Get Updates
Get notified of breaking news, exclusive insights, and must-see stories!

ಬೆಂಗಳೂರಿನ ಪ್ರಮುಖ ಫ್ಲೈಓವರ್ ಕಾಮಗಾರಿಗೆ ಭೂಸ್ವಾಧೀನ: ಎಲ್‌ವಿಪಿ ಮಾದರಿ ಪರಿಹಾರ, ಜಿಬಿಎ

ಬೆಂಗಳೂರು: ಬೆಂಗಳೂರಿನ ಹೂಡಿ ಫ್ಲೈಓವರ್ ಕಾಮಗಾರಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂಮಿ ಮೌಲ್ಯ ಸಂವರ್ಧನೆ (ಎಲ್.ವಿ.ಪಿ) ವ್ಯವಸ್ಥೆ ಅಳವಡಿಸಿಕೊಳ್ಳುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಅದು ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಸರ್ಕಾರವು ರಸ್ತೆ, ಮೆಟ್ರೋ, ಫ್ಲೈಓವರ್ ಮುಂತಾದ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳನ್ನು ಮಾಡುವಾಗ ಅದರ ಸುತ್ತಮುತ್ತಲಿನ ಭೂಮಿಯ ಬೆಲೆಯು ಸಹಜವಾಗಿಯೇ ಹೆಚ್ಚಾಗುತ್ತದೆ. ಈ ಹೆಚ್ಚಿದ ಭೂಮಿ ಮೌಲ್ಯದ ಒಂದು ಭಾಗವನ್ನು ಸರ್ಕಾರವೇ ಮರುಪಡೆಯುವ ವ್ಯವಸ್ಥೆಯೇಯನ್ನು ಭೂಮಿ ಮೌಲ್ಯ ಸಂವರ್ಧನೆ ಎಂದು ಹೇಳಲಾಗುತ್ತದೆ. ಇದೀಗ ಬೆಂಗಳೂರಿನ ಹೂಡಿ ಮೇಲ್ಸೇತುವೆ ವಿಚಾರದಲ್ಲೂ ಇದೇ ಮಾದರಿಯನ್ನು ಅನುಸರಿಸುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.

Bengaluru Hoodi Flyover Land Acquisition GBA Explores LVP Model as a Sustainable Solution

ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು, ಹೂಡಿ ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದಂತೆ ಭೂಮಿ ಮೌಲ್ಯ ಸಂವರ್ಧನೆ (ಎಲ್.ವಿ.ಪಿ) ವ್ಯವಸ್ಥೆ ಅಳವಡಿಸಿಕೊಂಡು ಕಾಮಗಾರಿಗೆ ಅವಶ್ಯವಿರುವ ಭೂಮಿಯನ್ನು ಸ್ವಾಧೀನ ಪಡೆಯಲು ಇರುವ ಸಾಧ್ಯತೆ ಬಗ್ಗೆ ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದಾರೆ. ಈ ಸಭೆಯಲ್ಲಿ ಕೆಲವೊಂದು ಪ್ರಮುಖ ವಿಷಯಗಳನ್ನು ಚರ್ಚೆ ಮಾಡಲಾಗಿದೆ.

ಹೂಡಿ ಫ್ಲೈಓವರ್ ಯೋಜನೆ ಪ್ರಮುಖ ಸವಾಲು ಏನು

ಹೂಡಿ ಫ್ಲೈಓವರ್ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಅಭಿವೃದ್ದಿ ಕಾಮಗಾರಿಗೆ ಸ್ವಾಧೀನ ಪಡಿಸಿಕೊಳ್ಳುವುದು ಪ್ರಮಖ ಅಡಚಣೆಯಾಗಿದೆ. ಸ್ವತ್ತಿನ ಭೂ ಮಾಲೀಕರು ಟಿ.ಡಿ.ಆರ್ ಸ್ವೀಕರಿಸಲು ನಿರಾಕರಿಸಿ ನಗದು ಪರಿಹಾರ ಕೇಳಿರುವುದರಿಂದ ಈ ಯೋಜನೆಯ ಅನುಷ್ಠಾನವು ವಿಳಂಬವಾಗುತ್ತಿದೆ ಎಂದು ಅಪರ ಆಯುಕ್ತರು ತಿಳಿಸಿದ್ದಾರೆ. ಆದರೆ ಪ್ರಚಲಿತ ನಿಯಮಾವಳಿಗಳ ಪ್ರಕಾರ ನಗದು ಪರಿಹಾರ ನೀಡುವುದು ಅಸಾಧ್ಯ. ಈ ಹಿನ್ನೆಲೆ ಪರ್ಯಾಯ ಮತ್ತು ದೀರ್ಘಕಾಲಿಕ ಪರಿಹಾರ ಕ್ರಮವಾಗಿ ಭೂಮಿ ಮೌಲ್ಯ ಸಂವರ್ಧನೆ (LVC -Land Value Capture) ವ್ಯವಸ್ಥೆಯನ್ನು ಜಾರಿಗೆ ತರುವ ಸಾಧ್ಯತೆ ಕುರಿತು ಚರ್ಚೆ ನಡೆಸಲಾಗಿದೆ.

