣದಲ್ಲಿ ನಡೆಯಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಷ್ಕೃತ ವೇಳಾಪಟ್ಟಿ ಹೀಗಿದೆ
1. ಫೆಬ್ರವರಿ 8ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಇರುವುದಿಲ್ಲ. (ವಿವಿಧ ತಂಡಗಳಿಂದ ವೈಯಕ್ತಿಕ ಅಭ್ಯಾಸ) ಮತ್ತು ಮಧ್ಯಾಹ್ನ 2 ರಿಂದ 5 ರವರೆಗೆ (ಅಭ್ಯಾಸಕ್ಕಾಗಿ ಸ್ಟ್ಯಾಂಡ್-ಬೈ ಬ್ಲಾಕ್) ವಿಮಾನ ಹಾರಾಟ ನಿರ್ಬಂದಿಸಲಾಗಿರುತ್ತದೆ.

2. ಫೆಬ್ರವರಿ 9 ಮತ್ತು 10ರಂದು ಬೆಳಿಗ್ಗೆ 9ರಿಂದ 12 ರವರೆಗೆ (ಫುಲ್ ಫೋರ್ಸ್ ಫ್ಲೈ-ಪಾಸ್ಟ್ ಮತ್ತು ಫ್ಲೈಯಿಂಗ್ ಡಿಸ್ಪ್ಲೇ ಅಭ್ಯಾಸ) ಮತ್ತು ಮಧ್ಯಾಹ್ನ 2 ರಿಂದ 5 ರವರೆಗೆ (ಅಭ್ಯಾಸಕ್ಕಾಗಿ ಸ್ಟ್ಯಾಂಡ್-ಬೈ ಬ್ಲಾಕ್) ವಿಮಾನ ಹಾರಾಟ ನಿರ್ಬಂಧಿಸಲಾಗಿತ್ತದೆ.
3. ಫೆಬ್ರವರಿ 11ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ (ಅಂತಿಮ ಪೂರ್ವಾಭ್ಯಾಸ) ವಿಮಾನ ಹಾರಾಟ ರದ್ದು ಮಾಡಲಾಗಿರುತ್ತದೆ.
4. ಫೆಬ್ರವರಿ 12ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ (ಅಂತಿಮ ಪೂರ್ವಾಭ್ಯಾಸಕ್ಕಾಗಿ ಸ್ಟ್ಯಾಂಡ್-ಬೈ) ಕೆಐಎಯಿಂದ ವಿಮಾನ ಹಾರಾಟ ರದ್ದು ಮಾಡಲಾಗಿರುತ್ತದೆ.

5. ಫೆಬ್ರವರಿ 13ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ (ಉದ್ಘಾಟನಾ ಸಮಾರಂಭ, ಫ್ಲೈ-ಪಾಸ್ಟ್ ಮತ್ತು ಫ್ಲೈಯಿಂಗ್ ಡಿಸ್ಪ್ಲೇ); ವಿಮಾನ ನಿರ್ಬಂಧಿಸಲಾಗಿತ್ತದೆ.
6. ಫೆಬ್ರವರಿ 14 ಮತ್ತು 15ರಂದು ಮಧ್ಯಾಹ್ನ 12 ರಿಂದ 2.30 (ಫ್ಲೈಯಿಂಗ್ ಡಿಸ್ಪ್ಲೇ) ವಿಮಾನ ಸೇವೆ ಇರುವುದಿಲ್ಲ.
7. ಫೆಬ್ರವರಿ 16 ಮತ್ತು 17: 9.30 ರಿಂದ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5 ರವರೆಗೆ (ಫ್ಲೈಯಿಂಗ್ ಡಿಸ್ಪ್ಲೇ). ವಿಮಾನ ಸೇವೆ ನಿರ್ಬಂಧಿಸಲಾಗಿರುತ್ತದೆ. ಬದಲಾದ ಮತ್ತು ಪರಿಷ್ಕೃತ ಹಾರಾಟದ ವಿಮಾನ ವೇಳಾಪಟ್ಟಿಯ ಬಗ್ಗೆ ಮಾಹಿತಿಗಾಗಿ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.












Click it and Unblock the Notifications