ಬೆಂಗಳೂರಲ್ಲಿ ಸುಪ್ರಸಿದ್ಧ ಅಮೀನಗಢ 'ವಿಜಯಾ ಕರದಂಟಿ'ನ ಮತ್ತೊಂದು ಮಳಿಗೆ ಶುರು, ಎಲ್ಲಿ?
ಬೆಂಗಳೂರು, ಜೂನ್ 28: ಭಾರತದ ಮೊದಲ ಮತ್ತು ಅತ್ಯಂತ ಹಳೆಯ ಕರದಂಟು ಉತ್ಪಾದಕರಾದ ಅಮೀನಗಢದ 'ವಿಜಯಾ ಕರದಂಟು' ಬೆಂಗಳೂರಿನಲ್ಲಿ ತನ್ನ ನಾಲ್ಕನೇ ಮಳಿಗೆ ಮತ್ತು ಕರ್ನಾಟಕದಲ್ಲಿ 25ನೇ ಮಳಿಗೆ ಪ್ರಾರಂಭಗೊಂಡಿದೆ. ಈ ಮೂಲಕ ಬೆಂಗಳೂರಿನ ಕರದಂಟು ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಈ ನೂತನ ಮಳಿಗೆಯನ್ನು ಮಾಜಿ ಸಚಿವ ಗೋಪಾಲಯ್ಯ ಮತ್ತು ತೇಜು ಮಸಾಲಾದ ಮಸಾಲಾ ಜಯರಾಂ ಅವರು ಶುಕ್ರವಾರ ಉದ್ಘಾಟಿಸಿದರು. ಈವರೆಗೆ ಕರ್ನಾಟಕದಲ್ಲಿ 24 ಮಳಿಗೆಗಳು ಇದ್ದು, ಬೆಂಗಳೂರಿನಲ್ಲಿ ಮೂರು ಇದ್ದವು.

ಉದ್ಘಾಟನೆ ವೇಳೆ 'ವಿಜಯಾ ಕರದಂಟು' ಮಳಿಗೆ ಮಾಲೀಕ ಸಂತೋಷ್ ಐಹೊಳ್ಳಿ ಮಾತನಾಡಿ, ಬೆಂಗಳೂರಿನ ಬಸವೇಶ್ವರನಗರದಲ್ಲಿ ನಮ್ಮ ಹೊಸ ಮಳಿಗೆಯನ್ನು ಪ್ರಾರಂಭಿಸುವ ಮೂಲಕ ಬೆಂಗಳೂರಿನಲ್ಲಿ ನಮ್ಮ ವ್ಯಾಪ್ತಿ ವಿಸ್ತರಿಸಲು ಬಹಳ ಸಂತೋಷ ಹೊಂದಿದ್ದೇವೆ ಎಂದು ಹೇಳಿದರು.
ಸಾಂಪ್ರದಾಯಿಕ ಪಾಕ ವಿಧಾನದಿಂದ ತಯಾರು
ಸಾಂಪ್ರದಾಯಿಕ ಪಾಕವಿಧಾನ ಕಾಪಾಡಿಕೊಳ್ಳುವ ನಮ್ಮ ಬದ್ಧತೆ ಮತ್ತು ಉನ್ನತ ಗುಣಮಟ್ಟ, ಆರೋಗ್ಯಕರ ಉತ್ಪನ್ನಗಳ ಬಳಕೆಯು ನಮ್ಮ ಪ್ರಥಮ ಆದ್ಯತೆಯಾಗಿದೆ. ನಾವು ನಮ್ಮ ಗ್ರಾಹಕರ ಬೆಂಬಲಕ್ಕೆ ಆಭಾರಿಯಾಗಿದ್ದೇವೆ ಮತ್ತು ನಮ್ಮ ವಿಶ್ವಾಸಾರ್ಹ ಕರದಂಟು ಮೂಲಕ ಸಮುದಾಯಕ್ಕೆ ಸೇವೆ ಒದಗಿಸಲು ಎದುರು ನೋಡುತ್ತಿದ್ದೇವೆ ಎಂದರು.
ಸಿಹಿ ಪ್ರಿಯರಿಗೆ ಆದ್ಯತೆ ನೀಡಲು ಮಳಿಗೆ ಆರಂಭ
ಅಮೀನಗಢ ವಿಜಯಾ ಕರದಂಟು ತನ್ನ ಸಿಹಿ ತಿನಿಸಿಗೆ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದ ತನ್ನ ಪ್ರತಿಷ್ಠೆಯನ್ನು ಬೆಳೆಸಿಕೊಂಡಿದೆ. ಕರದಂಟಿನ ಪ್ರತಿ ತುಣುಕೂ ಅತ್ಯಂತ ಎಚ್ಚರಿಕೆಯಿಂದ ತಯಾರಿಸಲಾಗಿದ್ದು ಪ್ರತಿ ಬಾರಿ ಸೇವಿಸಿದಾಗಲೂ ಅದರ ಶ್ರೀಮಂತ ಪರಂಪರೆಯ ಸಾಕ್ಷಿಯಾಗಿರುತ್ತದೆ.

