ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವದ ಅಗ್ಗದ ನಗರ, ಮೂರನೇ ಸ್ಥಾನದಲ್ಲಿ ಬೆಂಗಳೂರು

ವಿಶ್ವದ ಅಗ್ಗದ ನಗರಗಳ ಸಾಲಿನಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ದೇಶದ ಇತರೆಲ್ಲಾ ನಗರಗಳನ್ನು ಹಿಂದಿಕ್ಕಿ ಉದ್ಯಾನ ನಗರಿ ಮೂರನೇ ಸಾಲಿನಲ್ಲಿ ವಿರಾಜಮಾನವಾಗಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 22: ವಿಶ್ವದ ಅಗ್ಗದ ನಗರಗಳ ಸಾಲಿನಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ದೇಶದ ಇತರೆಲ್ಲಾ ನಗರಗಳನ್ನು ಹಿಂದಿಕ್ಕಿ ಉದ್ಯಾನ ನಗರಿ ಮೂರನೇ ಸಾಲಿನಲ್ಲಿ ವಿರಾಜಮಾನವಾಗಿದೆ.

ಇನ್ನು ದೇಶದ ಒಟ್ಟು ನಾಲ್ಕು ನಗರಗಳು ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ದೆಹಲಿ, ಮುಂಬೈ ಮತ್ತು ಚೆನ್ನೈ ಟಾಪ್ 10 ಪಟ್ಟಿಯಲ್ಲಿರುವ ಇತರ ನಗರಗಳಾಗಿವೆ.[ಓಲಾ, ಉಬರ್ ಗೆ ಸಡ್ಡು ಹೊಡೆಯಲು ಬರ್ತಿದೆ 'ಎಚ್.ಡಿ.ಕೆ ಕ್ಯಾಬ್ಸ್'!]

ಹಲವು ಮಾನದಂಡಗಳನ್ನು ಆಧರಿಸಿ 'ದಿ ಎಕನಾಮಿಸ್ಟ್ ಇಂಟಲಿಜೆನ್ಸ್ ಯೂನಿಟ್' ವಿಶ್ವದ ಅಗ್ಗದ ನಗರ ಹಾಗೂ ದುಬಾರಿ ನಗರಗಳ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವದ ಒಟ್ಟು 133 ನಗರಗಳನ್ನು ಈ ಸಮೀಕ್ಷೆಗೆ ಆಯ್ದುಕೊಳ್ಳಲಾಗಿತ್ತು. ಹಚ್ಚಿನ ಻ಅಗ್ಗದ ನಗರಗಳು ಹಾಗೂ ದುಬಾರಿ ನಗರಗಳು ಏಷ್ಯಾದಲ್ಲಿ ಕಂಡು ಬಂದಿರುವುದು ವಿಶೇಷ.[ವಿಶ್ವದ ಡೈನಾಮಿಕ್ ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು ನಂಬರ್ 1]

ಮಾನದಂಡ ಯಾವುದು?

ಮಾನದಂಡ ಯಾವುದು?

ನಗರದ ನಾಗರೀಕರ ಕನಿಷ್ಠ ಸಂಬಳ, ಜೀವನ ನಿರ್ವಹಣೆಗೆ ಬೇಕಾಗುವ ವೆಚ್ಚ ಮಾನದಂಡಗಳಲ್ಲಿ ಪ್ರಮುಖವಾಗಿದೆ. ಇದರ ಜತೆಗೆ ಇನ್ನೂ ಹಲವು ಮಾನದಂಡಗಳನ್ನು ಇಟ್ಟುಕೊಂಡು ಜಾಗತಿಕ ಜೀವನ ನಿರ್ವಹಣಾ ವೆಚ್ಚದ ಸೂಚ್ಯಾಂಕ ನಿಗದಿ ಪಡಿಸಿ ಅದರಂತೆ ಈ ಪಟ್ಟಿಯನ್ನು ತಯಾರಿಸಲಾಗಿದೆ. ಅಗ್ಗದ ಪ್ರವಾಸಿಗರು ಹೆಚ್ಚಾಗಿ ಯಾವ ನಗರಗಳಿಗೆ ಭೇಟಿ ನೀಡಲು ಇಚ್ಚಿಸುತ್ತಾರೆ ಎಂಬುದನ್ನೂ ಗಮನಕ್ಕೆ ತೆಗೆದುಕೊಳ್ಳಲಾಗಿದೆ

ಬೆಂಗಳೂರಿನ ಸೂಚ್ಯಂಕ ಎಷ್ಟು?

