ಬೆಂಗಳೂರು: ಆಸ್ಪತ್ರೆಯಲ್ಲಿ ಲೈವ್ ಮ್ಯೂಸಿಕ್ ನೈಟ್, ರೋಗಿಗಳನ್ನ ಮರೆತ್ರಾ ಎಂದು ನೆಟ್ಟಿಗರ ಆಕ್ರೋಶ

ಸಾಮಾನ್ಯವಾಗಿ ಆಸ್ಪತ್ರೆ ಎಂದಾಗ ನಮಗೆ ನೆನಪಾಗುವುದು ಸೂಜಿ ಬಿದ್ದರು ಅದರ ಸದ್ದು ಕೇಳುವಷ್ಟು ಇರುವ ನೀರವ ಮೌನ, ಆಚೆ ಈಚೆ ರೋಗಿಗೂ ಮತ್ತವರ ಕುಟುಂಬಸ್ಥರು ಹಾಗೇ ಅಲ್ಲಲ್ಲಿ ಕಾಣಿಸುವ ಡಾಕ್ಟರ್‌ ಮತ್ತು ನರ್ಸ್‌ಗಳು. ಅಲ್ಲವೇ ? ಆದರೆ, ಸಿಲಿಕಾನ್ ಸಿಟಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಶನಿವಾರ ರಾತ್ರಿ ಲೈವ್ ಮ್ಯೂಸಿಕ್ ನೈಟ್ ಆಯೋಜಿಸುವ ಮೂಲಕ ಹೊಸದೊಂದು ವಿವಾದ ಹುಟ್ಟಿಕೊಂಡಿದೆ.

ಆಸ್ಪತ್ರೆಯ ಕಾರಿಡಾರ್‌ನಲ್ಲಿ ನಡೆದ ಈ ಸಂಗೀತ ಕಾರ್ಯಕ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯಲ್ಲಿ ಇಂತಹ ಮನರಂಜನಾ ಕಾರ್ಯಕ್ರಮಗಳ ಮಾಡುವುದು ಎಷ್ಟು ಸರಿ ಎಂಬ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Bengaluru


ಬೆಂಗಳೂರಿನ ಸೂಪರ್‌ಹೆಲ್ತ್ ಆಸ್ಪತ್ರೆಯು ಲೋಕಲ್‌ಹೋಸ್ಟ್ ಹೆಚ್‌ಕ್ಯೂ ಜೊತೆಗೂಡಿ ಈ ಲೈವ್ ಮ್ಯೂಸಿಕ್ ಕಾರ್ಯಕ್ರಮವನ್ನ ಆಯೋಜಿಸಿತ್ತು. ಎಕ್ಸ್ ಬಳಕೆದಾರರಾದ ಗೌರಾಂಗ್ ದೇಸಾಯಿ ಎಂಬುವವರು ಈ ಕಾರ್ಯಕ್ರಮದ ವಿಡಿಯೋವನ್ನ ಹಂಚಿಕೊಂಡಿದ್ದಾರೆ.

"ನಮಗೆ ಆಸ್ಪತ್ರೆ ಎಂದರೆ ಭಯವಿದೆ, ಆದರೆ ನಾವೆಲ್ಲರೂ ಹುಟ್ಟಿರುವುದೇ ಆಸ್ಪತ್ರೆಯ ಒಂದು ಕೋಣೆಯಲ್ಲಿ ಎಂಬುದನ್ನ ನಾವು ಮರೆಯುತ್ತೇವೆ. ಶನಿವಾರ ರಾತ್ರಿ ಬೆಂಗಳೂರಿಗರಿಗೆ ಆಸ್ಪತ್ರೆಯ ಬಗ್ಗೆ ಇರುವ ಭಯ ಹೋಗಲಾಡಿಸಲು ಈ ಮ್ಯೂಸಿಕ್ ನೈಟ್ ಆಯೋಜಿಸಲಾಗಿದೆ," ಎಂದು ಅವರು ಬರೆದುಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಆಸ್ಪತ್ರೆಯ ಒಳಗೆ ಸಂಗೀತಕ್ಕೆ ಸಂಬಂಧಿಸಿದ ಇನ್‌ಸ್ಟ್ರೂಮೆಂಟ್‌ ಇಟ್ಟುಕೊಂಡು ಲೈವ್ ಮ್ಯೂಸಿಕ್ ನುಡಿಸುತ್ತಿರುವುದನ್ನು ಕಾಣಬಹುದು.

