Bengaluru-Kalaburagi Train: ಕೊನೆಗೂ 'ಯಾದಗಿರಿ'ಯಲ್ಲಿ ವಂದೇ ಭಾರತ್ ನಿಲುಗಡೆ, ಸಮಯ-ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 04: ರಾಜ್ಯದ ದಕ್ಷಿಣದ ತುದಿಯಿಂದ ಕಲ್ಯಾಣ ಕರ್ನಾಟಕಕ್ಕೆ ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಭಾರೀ ಬೇಡಿಕೆ ಇದೆ. ಹೀಗಾಗಿಯೇ ಯಾದಗಿರಿಯಲ್ಲಿ ಈ ರೈಲು ನಿಲುಗಡೆಗೆ ಮನವಿ ಮಾಡಲಾಗಿದೆ. ಅದರಂತೆ ಆಗಸ್ಟ್ 03ರಂದು ಯಾದಗಿರಿ ನಿಲುಗಡೆ ಅಧಿಕೃತಗೊಳಿಸಿ ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.
ಬೆಂಗಳೂರಿಂದ ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಹಿಂದೆ ಯಾದಗಿರಿಗೆ ನಿಲುಗಡೆ ನೀಡಿತ್ತು. ತದನಂತರ ಕೆಲವು ಕಾರಣ ನೀಡಿ ಆ ನಿಲುಗಡೆ ರದ್ದುಗೊಳಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದಾಗ ಬಳಿಕ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರ ಬಳಿಕ ಯಾದಗಿರಿ ಹಾಗೂ ಸ್ಥಳ ನಾಯಕರು, ಜನರು ನಿಲುಗಡೆಗೆ ಒತ್ತಾಯಿಸಿದ್ದರು.

ಇದಕ್ಕೆ ಮಣಿದ ನೈಋತ್ಯ ರೈಲ್ವೆ ವಲಯವು ಇತ್ತೀಚೆಗೆ ನಿಲುಗಡೆ ನೀಡುವುದಾಗಿ ಘೋಷಿಸಿತ್ತು. ಅದರಂತೆ ಕೇಂದ್ರ ರೈಲ್ವೆ ಇಲಾಖೆ ಕರ್ನಾಟಕ ರಾಜ್ಯ ಖಾತೆಗೆ ಸಚಿವರಾದ ವಿ.ಸೋಮಣ್ಣ ಅವರು ಶನಿವಾರ ಬೆಂಗಳೂರಿಂದ ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22232) ಯಾದಗಿರಿಯಲ್ಲಿ ಹೆಚ್ಚುವರಿ ನಿಲುಗಡೆಗೆ ಹಸಿರುವ ನಿಶಾನೆ ತೋರಿಸಿದರು. ಈ ಮೂಲಕ ಯಾದಗಿರಿಯಲ್ಲಿ ವಂದೇ ಭಾರತ್ ನಿಲ್ಲದೆ ಎಂದು ಅವರು ಅಧಿಕೃತ ಪಡಿಸಿದರು.
ವಾರದ 06 ದಿನ ಸಂಚಾರ, ವೇಳಾಪಟ್ಟಿ
'ಪ್ರಾದೇಶಿಕ ಸಂಪರ್ಕಕ್ಕೆ ಉತ್ತೇಜನ' ಹೆಸರಿನಲ್ಲಿ ಯಾದಗಿರಿಯಲ್ಲಿ ನಿಲುಗಡೆ ನೀಡಲಾಗಿದೆ ಎಂದು ರೈಲ್ವೆ ತಿಳಿಸಿದೆ. ಈ ವಂದೇ ಭಾರತ್ ರೈಲು (ಸಂಖ್ಯೆ 22232/31) ವಾರದ ಆರು ದಿನ ಸಂಚರಿಸಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ((ಸಂಖ್ಯೆ 22231) ಕಲಬುರಗಿಯಿಂದ ಬೆಳಗ್ಗೆ 5.15ಕ್ಕೆ ಹೊರಟರೇ ಯಾದಗಿರಯಲ್ಲಿ 5.54ಕ್ಕೆ ನಿಲುಗಡೆ ನೀಡಿ 5.55 ಅಲ್ಲಿಂದ ಬಿಡುತ್ತದೆ. ನಂತರ ರಾಯಚೂರು, ಮಂತ್ರಾಲಯಂ ರಸ್ತೆ, ಗುಂಟಕಲ್, ಅನಂತಪುರ, ಯಲಹಂಕ ಮಾರ್ಗವಾಗಿ ಸಾಗಿ ಬೆಂಗಳೂರು ಎಸ್‌ಎಂವಿಟಿಗೆ ಮಧ್ಯಾಹ್ನ 02 ಗಂಟೆಗೆ ತಲುಪುತ್ತದೆ.

ಬೆಂಗಳೂರು ಎಸ್‌ಎಂವಿಟಿ ನಿಲ್ದಾಣದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22232) ಮಧ್ಯಾಹ್ನ 2.40ಕ್ಕೆ ಸಂಚಾರ ಆರಂಭಿಸಿದರೆ, ಪುನಃ ಯಲಹಂಕ, ಅನಂತಪುರ, ಗುಂಟಕಲ್, ಮಂತ್ರಾಲಯಂ ರಸ್ತೆ, ರಾಯಚೂರು, ಯಾದಗಿರಿ (ರಾತ್ರಿ 21.44) ತಲುಪಿ ಅಲ್ಲಿಂದ ಕಲಬುರಗಿಯನ್ನು 21.45ಕ್ಕೆ ತಲುಪುತ್ತದೆ.
ಬೆಂಗಳೂರು ಕಲಬುರಗಿ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರಿಗೆ ಈ ರೈಲಿನಿಂದ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೇ ಯಾದಗಿರಿಗೆ ನಿಲುಗಡೆ ಮಾಡದ್ದರಿಂದ ತೊಂದರೆ ಆಗಿತ್ತು. ಆದ್ದರಿಂದ ಈ ಭಾಗದ ಜನರಿಗೆ ಅನುಕೂಲವಾಗುಂತೆ ಮಾಡಲು ಸ್ಥಳೀಯರು, ಮುಖಂಡರು ರೈಲ್ವೆ ಇಲಾಖೆ ಮೇಲೆ ಒತ್ತಡ ಹೇರಿದ್ದರು.












Click it and Unblock the Notifications