ಬೆಂಗಳೂರಿನ ಸೂಚ್ಯಂಕ ಎಷ್ಟು?

ಬೆಂಗಳೂರು 42 ಸೂಚ್ಯಂಕ ಪಡೆದುಕೊಂಡು ಮೂರನೇ ಸ್ಥಾನದಲ್ಲಿದೆ. ನಂಬರ್ ವನ್ ಸ್ಥಾನದಲ್ಲಿರುವ ಕಜಕಿಸ್ತಾನದ ಅಲ್ ಮ್ಯಾಟಿ 38 ಸೂಚ್ಯಂಕ ಪಡೆದುಕೊಂಡಿದ್ದರೆ, ಎರಡನೇ ಸ್ಥಾನದಲ್ಲಿರುವ ನೈಜೀರಿಯಾದ ಲಾಗೋಸ್ 39 ಸೂಚ್ಯಂಕ ಪಡೆದುಕೊಂಡಿದೆ.

ಉಳಿದ ನಗರಗಳ ಕಥೆ

ಉಳಿದ ನಗರಗಳ ಕಥೆ

ಭಾರತದ ಇನ್ನೂ ಮೂರು ನಗರಗಳು ಟಾಪ್ 10 ಪಟ್ಟಿಯಲ್ಲಿ. ಚೆನ್ನೈ ಮತ್ತು ಮುಂಬೈ 45 ಸೂಚ್ಯಂಕದೊಂದಿಗೆ ಕ್ರಮವಾಗಿ 6 ಮತ್ತು 7 ನೇ ಸ್ಥಾನದಲ್ಲಿವೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ 47 ಸೂಚ್ಯಂಕಗಳೊಂದಿಗೆ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿವೆ.

ದುಬಾರಿ ನಗರಗಳು

ದುಬಾರಿ ನಗರಗಳು

ಇನ್ನು ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರ ಸತತ ನಾಲ್ಕು ವರ್ಷಗಳಿಂದ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಹಾಂಕಾಂಗ್, ಮೂರನೇ ಸ್ಥಾನದಲ್ಲಿ ಜ್ಯೂರಿಚ್, ನಾಲ್ಕನೇ ಸ್ಥಾನದಲ್ಲಿ ಟೋಕಿಯೋ ಮತ್ತು ಐದನೇ ಸ್ಥಾನದಲ್ಲಿ ಒಸಾಕ ಇದೆ.

ವರದಿಯ ಹೈಲೈಟ್ಸ್

ವರದಿಯ ಹೈಲೈಟ್ಸ್

ವಿಶ್ವದ ದುಬಾರಿ ಹಾಗೂ ಅಗ್ಗದ ನಗರಗಳ ಟಾಪ್ 10 ಪಟ್ಟಿಯಲ್ಲಿರುವ ಹೆಚ್ಚಿನ ನಗರಗಳು ಏಷ್ಯಾಕ್ಕೆ ಸೇರಿವೆ. ಇದು ವಿಶೇಷ. ಈ ಮೂಲಕ ಏಷ್ಯಾ ದುಬಾರಿ ಮತ್ತು ಅಗ್ಗದ ನಗರಗಳ ಸಮ್ಮಿಶ್ರಣವಾಗಿದೆ. ಅಗ್ಗದ ನಗರಗಳ ಪೈಕಿ ಪಾಕಿಸ್ತಾನದ ಕರಾಚಿ 4ನೇ ಸ್ಥಾನದಲ್ಲಿದೆ.

English summary
List of world’s most expensive and cheapest cities are released. Bengaluru in the top 3rd position of world’s most cheapest city. Chennai, Mumbai and Delhi are the other cities in the top 10 list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X