Bengaluru in Trouble: ಐಟಿ ಬಿದ್ದರೆ ಬೆಂಗಳೂರು ಬೀಳುತ್ತೆ: ಸಂಕಷ್ಟದಲ್ಲಿ ನಮ್ಮ ಬೆಂಗಳೂರು

Bengaluru in Trouble ಈ ವಿಶ್ವದಾದ್ಯಂತ ಕೃತಕ ಬುದ್ಧಿಮತ್ತೆ (Artificial Intelligence)ಯದ್ದೇ ಸದ್ದು. ಎಐನಿಂದ ಲಕ್ಷಾಂತರ ಜನರ ಉದ್ಯೋಗಕ್ಕೆ ಈಗಾಗಲೇ ಕುತ್ತು ಬಂದಿದೆ. ಆದರೆ ಇದು ಬೆಂಗಳೂರಿನ ಮೇಲೂ ಪರಿಣಾಮ ಬೀರಲಿದೆ ಎನ್ನುವ ವಿಚಾರವು ಚರ್ಚೆಯ ಮುನ್ನೆಲೆಗೆ ಬಂದಿದೆ. "ಐಟಿ ಬಿದ್ದರೆ ಬೆಂಗಳೂರು ಬೀಳುತ್ತೆ" ಹವ್ಯಾಸಿ ಬರಹಗಾರ ಆಶಿಶ್ ಸರಡ್ಕ ಅವರ ಬರಹ ಇಲ್ಲಿದೆ.

"AI ಬಂದ್ರೆ ಐಟಿ ಬೀಳುತ್ತೆ ಬಿಡು... ನಮಗೇನು? ನಾವು ಆರಾಮದಲ್ಲಿ ಈಗ ಇದ್ದ ಹಾಗೆ ಇದ್ರೆ ಆಯ್ತು..." ಹೀಗೆ ಅಂತಾ ಯಾರಾದ್ರೂ ಅನ್ಕೊಂಡಿದ್ರೆ, ದಯವಿಟ್ಟು ಆ ಭ್ರಮೆಯಿಂದ ಹೊರಗೆ ಬನ್ನಿ. ಬೆಂಗಳೂರು ಅನ್ನುವ ಮಾಯಾನಗರದ ಮಧ್ಯದಲ್ಲೇ 11 ವರ್ಷ ಇದ್ದಾಗಲೂ ನೋಡದೇ ಇದ್ದ, ಗಮನಿಸದೇ ಇದ್ದ ಆಲೋಚನೆಗಳು ಈಗ ಬರ್ತಾ ಇವೆ... ನಿನ್ನೆ ಮತ್ತು ಮೊನ್ನೆ ಕೆಲವೊಂದು ವಿಚಾರಗಳನ್ನು ತುಂಬಾ ಹತ್ತಿರದಿಂದ ನೋಡಿದಾಗ ಅನಿಸಿದ್ದು ಒಂದೇ.. "ಇದು ಕೇವಲ ಐಟಿ ಮಂದಿಯ ಸಮಸ್ಯೆಯಲ್ಲ!"

Bengaluru in Trouble

ಯಾಕೆ ಅಂತೀರಾ? ಇಲ್ಲಿದೆ ನೋಡಿ ಲೆಕ್ಕಾಚಾರ

1. ಆಟೋ/ಕ್ಯಾಬ್ ಚಾಲಕರ ಬದುಕು: ಬೆಂಗಳೂರಿನ ಮೆಟ್ರೋ ಸ್ಟೇಷನ್ ಸುತ್ತಮುತ್ತ ಆಟೋ ಓಡಿಸುವವರ ಆದಾಯದ 60% ಬರೋದು ಇದೇ IT ಉದ್ಯೋಗಿಗಳಿಂದ. ಮನೆಯಿಂದ ಮೆಟ್ರೋಗೆ, ಮೆಟ್ರೋದಿಂದ ಆಫೀಸಿಗೆ ಅಂತಾ ಓಡಾಡುವವರ ಸಂಖ್ಯೆ ಲಕ್ಷಾಂತರ. ನಾಳೆ ಇವರ ಕೆಲಸ ಹೋದರೆ ಅಥವಾ ವರ್ಕ್ ಫ್ರಂ ಹೋಮ್ ಬಂದರೆ, ಈ ಆಟೋ/ಕ್ಯಾಬ್ ಡ್ರೈವರ್‌ಗಳ ಬದುಕು ತಲೆಕೆಳಗಾಗುತ್ತೆ.

