ಬೆಂಗಳೂರು ಅಷ್ಟೊಂದು ದುಬಾರಿ ಅಲ್ಲ, ಯುವತಿ ಪೋಸ್ಟ್ ವೈರಲ್
ಬೆಂಗಳೂರು: ಬೆಂಗಳೂರಿನಲ್ಲಿ ಜೀವನ ಶೈಲಿ ಹೇಗಿದೆ ಹಾಗೂ ಬೆಂಗಳೂರಿನಲ್ಲಿ ದೇಶದ ಉಳಿದ ನಗರಗಳಲ್ಲಿ ಹೆಚ್ಚು ಖರ್ಚಾಗುತ್ತದೆಯೇ ಎನ್ನುವ ವಿಚಾರವು ಪದೇ ಪದೇ ಚರ್ಚೆ ಆಗುತ್ತಲ್ಲೇ ಇರುತ್ತದೆ. ಇದೀಗ ಕೇರಳದ ಯುವತಿಯೊಬ್ಬರು ಬೆಂಗಳೂರು ಅಷ್ಟೊಂದು ದುಬಾರಿ ಅಲ್ಲ, ಇಲ್ಲಿ ಉತ್ತಮ ಜೀವನ ನಡೆಸಬಹುದು ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರು ಬರೆದುಕೊಂಡಿರುವ ಬರಹವು ಇದೀಗ ವೈರಲ್ ಆಗುತ್ತಿದ್ದು. ಆ ಯುವತಿಯು ಬೆಂಗಳೂರಿನಲ್ಲಿ ಒಂದು ವರ್ಷದ ಅವಧಿಯಲ್ಲಿ ಅವರು ಖರ್ಚು ಮಾಡಿರುವ ಹಣದ ವಿವರವನ್ನೂ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಬಗ್ಗೆ ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿದ್ದವು. ಅದರಲ್ಲೂ ಬೆಂಗಳೂರಿಗೆ ಬಂದು ಇಲ್ಲಿ ಉದ್ಯೋಗ ಹಾಗೂ ಶಿಕ್ಷಣವನ್ನು ಪಡೆದುಕೊಂಡವರು, ಒಳ್ಳೆಯ ವ್ಯಾಪಾರ ಮಾಡಿ ಹಣ ಮಾಡಿಕೊಂಡವರು ಹೋಗುವ ಸಂದರ್ಭದಲ್ಲಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಬರೆಯುವುದು ಹಾಗೂ ವಿಡಿಯೋ ಮಾಡುವುದು ಒಂದು ಟ್ರೆಂಡ್ ಆಗಿಯೇ ಬದಲಾಗಿ ಹೋಗಿತ್ತು. ಇದೀಗ ಈ ರೀತಿ ಮಾಡುವವರಿಗೆ ಅಪವಾದ ಎನ್ನುವಂತೆ ಯುವತಿಯೊಬ್ಬರು ಬೆಂಗಳೂರಿನ ಬಗ್ಗೆ ಒಳ್ಳೆಯ ವಿಷಯ ಹಂಚಿಕೊಂಡಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಹೇಗೆ ಹಣ ಖರ್ಚು ಮಾಡಬೇಕು ಎನ್ನುವ ಬಗ್ಗೆಯೂ ಬರೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಒಂದು ವರ್ಷ ನೆಲೆಸಿದ್ದ ಕೇರಳದ 24 ವರ್ಷದ ವೃತ್ತಿಪರರೊಬ್ಬರು ತಮ್ಮ ಮಾಸಿಕ ಖರ್ಚಿನ ವಿವರವನ್ನು ಸೋಷಿಯಲ್ ಮೀಡಿಯಾ ವೇದಿಕೆಯಾದ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಜೀವನಶೈಲಿಯ ಆಯ್ಕೆ ವಿಚಾರದಲ್ಲಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡರೆ ಬೆಂಗಳೂರು ದುಬಾರಿ ನಗರವೇನೂ ಅಲ್ಲ ಅಂತ ಹೇಳಿದ್ದಾರೆ.
1 ವರ್ಷ ಬೆಂಗಳೂರಿನಲ್ಲಿ & ನನ್ನ ಖರ್ಚುಗಳ ವಿವರ ಇಲ್ಲಿವೆ ಎಂಬ ಶೀರ್ಷಿಕೆಯೊಂದಿಗೆ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರು ತುಂಬಾ ದುಬಾರಿ ನಗರ ಎಂದು ಲೇಬಲ್ ಮಾಡಿರುವುದು ತಪ್ಪು. ನಾವು ಹೇಗೆ ಖರ್ಚು ಮಾಡುತ್ತೇವೆ ಎನ್ನುವ ಆಧಾರದ ಮೇಲೆ ಯಾವುದೇ ನಗರವಾದರೂ ದುಬಾರಿಯೋ ಇಲ್ಲವೋ ಎನ್ನುವುದು ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.
