ಬೆಂಗಳೂರು ಐತಿಹಾಸಿಕ ಕರಗ: ಇಂದು ರಾತ್ರಿ ಶಕ್ತ್ಯೋತ್ಸವ ಆಚರಣೆ

ಬೆಂಗಳೂರು ಏಪ್ರಿಲ್ 6: ಬೆಂಗಳೂರಿನಲ್ಲಿ ಇಂದು ಐತಿಹಾಸಿಕ ಕರಗ ನಡೆಯಲಿದೆ. ಇದಕ್ಕೆ ಬೇಕಾದ ಸಿದ್ದತೆಗಳು ಈಗಾಗಲೇ ಮಾಡಿಕೊಳ್ಳಲಾಗಿದ್ದು ಇಂದು ರಾತ್ರಿ ಕರಗ ಶಕ್ತ್ಯೋತ್ಸವ ನಡೆಯಲಿದೆ. ನಗರದ ಪ್ರಮುಖ ಉತ್ಸವವಾದ ಬೆಂಗಳೂರು ಕರಗ ಗುರುವಾರ ಮಧ್ಯರಾತ್ರಿಯ ನಂತರ ನಡೆಯಲಿದೆ.

ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಮಧ್ಯರಾತ್ರಿ 12.30ಕ್ಕೆ ಮೆರವಣಿಗೆ ಹೊರಡಲಿದೆ. ಹೂವಿನಿಂದ ಅಲಂಕಾರಗೊಂಡ ಕರಗವನ್ನು ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ಜ್ಞಾನೇಂದ್ರ ಅವರು ಹೊತ್ತೊಯ್ಯುತ್ತಾರೆ. ಉತ್ಸವ ಹಳೆನಗರದ ವಿವಿಧ ಬೈಲೇನ್‌ಗಳಲ್ಲಿ ಹಾದುಹೋಗುತ್ತದೆ. ಹಲಸೂರುಪೇಟೆ, ನಗರ್‌ಪೇಟೆ, ಕಬ್ಬನ್‌ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಅರಳೆಪೇಟೆ, ಬಳೇಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ ರಸ್ತೆಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಮರಳಲಿದೆ.

Bengaluru Historic Karaga: Shaktyotsava celebration tonight

ಕರಗವು ಮಾರ್ಗದಲ್ಲಿ ದೇವಾಲಯಗಳಿಂದ ಆರತಿಗಳನ್ನು ಸ್ವೀಕರಿಸುತ್ತದೆ ಮತ್ತು ಕಾಟನ್‌ಪೇಟೆಯ ಹಜರತ್ ತವಕ್ಕಲ್ ಮಸ್ತಾನ್ ಸಾಹೇಬ್ ದರ್ಗಾಕ್ಕೂ ಭೇಟಿ ನೀಡಲಿದೆ. ಇಲ್ಲಿ ವೀರಕುಮಾರರು ಅಲಗುಸೇವೆ (ಕತ್ತಿಯ ಸೇವೆ) ಆಚರಣೆಗಳನ್ನು ಮಾಡುತ್ತಾರೆ ಮತ್ತು ಮುಸ್ಲಿಮರು ಕರಗದಿಂದ ಆಶೀರ್ವಾದ ಪಡೆಯುತ್ತಾರೆ.

ಸುಮಾರು 5,000 ವೀರಕುಮಾರರು ಕರಗದೊಂದಿಗೆ ಸಾಗುತ್ತಾರೆ. ಕರಗದ ಮುಂಭಾಗದ ವಿವಿಧ ಸ್ಥಳಗಳಲ್ಲಿ ಅಲಗುಸೇವೆ ಮಾಡಲಾಗುತ್ತದೆ. ಕರಗ ಪೂಜಾರಿ ಎ ಜ್ಞಾನೇಂದ್ರ ವಹ್ನಿಕುಲ ಗೌಡ (38) ಅವರು ಸತತ 12 ನೇ ವರ್ಷ ಇದನ್ನು ಹೊರಲಿದ್ದಾರೆ. ವಾರ್ಷಿಕ ಮಹೋತ್ಸವದ ಅಂಗವಾಗಿ ಮಂಗಳವಾರ ಸಾವಿರಾರು ಭಕ್ತರು ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ದ್ರೌಪದಿ ದೇವಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.

