Bengaluru-Karwar Train: ಬೆಂಗಳೂರು-ಕರಾವಳಿಗೆ ಮತ್ತೊಂದು ವಿಶೇಷ ರೈಲು ಸಂಚಾರ, ವೇಳಾಪಟ್ಟಿ
ಬೆಂಗಳೂರು, ಜುಲೈ 22: ಕರ್ನಾಟಕದ ಕರಾವಳಿ ಭಾಗದಲ್ಲಿ ವಿಪರೀತ ಮಳೆ ಆಗಿ, ಗುಡ್ಡ ಕುಸಿತ, ಹೆದ್ದಾರಿ ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮಾಣಿಕರಿಗೆ ಅನುಕೂಲಕರ ಸಾರಿಗೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವಾಲಯ ವಿಶೇಷ ರೈಲು ಕಾರ್ಯಾಚರಣೆಗೆ ನಿರ್ಧರಿಸಿದೆ.
ಹೌದು, ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ಸಂಪರ್ಕಿಸುವ ಘಾಟಿ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿವೆ. ಸಾರಿಗೆ ಬಸ್‌ಗಳ ಸಂಖ್ಯೆ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಖಾತೆ ಕರ್ನಾಟಕ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದರು. ಕರಾವಳಿಗೆ ರೈಲು ಸೇವೆ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟರು.

ಸಂಸದರ ಮನವಿ ಸ್ಪಂದಿಸಿರುವ ಸಚಿವ ವಿ.ಸೋಮಣ್ಣ ಅವರು ಬೆಂಗಳೂರು-ಕರಾವಳಿಯ ಕುಂದಾಪುರ, ಕಾರವಾರ ಸಂಪರ್ಕಿಸುವ ವಿಶೇಷ ರೈಲು ಕಾರ್ಯಾಚರಣೆಗೆ ಸೂಚಿಸಿದ್ದಾರೆ. ಈಗಾಗಲೇ ಬೆಂಗಳೂರು-ಮಂಗಳೂರಿಗೆ ವಿಶೇಷ ರೈಲು ಬಿಡಲಾಗಿತ್ತು. ಇದರ ಬೆನ್ನಲ್ಲೆ ಬೆಂಗಳೂರಿನಿಂದ ಕುಂದಾಪುರಕ್ಕೆ ವಿಶೇಷ ರೈಲು ಸೇವೆ ಲಭ್ಯವಿದೆ. ಯಾವ ದಿನಾಂಕದಂದು ರೈಲು ಸಂಚರಿಸಲಿದೆ ಎಂಬ ಮಾಹಿತಿ, ವೇಳಾಪಟ್ಟಿ ಇಲ್ಲಿದೆ.
ಬೆಂಗಳೂರು-ಕಾರವಾರ ರೈಲು ಸಂಚಾರ ವೇಳಾಪಟ್ಟಿ
ಈ ವಿಶೇಷ ರೈಲು ಬೆಂಗಳೂರಿನಿಂದ ಕರಾವಳಿಗೆ ಇದೇ ಜುಲೈ 26 ಹಾಗೂ ಜುಲೈ 28 ರಂದು ರೈಲು ಸಂಚರಿಸಲಿದೆ. ಪಡಿಲು ಬೈಪಾಸ್ ಮೂಲಕ ಕುಂದಾಪುರ ಮತ್ತು ಕಾರವಾರವರೆಗೆ ಸೇವೆ ನೀಡಲಿದೆ. ನಂತರ ಬೆಂಗಳೂರಿಗೆ ಮರಳಲಿದೆ.

ಈ ರೈಲು ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ ಜುಲೈ 26ರಂದು ರಾತ್ರಿ 12.30ಕ್ಕೆ ಸಂಚಾರ ಆರಂಭಿಸುತ್ತದೆ. ಜುಲೈ 27ರ ಬೆಳಗ್ಗೆ 11.30 ಉಡುಪಿ, 12.15ಕ್ಕೆ ಕುಂದಾಪುರ ಹಾಗೂ ಸಂಜೆ 4 ಗಂಟೆಗೆ ಕಾರವಾರ ತಲುಪಲಿದೆ.
ಮರಳಿ ಜುಲೈ 27ರಂದು ರಾತ್ರಿ 11.30ಕ್ಕೆ ಕಾರವಾರದಿಂದ ಪ್ರಯಾಣ ಆರಂಭಿಸುತ್ತದೆ. ಅಲ್ಲಿಂದ ಕುಂದಾಪುರ, ಉಡುಪಿ ಮಾರ್ಗವಾಗಿ ಮತ್ತ ಪಡೀಲು ಬೈಪಾಸ್ ಮೂಲಕ ಮಾರನೇ ದಿನ (ಜುಲೈ 28) ಬೆಂಗಳೂರಿಗೆ ಬಂದು ಸೇರುತ್ತದೆ. ಬೆಂಗಳೂರಿನ ಸರ್ ಎಂವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಬರಲಿದೆ. ಮರಳಿ ಆವತ್ತೆ ರಾತ್ರಿ ಬೆಂಗಳೂರು SMVTಯಿಂದ ತಡರಾತ್ರಿ 2.30ಕ್ಕೆ ಕಾರವಾರಕ್ಕೆ ಪ್ರಯಾಣ ಬೆಳೆಸುತ್ತದೆ ಎಂದು ನೈಋತ್ಯ ರೈಲ್ವೆ ವೇಳಾಪಟ್ಟಿಯಲ್ಲಿ ತಿಳಿಸಿದೆ.
ಇದರಿಂದ ಮಳೆಗಾಲದಲ್ಲಿ ರಸ್ತೆ ಸಾರಿಗೆ ಸಮಸ್ಯೆಗೆ ಸಿಲುಕಿರುವ ಪ್ರಯಾಣಿಕರು ನಿಶ್ಚಿಂತೆಯಿಂದ ಕರಾವಳಿ, ಕುಂದಾಪುರಕ್ಕೆ, ಬೆಂಗಳೂರಿಗೆ ರೈಲಿನಲ್ಲಿ ಸಂಚರಿಸಬಹುದಾಗಿದೆ.












Click it and Unblock the Notifications