ಕಾರ್ಯಕ್ರಮಕ್ಕೆ ಇದ್ದ ಕಟ್ಟುನಿಟ್ಟಿನ ಆಸ್ಪತ್ರೆ ನಿಯಮಗಳು

ಈ ಈವೆಂಟ್‌ಗೆ "HOSPITA/ITY" ಎಂದು ಹೆಸರು ನೀಡಿದ್ದು, ಕಾರ್ಯಕ್ರಮಕ್ಕೂ ಮುನ್ನ ಆಸ್ಪತ್ರೆ ಕಟ್ಟುನಿಟ್ಟಿನ ನಿಯಮಗಳನ್ನ ಹೇಳಲಾಗಿತ್ತು. ಆಯೋಜಕರ ಪ್ರಕಾರ, ಈ ಸಂಗೀತ ಕಾರ್ಯಕ್ರಮವು ಆಸ್ಪತ್ರೆಯ ಒಪಿಡಿ ಸಮಯ ಮುಗಿದ ನಂತರ, ಕೇವಲ ನಾನ್-ಕ್ಲಿನಿಕಲ್ ಅಂದರೆ ರೋಗಿಗಳಿಗೆ ಚಿಕಿತ್ಸೆ ನೀಡದ ಪ್ಲೋರ್‌ಗಳಲ್ಲಿ ಮಾತ್ರ ನಡೆದಿದೆ. ರೋಗಿಗಳ ವಾರ್ಡ್‌ಗಳು, ಐಸಿಯು ಮತ್ತು ತುರ್ತು ಚಿಕಿತ್ಸಾ ಘಟಕಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ತುರ್ತು ಮಾರ್ಗಗಳನ್ನು ಸದಾ ಒಪನ್‌ ಆಗಿ ಇಡಲಾಗಿತ್ತು. ಇದೊಂದು ಸಂಪೂರ್ಣ ಸಾತ್ವಿಕ ಪಾರ್ಟಿ ಆಗಿದ್ದು, ಮದ್ಯಪಾನ, ಧೂಮಪಾನವನ್ನ ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ಅದರ ಬದಲಾಗಿ, ಸೂಪರ್‌ಬೂಸ್ಟರ್ಸ್ ಮತ್ತು ಕೊಂಬುಚಾದಂತಹ ಆರೋಗ್ಯಕರ ಪಾನೀಯಗಳನ್ನು ನೀಡಲಾಗಿತ್ತು.

ಕಾರ್ಯಕ್ರಮದಲ್ಲಿ ಧ್ವನಿವರ್ಧಕಗಳ ಶಬ್ದದ ಮಿತಿಯನ್ನೂ ಸಹ ಆಸ್ಪತ್ರೆಯ ವಾತಾವರಣಕ್ಕೆ ತಕ್ಕಂತೆ ನಿಯಂತ್ರಿಸಲಾಗಿತ್ತು. ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಕಾರ್ಯಕ್ರಮದ ಮೇಲೆ ನಿಗಾ ವಹಿಸಿದ್ದರು. ಕುತೂಹಲದಿಂದ ಬನ್ನಿ, ಜಾಗವನ್ನು ಗೌರವಿಸಿ, ಎಂಬ ನಿಯಮಗಳನ್ನ ಆಯೋಜಕರು ವಿಧಿಸಿದ್ದರು.

ನೆಟ್ಟಿಗರ ವಿರೋಧ

ಆಯೋಜಕರು ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ನೋಡಿ. ಆಸ್ಪತ್ರೆ ಎನ್ನುವುದು ರೋಗಿಗಳು, ಅವರ ಕುಟುಂಬಸ್ಥರು ನೋವು, ಆತಂಕ, ತುರ್ತು ಪರಿಸ್ಥಿತಿ ಇರುವಂತಹ ಸ್ಥಳ. ಇಂತಹ ಜಾಗದಲ್ಲಿ ಶಬ್ದ ನಿಯಂತ್ರಣ ಮಾಡಿದ್ದರೂ, ಮನರಂಜನಾ ಪಾರ್ಟಿ ಆಯೋಜಿಸುವುದು ರೋಗಿಗಳ ಸೂಕ್ಷ್ಮತೆಗೆ ಧಕ್ಕೆ ತಂದಂತೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

"ಇದು ಕೇವಲ ಶಬ್ದದ ಸಮಸ್ಯೆಯಲ್ಲ, ಆಸ್ಪತ್ರೆಯ ಪಾವಿತ್ರ್ಯತೆಯ ಪ್ರಶ್ನೆ. ಆಸ್ಪತ್ರೆಯನ್ನಾ ವೀಕೆಂಡ್ ಪಾರ್ಟಿ ತಾಣವಾಗಿ ಪರಿವರ್ತಿಸುವುದು ನೈತಿಕವಾಗಿ ತಪ್ಪು," ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಯೋಜಕರು ಎಷ್ಟೇ ಎಚ್ಚರಿಕೆ ವಹಿಸಿದ್ದರೂ, ಶನಿವಾರ ರಾತ್ರಿಯ ಮ್ಯೂಸಿಕ್ ಪಾರ್ಟಿಯನ್ನ ಆಸ್ಪತ್ರೆಯಲ್ಲಿ ನಡೆಸುವ ಐಡಿಯಾವನ್ನು ಜನರು ತೀವ್ರವಾಗಿ ವಿರೋಧಿಸಿದ್ದಾರೆ. "ಇದೆಲ್ಲಾ ಬೆಂಗಳೂರಿನಲ್ಲಿ ಮಾತ್ರ ನಡೆಯಲು ಸಾಧ್ಯ" ಎಂದು ನೆಟ್ಟಿಗರು ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+