ಏನಿದು ಭೂಮಿ ಮೌಲ್ಯ ಸಂವರ್ಧನೆ (ಎಲ್.ವಿ.ಪಿ)

ಭೂಮಿ ಮೌಲ್ಯ ಸಂವರ್ಧನೆ (ಎಲ್.ವಿ.ಪಿ) ಎಂಬುದು ಸಾರ್ವಜನಿಕ ಹೂಡಿಕೆಗಳಾದ ರಸ್ತೆ ಅಗಲೀಕರಣ, ಫ್ಲೈಓವರ್, ಮೆಟ್ರೋ, ಮೂಲಸೌಕರ್ಯ ಅಭಿವೃದ್ಧಿಯಿಂದ ಉಂಟಾಗುವ ಭೂಮಿಯ ಮೌಲ್ಯ ವೃದ್ಧಿಯ ಒಂದು ಭಾಗವನ್ನು ಅಗತ್ಯ ಯೋಜನೆಗಳಿಗೆ ಮರುಪಡೆಯುವ ವ್ಯವಸ್ಥೆಯಾಗಿರುತ್ತದೆ. ಒಟ್ಟಾರೆ ಮೂಲಸೌಕರ್ಯಗಳ ಅಭಿವೃದ್ದಿಯಿಂದಾಗಿ ಸುತ್ತಮುತ್ತಲಿನ ಭೂಮಿ ಮೌಲ್ಯ ಹೆಚ್ಚಳವಾಗುವುದರಿಂದ ಆ ಮೌಲ್ಯದ ಒಂದು ಭಾಗವನ್ನು ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವುದು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಯೋಜನೆಯ ಮಹತ್ವವೇನು

ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ನಗರೀಕರಣ, ಮೆಟ್ರೋ ವಿಸ್ತರಣೆ, ಪೆರಿಫೆರಲ್ ರಿಂಗ್ ರೋಡ್, ಉಪನಗರ ರೈಲು ಯೋಜನೆ, ಐಟಿ ಕಾರಿಡಾರ್‌ಗಳು ಮತ್ತು ಟಿ.ಒ.ಡಿ ವಲಯಗಳು ಇವೆಲ್ಲವುಗಳಿಂದ ಭೂಮಿಯ ಮೌಲ್ಯ ಗಣನೀಯವಾಗಿ ಹೆಚ್ಚುತ್ತಿದೆ. ಅಭಿವೃದ್ದಿ ಕಾಮಗಾರಿಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಅಸಾಧ್ಯವಾಗಿದೆ. ಭೂಮಿ ಮೌಲ್ಯ ಸಂವರ್ಧನೆ (ಎಲ್.ವಿ.ಪಿ) ವ್ಯವಸ್ಥೆ ಮೂಲಕ ಭೂಮಿ ಮರುಹೊಂದಾಣಿಕೆ (Land Pooling ) ವಿಧಾನವನ್ನು ಬಳಸಿಕೊಂಡು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗುವುದರಿಂದ, ಅಭಿವೃದ್ಧಿಯ ನಂತರ ಉಳಿದ ಭಾಗದ ಭೂಮಿಯ ಮೌಲ್ಯ ಹಲವಾರು ಪಟ್ಟು ಹೆಚ್ಚುತ್ತದೆ. ಈ ಮಾದರಿಯು ಪೂರ್ವ ನಗರ ಪಾಲಿಕೆ ವ್ಯಾಪ್ತಿಗೆ ಹೆಚ್ಚು ಸೂಕ್ತವಾಗಿದೆ ಎಂದು ಹೇಳಲಾಗಿದೆ. ಈ ಪದ್ಧತಿಯು ಯೋಜಿತ ಮತ್ತು ಸಮತೋಲನ ನಗರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಲೋಖಂಡೆ ಸ್ನೇಹಲ್ ಸುಧಾಕರ್ ಅವರು ತಿಳಿಸಿದ್ದಾರೆ.

