ಲಾಲ್ ಬಾಗ್ ನಿಂದ ಹಸಿರು ತೇರು ಎಳೆಯೋಣ ಬನ್ನಿ
ಬೆಂಗಳೂರು, ಜೂ. 05: ಪರಿಸರ ಸಂರಕ್ಷಣೆ ಮತ್ತು ಜಾಗೃತಿ ನಿಟ್ಟಿನಲ್ಲಿ 'ಹಸಿರು ತೇರು' ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಸೌತ್ ಎಂಡ್ ವೃತ್ತದವರೆಗೆ ಜೂನ್ 6 ರಂದು ಬೆಳಗ್ಗೆ ಸಾಗಲಿದೆ.
ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಬೆಳಗ್ಗೆ 7 ಗಂಟೆಗೆ ತೇರು ಹೊರಡಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ರಸಗೊಬ್ಬರ ಸಚಿವ ಅನಂತ ಕುಮಾರ್, ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿ, ಬೆಂಗಳೂರು ನಗರದ ಶಾಸಕರು ಹಾಜರಿರುವರು.[ಜಾಗೃತಿಗೆ ಮೊದಲು ಪರಿಸರ ಬಗ್ಗೆ ತಿಳಿದುಕೊಳ್ಳಿ]

ತೇರು ಸೌತ್ ಎಂಡ್ ವೃತ್ತದ ಬಳಿ ಸಮಾರೋಪಗೊಳ್ಳಲಿದೆ. ಈ ವೇಳೆ ಪರಿಸರ ಜಾಗೃತಿಗೆ ಸಂಬಂಧಿಸಿದ ವಿವಿಧ ಘೋಷಣೆಗಳನ್ನು ಸಾರಲಾಗುವುದು.ಬೆಳಗ್ಗೆ 8.30 ಕ್ಕೆ ಕಾರ್ಯಕ್ರಮ ಸಮಾರೋಪಗೊಳ್ಳಲಿದ್ದು. ಹಸಿರು ಜಾಗೃತಿ, ವೃಕ್ಷ ನಿರ್ವಹಣೆ, ಗಿಡ ಬೆಳೆಸುವಿಕೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.












Click it and Unblock the Notifications