ಬೆಂಗಳೂರಿನಲ್ಲಿವೆ 14,520 ಸಕ್ರಿಯ ಕಂಟೈನ್ಮೆಂಟ್ ಜೋನ್‌ಗಳು, ಎಲ್ಲಿ ಹೆಚ್ಚು?
ಬೆಂಗಳೂರು, ಸೆಪ್ಟೆಂಬರ್ 7: ಬೆಂಗಳೂರಲ್ಲಿ ಒಟ್ಟು14,520 ಕಂಟೈನ್ಮೆಂಟ್ ಜೋನ್‌ಗಳು ಸಕ್ರಿಯವಾಗಿವೆ. ಅತಿ ಹೆಚ್ಚು ಕಂಟೈನ್ಮೆಂಟ್ ಜೋನ್‌ಗಳು ಆರ್‌ಆರ್ ನಗರದಲ್ಲಿವೆ.
Recommended Video
ಬಿಬಿಎಂಪಿ ಹೆಲ್ತ್ ಬುಲೆಟಿನ್ ಮೂಲಕ ಬೆಂಗಳೂರಿನಲ್ಲಿ ಒಟ್ಟು 14,520 ಸಕ್ರಿಯ ಕಂಟೈನ್ಮೆಂಟ್ ಜೋನ್‌ಗಳಿರುವುದು ತಿಳಿದುಬಂದಿದೆ. ನಗರದಲ್ಲಿ ಒಟ್ಟು 17,282 ಕಂಟೈನ್ಮೆಂಟ್ ಜೋನ್‌ಗಳಿವೆ. 2,762 ಕಂಟೈನ್ಮೆಂಟ್ ಜೋನ್‌ಗಳು ಸಹಜ ಸ್ಥಿತಿಗೆ ಮರಳಿವೆ.
ಸಕ್ರಿಯ ಜೋನ್‌ಗಳ ಪೈಕಿ ಹೆಚ್ಚು ಕಂಟೈನ್ಮೆಂಟ್ ಜೋನ್‌ಗಳು ಾಜರಾಜೇಶ್ವರಿನಗರದಲ್ಲಿವೆ. ಆರ್ಆರ್ ನಗರಲ್ಲಿ 3155, ಬೊಮ್ಮನಹಳ್ಳಿ 2893, ಮಹಾದೇವಪುರ 2410. ಯಲಹಂಕ 1684, ಬೆಂಗಳೂರು ಪಶ್ಚಿಮ 1525,ಬೆಂಗಳೂರು ದಕ್ಷಿಣ 1192, ದಾಸರಹಳ್ಳಿ 1084, ಬೆಂಗಳೂರು ಉತ್ತರ 613 ಕಂಟೈನ್ಮೆಂಟ್ ಜೋನ್‌ಗಳಿವೆ.

ಬೆಂಗಳೂರಿನಲ್ಲಿ ಭಾನುವಾರ 2824 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 4540 ಮಂದಿ ಗುಣಮುಖರಾಗಿದ್ದಾರೆ.38 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಭಾನುವಾರ 9319 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
95 ಮಂದಿ ಮೃತಪಟ್ಟಿದ್ದಾರೆ. ಒಟ್ಟು 3.98 ಲಕ್ಷ ಮಂದಿಗೆ ಸೋಂಕು ತಗುಲಿದೆ.ಕೊರೊನಾ ಸೋಂಕು 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೆಚ್ಚು ತಗುಲಿದೆ. ಕಳೆದ 14 ದಿನಗಳಿಂದ 4.94 ಲಕ್ಷ ಮಂದಿ ಗೃಹಬಂಧನದಲ್ಲಿದ್ದಾರೆ.












Click it and Unblock the Notifications