ಧರ್ಮರಾಯಸ್ವಾಮಿ ದೇವಸ್ಥಾನ ಸಮಿತಿ ಮತ್ತು ಬೆಂಗಳೂರು ಕರಗ ಸಮಿತಿ ಅಧ್ಯಕ್ಷ ಕೆ.ಸತೀಶ್ ಮಾತನಾಡಿ, 10 ಸಾವಿರಕ್ಕೂ ಹೆಚ್ಚು ಮಹಿಳಾ ಭಕ್ತರು ಆರತಿ ದೀಪೋತ್ಸವವನ್ನು ನೆರವೇರಿಸಲಿದ್ದಾರೆ., ಮೆರವಣಿಗೆಗೆ ಸುಮಾರು 6-8 ಲಕ್ಷ ಜನರನ್ನು ನಿರೀಕ್ಷಿಸಿದ್ದೇವೆ, ಆದರೆ ಸಂಖ್ಯೆ ಹೆಚ್ಚಾಗಬಹುದು ಎಂದರು.

Bengaluru Historic Karaga: Shaktyotsava celebration tonight

ಇತಿಹಾಸ ಪ್ರಸಿದ್ಧ ಕರಗದ ವೈಭವವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬರಲಿದೆ. ಕರಗ ಶಕ್ತ್ಯೋತ್ಸವದ ಹಿನ್ನೆಲೆಯಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನ ಮತ್ತು ಸುತ್ತಮುತ್ತಲ ರಸ್ತೆಗಳು ವಿದ್ಯುತ್‌ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ. ಭದ್ರತೆ ದೃಷ್ಟಿಯಿಂದ ದೇವಸ್ಥಾನದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವರ್ಷಕ್ಕೊಮ್ಮೆ ನಡೆಯುವ ಹೂವಿನ ಕರಗ ಉತ್ಸವ ನಗರ್ತಪೇಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ.

ಸಂಚಾರ ಮಾರ್ಗಗಳಲ್ಲಿ ಬದಲಾವಣೆ

ಕೆ.ಆರ್.ಮಾರುಕಟ್ಟೆ ವೃತ್ತದಿಂದ ಅವೆನ್ಯೂ ರಸ್ತೆಯಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಕಾಟನ್‌ಪೇಟೆ ಮುಖ್ಯರಸ್ತೆ ಮೂಲಕ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ವಾಟಾಳ್ ನಾಗರಾಜ್ ರಸ್ತೆ ಮತ್ತು ಬಿನ್ನಿ ಮಿಲ್ ರಸ್ತೆಯಿಂದ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

Bengaluru Historic Karaga: Shaktyotsava celebration tonight

ಎಎಸ್ ಚಾರ್ ರಸ್ತೆಯಿಂದ ಸಿಟಿ ಮಾರ್ಕೆಟ್ ಸರ್ಕಲ್ ಕಡೆಗೆ ಬರುವ ವಾಹನಗಳು ಮೈಸೂರು ರಸ್ತೆಯ ಎಎಸ್ ಚಾರ್ ರಸ್ತೆಯಲ್ಲಿ ಬಲ ತಿರುವು ಪಡೆದು ಬ್ರಿಯಾಂಡ್ ಸರ್ಕಲ್-ರಾಯನ್ ಸರ್ಕಲ್ ಮೂಲಕ ಸಾಗಬಹುದಾಗಿದೆ. ಬಿವಿಕೆ ಅಯ್ಯಂಗಾರ್ ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತದ ಕಡೆಗೆ ಸಂಚರಿಸುವ ವಾಹನಗಳನ್ನು ಚಿಕ್ಕಪೇಟೆ ವೃತ್ತದಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ. ಕರಗ ಉತ್ಸವ ವೀಕ್ಷಿಸಲು ಬಯಸುವ ಜನರು ಬನ್ನಪ್ಪ ಪಾರ್ಕ್ ಮತ್ತು ಟೌನ್ ಹಾಲ್‌ನಲ್ಲಿ ವಾಹನಗಳನ್ನು ನಿಲ್ಲಿಸಲು ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+