ಭೂಮಿ ಮೌಲ್ಯ ಸಂವರ್ಧನೆ ಇರುವ ಸವಾಲುಗಳು

ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಇರುವು ಪ್ರಮುಖ ಸವಾಲುಗಳ ಪೈಕಿ ಅಭಿವೃದ್ಧಿಗೊಳ್ಳುತ್ತಿರು ವ್ಯಾಪ್ತಿಯಲ್ಲಿ ನಿರ್ದಿಷ್ಟಪಡಿಸಿದ ಭೂಮಿ ಮೌಲ್ಯ ನಿಗದಿಪಡಿಸುವುದು. ಎಲ್.ವಿ.ಪಿ ವ್ಯವಸ್ಥೆ ಅಳವಡಿಸಿಕೊಳ್ಳಲು ಇರುವು ಕಾನೂನು ಸ್ಪಷ್ಟತೆ ಮತ್ತು ಏಕರೂಪ ನಿಯಮಾವಳಿ, ಭೂಮಿ ಮೌಲ್ಯ ಸಂವರ್ಧನೆ (ಎಲ್.ವಿ.ಪಿ) ವ್ಯವಸ್ಥೆ ಅಳವಡಸಿಕೊಳ್ಳಲು ಸಾರ್ವಜನಿಕರ ಒಪ್ಪಿಗೆ ಹಾಗೂ ವಿವಿಧ ಸಾರ್ವಜನಿಕ ಸಂಸ್ಥೆಗಳ ನಡುವಿನ ಸಮನ್ವಯದ ಕುರಿತು ವಿವರವಾದ ವರದಿಯನ್ನು ನೀಡಲು ಸಂಬಂಧಪಟ್ಟ ನಗರ ಯೋಜನೆ ಇಲಾಖೆ ಅಧಿಕಾರಿಗಳಿಗೆ ಲೋಖಂಡೆ ಸ್ನೇಹಲ್ ಸುಧಾಕರ್ ನಿರ್ದೇಶನ ನೀಡಿದ್ದಾರೆ.

ಭೂಮಿ ಮೌಲ್ಯ ಸಂವರ್ಧನೆ (ಎಲ್.ವಿ.ಪಿ) ವ್ಯವಸ್ಥೆ ಮೂಲಕ ಈಗಾಗಲೇ ಹಲವಾರು ರಾಜ್ಯಗಳಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡು ಅನಗತ್ಯ ವಿಳಂಬವಿಲ್ಲದೆ ಕಾಮಗಾರಿಗಳನ್ನು ಸಂಪೂರ್ಣಗೊಳಿಸಿರುವ ನಿದರ್ಶನಗಳಿವೆ. ಪೂರ್ವ ನಗರ ಪಾಲಿಕೆಯಲ್ಲಿ ಪ್ರಥಮವಾಗಿ ಹೂಡಿ ಫ್ಲೈಓವರ್ ಕಾಮಗಾರಿಯನ್ನು ಈ ಮಾದರಿಯಲ್ಲಿ ಅಳವಡಿಸಿಕೊಂಡು ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೊಳ್ಳುವ ನಿಟ್ಟಿನಲ್ಲಿ ಕಾನೂನುಬದ್ಧ, ಪಾರದರ್ಶಕ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾದ ಭೂಮಿ ಮೌಲ್ಯ ಸಂವರ್ಧನೆ (ಎಲ್.ವಿ.ಪಿ) ವ್ಯವಸ್ಥೆಯನ್ನು ಸಾರ್ವಜನಿಕರು ಮತ್ತು ಭೂ ಮಾಲೀಕರು ಸ್ವೀಕರಿಸಬೇಕು ಎಂದು ಅಪರ ಆಯುಕ್ತರು ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+