ಬಸವೇಶ್ವರನಗರದ ಹೊಸ ಮಳಿಗೆಯು ಈ ಪ್ರದೇಶದ ಸಿಹಿಪ್ರಿಯರಿಗೆ ಆದ್ಯತೆಯ ತಾಣವಾಗಿದ್ದು ಕಾಲನ ಪರೀಕ್ಷೆಯಲ್ಲಿ ದಾಟಿ ಬಂದ ಪ್ರೀತಿಪಾತ್ರ ರುಚಿ ಉಳಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯಾದ್ಯಂತ 25 ಮಳಿಗೆಗಳು
ಅಮೀನಗಢ ವಿಜಯಾ ಕರದಂಟು ಉತ್ಪಾದಕರು ಇವರು ಭಾರತದ ಮೊದಲ ಸಾಂಪ್ರದಾಯಿಕ ಕರದಂಟು ತಯಾರಕರು. ತನ್ನ ಅತ್ಯುತ್ತಮ ಮತ್ತು ಆರೋಗ್ಯಕರ ಉತ್ಪನ್ನಗಳ ಬಳಕೆ ಮತ್ತು ಸಾಂಪ್ರದಾಯಿಕ ವಿಧಾನಗಳಿಗೆ ಬದ್ಧತೆಯಿಂದ ಈ ಬ್ರಾಂಡ್ ಕರ್ನಾಟಕದಾದ್ಯಂತ ಹೊಸ ಮಳಿಗೆ ಸೇರಿ ಒಟ್ಟು 25 ಮಳಿಗೆಗಳನ್ನು ಹೊಂದಿದೆ ಎಂದು ತಿಳಿಸಿದರು.
ಬೆಂಗಳೂರು ಮಾತ್ರವಲ್ಲದೇ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬಾಗಲಕೋಟೆ, ರಾಯಚೂರು, ಇಳಕಲ್, ಸಿಂಧನೂರು, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಲಭ್ಯವಿದೆ.
ಸದ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಲ್ಕು ಮಳಿಗೆ (ಜೌಟ್‌ಲೆಟ್) ಇವೆ. ವಿಜಯನಗರ, ಜಯನಗರ ಮತ್ತು ಮಲ್ಲೇಶ್ವರಂ ನಲ್ಲಿ ಮೂರು ಮಳಿಗೆ ಇದ್ದು, ಇದೀಗ ನಾಲ್ಕನೇ ಮಳಿಗೆ ಬಸವೇಶ್ವರ ನಗರದಲ್ಲಿ ತೆರೆಯಲಾಗಿದೆ. ಈ ಮೂಲಕ ಬಡಾವಣೆಯ ನಿವಾಸಿಗಳಿಗೆ ಉತ್ತಮ ಬೆಲೆಗೆ ಗುಣಮಟ್ಟದ ಕರದಂಟು ಕೊಳ್ಳಲು ಸಹಾಯವಾಗಲಿದೆ.
ಅಮೀನಗಢದ ವಿಜಯ್ ಕರದಂಟು ಇದು 1907ರಲ್ಲಿ ಆರಂಭವಾದ ಸಿಹಿ ಪದಾರ್ಥವಾಗಿದೆ. ಎಲ್ಲರಿಗೂ ಇಷ್ಟವಾಗುವ ಈ ಪದಾರ್ಥವನ್ನು ಉತ್ತರ ಕರ್ನಾಟಕದವರು ಮಾತ್ರವಲ್ಲದೇ ಬೆಂಗಳೂರಿನ ನಿವಾಸಿಗಳಿಗೂ ಅಚ್ಚು ಮೆಚ್ಚಾಗಿದೆ.












Click it and Unblock the Notifications