ತಮ್ಮ ಮಾಸಿಕ ವೆಚ್ಚಗಳ ವಿವರಗಳನ್ನು ಹಂಚಿಕೊಂಡಿರುವ ಅವರು, ರೂಮ್‌ಮೇಟ್‌ನೊಂದಿಗೆ ಒಂದು ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೆ ಎಂದು ವಿವರಿಸಿದ್ದಾರೆ. ಮನೆ ಬಾಡಿಗೆಯು ಮಾಸಿಕ 13,000 ಸಾವಿರ ರೂಪಾಯಿ ಇತ್ತು. ಬಾಡಿಗೆ ಪಾಲು 7,000 ರೂಪಾಯಿ ಇತ್ತು. ಬೆಂಗಳೂರಿನಲ್ಲಿ ವಸತಿಗೆ ಹೆಚ್ಚು ಖರ್ಚು ಆಗುತ್ತದೆ. ಆದರೆ ಈ ರೀತಿ ಹಂಚಿಕೊಳ್ಳುವುದರಿಂದ ಮಾಸಿಕ ಖರ್ಚಿನ ಮೊತ್ತದಲ್ಲಿ ಉಳಿತಾಯವಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಊಟಕ್ಕೆ ಹೆಚ್ಚು ಖರ್ಚು
ಇನ್ನು ಬೆಂಗಳೂರಿನಲ್ಲಿ ಊಟಕ್ಕೆ ಹೆಚ್ಚು ಖರ್ಚು ಮಾಡಿರುವುದಾಗಿ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಊಟ ಹಾಗೂ ವಸತಿಗೆ ಹೆಚ್ಚು ಹಣ ಖರ್ಚಾಗುತ್ತಿದೆ ಎನ್ನುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಗುರುತಿಸಿದ್ದಾರೆ. ಬೆಂಗಳೂರಿನಲ್ಲಿ ಆಹಾರದ ಖರ್ಚಿನ ದೊಡ್ಡ ಭಾಗವಾಗಿದೆ. ಉಪಹಾರಕ್ಕೆ 62 ರೂಪಾಯಿಯ ನಾಲ್ಕು ಇಡ್ಲಿ, ಮಧ್ಯಾಹ್ನದ ಊಟಕ್ಕೆ 100 ರೂಪಾಯಿ ಹಾಗೂ ರಾತ್ರಿ ಊಟ 150 ರಿಂದ 250 ರೂಪಾಯಿಯ ಒಳಗೆ ಇರುತ್ತಿತ್ತು. ದಿನಕ್ಕೆ ಸರಾಸರಿ 200 ರೂಪಾಯಿ ಒಳಗೆ ಮುಗಿಸುತ್ತಿದ್ದೆ. ತಿಂಗಳಿಗೆ ಸುಮಾರು 5-7 ಬಾರಿ 248 ರೂಪಾಯಿ ಮೊತ್ತದ ಫುಡ್ ಆರ್ಡರ್ ಮಾಡುತ್ತಿದ್ದೆ ಒಟ್ಟಾರೆ ತಿಂಗಳಿಗೆ ಆಹಾರಕ್ಕೆಂದೇ 10,800 ರೂಪಾಯಿ ಖರ್ಚು ಮಾಡಿರುವುದಾಗಿ ಅವರು ಹೇಳಿದ್ದಾರೆ. ಒಟ್ಟಾರೆ ತಿಂಗಳಿಗೆ ವಸತಿ ಹಾಗೂ ಆಹಾರಕ್ಕೆ 15,000 ರಿಂದ 20,000 ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.
1 Year of living alone and here are my expenses
byu/adarshhehe inpersonalfinanceindia
ಈ ಮೊತ್ತವೂ ಸಹ ದುಬಾರಿಯೇ ಆಗಿದೆ. ಬೆಂಗಳೂರಿನಲ್ಲಿ ಹಲವರ ಸಂಬಳ 20,000 ಸಾವಿರ ರೂಪಾಯಿಯಿಂದ 25,000 ಸಾವಿರ ರೂಪಾಯಿಯ ಒಳಗೇ ಇದೆ. ಇನ್ನು ಪ್ರಯಾಣದ ಖರ್ಚನ್ನು ಇಲ್ಲಿ ದಾಖಲಿಸಿಲ್ಲ. ಅದೂ ಸಹ ಬೆಂಗಳೂರಿನಲ್ಲಿ ದೊಡ್ಡ ಮೊತ್ತವೇ ಎಂದು ಹಲವು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications