ಸರ್ಕಾರದಿಂದ 'ಬೆಂಗಳೂರಿಗರಿಗೆ ತೆಪ್ಪ ಭಾಗ್ಯ': ವಿಪಕ್ಷ
ಬೆಂಗಳೂರು, ಆಗಸ್ಟ್ 13: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ, ಐಟಿ ಕೇಂದ್ರ ಅಂತೆಲ್ಲ ಕರೆಸಿಕೊಳ್ಳುವ ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆ ಸುರಿದ ಒಂದೇ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು ಮಾತ್ರವಲ್ಲದೇ ಬಡಾವಣೆಗಳೇ ಕರೆಯಂತಾದ ದೃಶ್ಯ ಕಂಡು ಬಂತು. ಜನರ ಸಂಚಾರಕ್ಕೆ ಕುತ್ತು ಬಂದಿದೆ. ಇದೆಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರದ ಮತ್ತೊಂದು ಗ್ಯಾರೆಂಟಿ ಎಂದು ಬಿಜೆಪಿ ಲೇವಡಿ ಮಾಡಿದೆ. ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಕಾಲೆಳೆದಿದೆ.
ಕರ್ನಾಟಕ ಬಿಜೆಪಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್) ಟ್ವೀಟ್ ಮಾಡಿದೆ. ಜಲಾವೃತಗೊಂಡ ನಗರದ ಬಡಾವಣೆಯ ಮಳೆ ನೀರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ತೆಪ್ಪದಲ್ಲಿ ನಿಂತು ಬರುತ್ತಿರುವ ಫೋಟೋ ಹಂಚಿಕೊಳ್ಳುವ ಮೂಲಕ ಬ್ರ್ಯಾಂಡ್ ಬೆಂಗಳೂರು ಉಪಕ್ರಮ ಜಾರಿಗೆ ತರಲು ಮುಂದಾಗಿರುವ ಡಿಸಿಎಂ ಅವರಿಗೆ ಲೇವಡಿ ಮಾಡಿದೆ.

'ಬೆಂಗಳೂರಿಗರಿಗೆ ತೆಪ್ಪ ಭಾಗ್ಯ'
ಸಾರ್ವಜನಿಕರು ನೀವು ಕೆಲಸದ ಸ್ಥಳಕ್ಕೆ ಸಂಚರಿಸಲು ಮೆಟ್ರೋ ಯಾಕೆ ಬಳಸುತ್ತೀರಿ ನಿಮಗಾಗಿ ರಾಜ್ಯ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಹೊಸ ಆಯ್ಕೆಗಳನ್ನು ಕಂಡು ಕೊಂಡಿದೆ. 'ಬೆಂಗಳೂರಿಗರಿಗೆ ತೆಪ್ಪ ಭಾಗ್ಯ'ವನ್ನು ಸರ್ಕಾರ ನೀಡಿದೆ ಎಂದು ನಗರದ ಪರಿಸ್ಥಿತಿಯನ್ನು ಲೇವಡಿ ಮಾಡಿದೆ.
ಇಂದಿನ ಸನ್ನಿವೇಶದಲ್ಲಿ ಸ್ಟಾಕ್ ಮಾರುಕಟ್ಟೆಯಲ್ಲಿ ಬೆಳವಣಿಗೆ ಮಾಡುವುದರಲ್ಲಿ ನಿರತವಾಗಿರುವ ಬಾಲಕ ಬುದ್ಧಿಯ ರಾಹುಲ್ ಗಾಂಧಿಯವರೇ ನಮ್ಮೆಲ್ಲರಿಗೂ ದೋಣಿಗಳು ಬೇಕು. ಬೆಂಗಳೂರಿನ ಮೂಲಸೌಕರ್ಯ ಮಾಡಲು ತಮ್ಮ ಕೈಗೊಂಬೆಗಳಿಗೆ ಹೇಳಬೇಕು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಮೂಲಕ ಬ್ರಾಂಡ್ ಬೆಂಗಳೂರು ಹೆಸರಿಗಷ್ಟೇ, ಸೂಕ್ತವಾಗಿ ನಿರ್ವಹಣೆ ಮಾಡುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ತಿಳಿಸಿದೆ.

ಬಿಜೆಪಿ ಅಧಿಯಲ್ಲೂ ಪರಿಸ್ಥಿತಿ ಬದಲಾಗಿರಲಿಲ್ಲ
ಬೆಂಗಳೂರಿನ ಮಟ್ಟಿಗೆ ನೋಡುವುದಾದರೆ ಕೇವಲ ರಾಜ್ಯ ಸರ್ಕಾರ ಮಾತ್ರವಲ್ಲದೇ, ಈ ಹಿಂದೆ ಬಿಜೆಪಿ ಹಾಗೂ ಇನ್ನಿತರ ಸರ್ಕಾರಗಳು ನಗರದ ನಿರ್ವಹಣೆಯಲ್ಲಿ ವಿಫಲಗೊಂಡಿವೆ. ರಸ್ತೆಗುಂಡಿ, ಮಳೆ, ವಿಪತ್ತು ನಿರ್ವಹಣೆಗೆ ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ನಗರದ ರಾಜಕಾಲುವೆ ಒತ್ತುವರಿ ತೆರವು, ಕೆರೆ ರಕ್ಷಣೆ, ಹೂಳು ತೆಗೆಯುವುದು, ಸಂಚಾರ ದಟ್ಟಣೆ ಇಳಿಕೆಗೆ ಕೈಗೊಂಡ ಯೋಜನೆಗಳು, ಹೀಗೆ ಪ್ರತಿ ಹಂತದಲ್ಲಿ ಹಿಂದಿನ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ್ದನ್ನು ಬೆಂಗಳೂರು ನಿವಾಸಿಗಳು ಆಯಾ ಕಾಲಘಟ್ಟದಲ್ಲಿ ಕಂಡಿದ್ದಾರೆ.
ಸೋಮವಾರದ ಮಳೆಗೆ ಜನ ಜೀವನ ಅಸ್ತವ್ಯಸ್ಥ
ಬಿಜೆಪಿ ಅವಧಿಯಲ್ಲೂ ಸಾಕಷ್ಟು ಕಡೆಗಳ ಮಳೆ, ನೆರೆ ಹಾನಿ ಉಂಟಾಗಿತ್ತು. ಆಗಲೂ ಅಗತ್ಯ ಸೂಚನೆ ನೀಡಲಾಯಿತು. ವ್ಯವಸ್ಥಿತವಾಗಿ ಕ್ರಮ ಕೈಗೊಳ್ಳುವ ಭರವಸೆಗಳು ವ್ಯಕ್ತವಾದವು ವಿನಃ ದೂರದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳು, ಸಮಸ್ಯೆಪಗೆ ಪರಿಹಾರ ಹುಡುಕುವ ಪ್ರಾಮಾಣಿಕ ಕೆಲಸವಾಗಲಿಲ್ಲ. ಇದರ ಪರಿಣಾಮವೇ ಬೆಂಗಳೂರಿನಲ್ಲಿ ಜನರು ಕೆಲವೇ ನಿಮಿಷಗಳ ಮೇಳೆಗೆ ತತ್ತರಿಸುವಂತಾಗಿದೆ.
ಮಳೆ, ಪ್ರವಾಹ, ಯೋಜನೆ, ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ಕೆಸರೆರಚಾಟ ಎಂದಿನಂತೆ ಮುಂದುವರಿದಿದೆ. ನೆನ್ನೆ ಬೆಳಗ್ಗೆ ಬಂದ ಮಳೆಯಿಂದ ನಗರದ ನಾಗವಾರ ರಸ್ತೆ, ವರ್ತೂರು-ಪಣತ್ತೂರು ಮುಖ್ಯರಸ್ತೆ, ಹೆಬ್ಬಾಳ, ಸಿಲ್ಕ್ಬೋರ್ಡ್ ಜಂಕ್ಷನ್, ಹೆಣ್ಣೂರು ರಸ್ತೆ ಹಾಗೂ ಇನ್ನಿತರ ಕಡೆಗಳಲ್ಲಿ ಮಳೆ ಉಕ್ಕಿ ಹರಿಯಿತು. ಇದರಿಂದ ಸಾಂಚಾರಕ್ಕೆ ಸಾಕಷ್ಟು ಸಮಸ್ಯೆ ಆಯಿತು.
Why take the metro when you can cruise your way to work? Congress Model of ‘Brand Bengaluru’s’ got options!🚇🚢
— BJP Karnataka (@BJP4Karnataka) August 13, 2024
Balak Buddhi @RahulGandhi , who is nowadays busy giving stock market gyaan 📈, should tell his puppets 🤖 to first invest in fixing Bengaluru’s infrastructure before… pic.twitter.com/yf43FAj78J
ಸಿಲ್ಕ್ಬೋರ್ಡ್ ಜಂಕ್ಷನ್ ವ್ಯಾಪ್ತಿಯಲ್ಲಿ ಮಳೆ ನೀರು ನಿಂತ ಕಾರಣದ ರಾಜಕಾಲುವೆಗೆ ಕಾರು ಧುಮುಕಿತ್ತು. ಇದನ್ನು ನೋಡಿದ ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸಿದರು. ಇಲ್ಲದಿದ್ದರೆ ದೊಡ್ಡ ಅವಘಡವೇ ನಡೆದು ಹೋಗುತ್ತಿತ್ತು. ಪ್ರಾಣ ಹಾನಿಯು ಉಂಟಾಗುತ್ತಿತ್ತು, ಅದೃಷ್ಟವಶಾತ್ ತಪ್ಪಿತು.
ಒಳಚರಂಡಿ, ರಾಜಕಾಲುವೆ ತುಂಬಿ ಹರಿದ ಪರಿಣಾಮ ಜಲಾವೃತಗೊಂಡ ರಸ್ತೆಗಳ ಮೇಲೆ ಮೀನುಗಳು ಈಜಾಡುವ ದೃಶ್ಯ ಕಂಡು ಬಂತು. ಮಳೆ ನೀರು ನಿಂತಿದ್ದ ಕಾರಣದಿಂದಾಗಿ ಈ ಭಾಗದಲ್ಲೂ ಬೆಳಗಿನ ಹೊತ್ತು ಭಾರೀ ಸಂಚಾರ ದಟ್ಟಣೆ ಸೃಷ್ಟಿಯಾಗಿತ್ತು. ನಗರದ ಅನೇಕ ಕಡೆಗಳಲ್ಲಿ ಸಮಸ್ಯೆ ಆಗಿದ್ದು, ರಸ್ತೆ ಅಂಡರ್‌ಪಾಸ್‌ಗಳಲ್ಲಿ ವಾಹನ ಸವಾರರು ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು.












Click it and Unblock the Notifications