Bengaluru Aiport: ರಾಜ್ಯದ ಕಲೆ, ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಅರ್ಥಪೂರ್ಣ ದಸರಾ ಆಚರಣೆ

ಬೆಂಗಳೂರು, ಅಕ್ಟೋಬರ್ 01: ಕರ್ನಾಟಕದ ವಿವಿಧ ಕಡೆಯಂತೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಳೂ (KIA) ಸೆಪ್ಟೆಂಬರ್ 22ರಿಂದ 29ರವರೆಗೆ ನಾಡಹಬ್ಬ ದಸರಾ ಸಡಗರವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ವೇಳೆ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆಯನ್ನು ಪ್ರಯಾಣಿಕರ ಮುಂದೆ ವಿಶಿಷ್ಟವಾಗಿ ಪ್ರದರ್ಶಿಸಲಾಗಿದೆ. ಇಲ್ಲಿಗೆ ಬರುವ ದೇಶ-ವಿದೇಶಿ ಪ್ರಯಾಣಿಕರಿಗೆ ಕರ್ನಾಟಕದ ಅನನ್ಯ ಸಂಸ್ಕೃತಿ, ಸೊಬಗು ಕಣ್ತುಂಬಿಕೊಳ್ಳಲು ಅವಕಾಶ ದೊರೆಯಿತು.

ಏರ್‌ಪೊರ್ಟ್‌ನ ಟರ್ಮಿನಲ್ 1 ಮತ್ತು ಟರ್ಮಿನಲ್ 2 ರಲ್ಲಿ ದಸರಾ ಗೊಂಬೆಗಳನ್ನು ಕೂರಿಸುವ ಮೂಲಕ ಸಂಸ್ಕೃತಿ, ಕಲೆಯ ವೈಭವವನ್ನು ಸಾರಲಾಯಿತು. ವಿವಿಧ ಕಾರ್ಯಕ್ರಮಗಳು ಜರುಗಿದವು. ವೀಕ್ಷಕರು, ವಿಮಾನ ಟಿಕೆಟ್ ಇಲ್ಲದಿದ್ದರೂ, ಈ ಕಾರ್ಯಕ್ರಮಗಳನ್ನು ಉಚಿತವಾಗಿ ನೋಡುವ ಅವಕಾಶ ಮಾಡಿ ಕೊಡಲಾಗಿತ್ತು. ಬೆಂಗಳೂರು ನಗರದಿಂದ ಬಂದ ನಾಗರಿಕರೂ ದಸರಾ ಸಂಭ್ರಮವನ್ನು ನೋಡಿ ಖುಷಿಪಟ್ಟರು.

Bengaluru International Airport Celebrated Dasara 2025 with Cultural Extravaganza

ಜಾನಪದ ಕಲಾ ಪ್ರದರ್ಶನಗಳು

ವೇದಿಕೆಯ ಮೇಲೆ ವೀರಾವೇಶಭರಿತ ಡೊಳ್ಳು ಕುಣಿತ, ಗಾರುಡಿ ಗೊಂಬೆ ನೃತ್ಯ, ಬೇಡರ ನೃತ್ಯ ಮತ್ತು ತಮಟೆ ವಾದ್ಯ ಪ್ರದರ್ಶನಗಳು ಎಲ್ಲಾ ವಯಸ್ಕರು ಮತ್ತು ಮಕ್ಕಳ ಗಮನ ಸೆಳೆದವು. ಕಲಾವಿದರ ಶಕ್ತಿಪೂರ್ಣ ಪ್ರದರ್ಶನಗಳು ವೀಕ್ಷಕರನ್ನು ರೋಮಾಂಚನಗೊಳಿಸಿದವು ಎಂದು ಕೆಐಎ ತಿಳಿಸಿದೆ.

ಕೆಐಎಎಫ್ ಬೆಂಬಲಿತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಘಟಂ ವಾದ್ಯಗೋಷ್ಠಿ, ನೃತ್ಯಗಂಗಾ ಕಲಾ ಕೇಂದ್ರದ ದಸರಾ ವೈಭವ, ನವರಾತ್ರಿ ಕಥಾವರ್ಣನೆ, ಸುಗಮ ಸಂಗೀತ, ಯಕ್ಷಗಾನ ಪ್ರಸಂಗ, ಭರತನಾಟ್ಯ ನೃತ್ಯರೂಪಕಗಳು ಕಾರ್ಯಕ್ರಮವನ್ನು ವೈವಿಧ್ಯಮಯಗೊಳಿಸಿದವು. ಹೂವಿನಹಳ್ಳಿ ಗ್ರಾಮದ 9ನೇ ತಲೆಮಾರಿನ ಗೊಂಬೆಯಾಟದ ಕಲಾವಿದ ಶ್ರೀ ಗುಂಡುರಾಜು ರಾಮಾಯಣ, ಮಹಾಭಾರತ ಮತ್ತು ಪುರಾಣ ಕಥೆಗಳ ಮೂಲಕ ಪ್ರದರ್ಶನವು ನೋಡುಗರನ್ನು ಸೆಳೆಯಿತು.

ವಾಯುಯಾನ ಪ್ರಯಾಣಿಕರಿಗೆ ಸಾಂಸ್ಕೃತಿಕ ಅನುಭವ

ಬೆಂಗಳೂರು ವಿಮಾನ ನಿಲ್ದಾಣವು ಈ ವರ್ಷ ಕೇವಲ ಪ್ರಯಾಣದ ಕೇಂದ್ರವಲ್ಲ, ಸದರಾ ವೇಳೆ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸಿತು. ವಿವಿಧ ರಾಜ್ಯ ಮತ್ತು ದೇಶಗಳ ಪ್ರಯಾಣಿಕರಿಗೆ ಕರ್ನಾಟಕದ ಸಂಸ್ಕೃತಿ ಮತ್ತು ಕಲೆಯ ವೈಭವವನ್ನು ತಿಳಿದುಕೊಳ್ಳಲು ಇದು ವಿಶಿಷ್ಟ ಅವಕಾಶ ಮಾಡಿಟ್ಟಿತು. ಹಬ್ಬದ ವಾತಾವರಣವು ಪ್ರಯಾಣಿಕರಿಗೆ ಹೊಸ ಉತ್ಸಾಹವನ್ನು ತುಂಬಿತು. ಈ ಮೂಲಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಾಡಹಬ್ಬ ದಸರಾ ಆಚರಣೆಯನ್ನು ವಿಶೇಷವಾಗಿ ಯಶಸ್ವಿಯಾಗಿ ನಡೆಸಿ, ಈ ನೆಲದ ಕಲೆ, ಸಂಸ್ಕೃತಿಯನ ಮಹತ್ವ ಸಾರಿದೆ ಎಂದು ಕೆಐಎ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+