2. ರಿಯಲ್ ಎಸ್ಟೇಟ್ (ಬಾಡಿಗೆ & ಖರೀದಿ): ಬೆಂಗಳೂರಿನಲ್ಲಿ ಮನೆ ಕಟ್ಟಿ ಬಾಡಿಗೆಗೆ ಬಿಟ್ಟಿರೋ ಮನೆ ಮಾಲೀಕರ ಪಾಡು ಏನಾಗಬೇಡ? ಎಷ್ಟೋ ಜನ ಲೋನ್ ಮಾಡಿ ಮನೆ/PG ಕಟ್ಟಿರ್ತಾರೆ, "ಐಟಿ ಅವರು ಬಂದು 20-30 ಸಾವಿರ ಬಾಡಿಗೆ ಕೊಡ್ತಾರೆ" ಅನ್ನೋ ಧೈರ್ಯದ ಮೇಲೆ. ಐಟಿ ಮಂದಿ ಊರು ಸೇರಿದರೆ, ಇಲ್ಲಿ ಬಾಡಿಗೆ ಬರೋದಿಲ್ಲ, ಓನರ್‌ಗಳಿಗೆ EMI ಕಟ್ಟೋಕೆ ಆಗಲ್ಲ. ರಿಯಲ್ ಎಸ್ಟೇಟ್ ದರಗಳು 30-40% ಕುಸಿಯೋದು ಗ್ಯಾರಂಟಿ.

3. ಗಿಗ್ ಎಕಾನಮಿ ಮತ್ತು ಲೈಫ್‌ಸ್ಟೈಲ್: Zomato, Swiggy, Zepto ಡೆಲಿವರಿ ಹುಡುಗರಿಂದ ಹಿಡಿದು, ಪಬ್, ಬ್ರಿವರಿ (Brewery), ಮಾಲ್‌ಗಳಲ್ಲಿ ಕೆಲಸ ಮಾಡೋರವರೆಗೆ ಎಲ್ಲರ ಹೊಟ್ಟೆ ತುಂಬುತ್ತಿರೋದು ಐಟಿ ಜನರ "Disposable Income" (ಖರ್ಚು ಮಾಡಬಹುದಾದ ಆದಾಯ) ನಿಂದಲೇ. ಜನರ ಕೈಯಲ್ಲಿ ದುಡ್ಡಿಲ್ಲ ಅಂದ್ರೆ, ವೀಕೆಂಡ್ ಪಾರ್ಟಿಗಳಿಲ್ಲ, ಆನ್‌ಲೈನ್ ಆರ್ಡರ್‌ಗಳಿಲ್ಲ.. ಆಗ ಈ ಉದ್ಯಮಗಳೆಲ್ಲಾ ಪಲ್ಟಿ ಹೊಡೆಯುತ್ತವೆ.

4. ವೀಕೆಂಡ್ ಟೂರಿಸಂ (Tourism): ಶುಕ್ರವಾರ ಬಂತು ಅಂದ್ರೆ ಚಿಕ್ಕಮಗಳೂರು, ಕೂರ್ಗ್, ಸಕಲೇಶಪುರ ಕಡೆ ಹೋಗೋ ಕಾರುಗಳ ಸಾಲು ನೋಡಿರ್ತೀರಾ. ಹೋಂ ಸ್ಟೇಗಳು (Home Stays) ನಂಬಿಕೊಂಡಿರೋದೇ ಈ ಐಟಿ ಕ್ರೌಡ್ ಅನ್ನು. ಇವರು ಬರೋದು ನಿಂತರೆ, ಅಲ್ಲಿನ ಸ್ಥಳೀಯರ ಆದಾಯಕ್ಕೂ ಕತ್ತರಿ ಬೀಳುತ್ತೆ.

5. ಬ್ಯಾಂಕುಗಳ ಕಥೆ?: ಇವತ್ತು ಅತೀ ಹೆಚ್ಚು ಹೋಂ ಲೋನ್, ಕಾರ್ ಲೋನ್ ತಗೊಂಡಿರೋದು ಇದೇ ಐಟಿ ಉದ್ಯೋಗಿಗಳು. ಇವರ ಕೆಲಸಕ್ಕೆ ಕುತ್ತು ಬಂದರೆ, ಸಾಲ ಮರುಪಾವತಿ ಆಗಲ್ಲ. ಆಗ ಬ್ಯಾಂಕುಗಳ ಮೇಲೆ ಆಗುವ ಪರಿಣಾಮ ಅಷ್ಟಿಷ್ಟಲ್ಲ.

ಒಟ್ಟಿನಲ್ಲಿ... ಐಟಿ ಅನ್ನೋದು ಒಂದು ಉದ್ಯಮ ಅಷ್ಟೇ ಅಲ್ಲ, ಅದು ಈ ಸಿಟಿಯ ರಕ್ತನಾಳ. ಅದಕ್ಕೆ ಪೆಟ್ಟಾದರೆ ಇಡೀ ಬೆಂಗಳೂರಿಗೇ ನೋವಾಗುತ್ತೆ. ಹಾಗಾಗಿ, "ನಮಗೇನು?" ಅನ್ನೋ ಹಾಗಿಲ್ಲ ಗುರು... ಎಲ್ಲರೂ ಒಂದೇ ದೋಣಿಯಲ್ಲಿದ್ದೀವಿ! ಏನಂತೀರಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+