ಬೆಂಗಳೂರು: 24 ವಯಸ್ಸಿನಲ್ಲಿ 13 ಕೋಟಿ ರೂ. ವಹಿವಾಟು, 1.8 ಕೋಟಿ ರೂ. ಫ್ಲ್ಯಾಟ್ ಖರೀದಿ: Gen Z ಉದ್ಯಮಿ ಆಕಾಶ್ ಯಶಸ್ಸಿನ ಕಥೆ

ಬೆಂಗಳೂರಿನಂತಹ ಮಹಾನಗರಕ್ಕೆ ಕಾಲಿಟ್ಟ ಹೊಸದರಲ್ಲಿ ಗಗನಚುಂಬಿ ಕಟ್ಟಡಗಳನ್ನಾ ನೋಡಿದಾಗ ಇಂತಹದೊಂದು ಸ್ವಂತ ಮನೆ ಖರೀದಿಸಬೇಕು ಎಂದು ಬಹುತೇಕರು ಕನಸು ಕಾಣುತ್ತಾರೆ. ಆದರೆ, ಕೇವಲ 24 ವರ್ಷದ ಯುವಕನೊಬ್ಬ ತನ್ನ ಸ್ವಂತ ದುಡಿಮೆಯಲ್ಲಿ ಬರೋಬ್ಬರಿ 1.8 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್ ಖರೀದಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ ಎಂದರೆ ನೀವು ನಂಬುತ್ತಿರಾ?.

ಹೌದು. ನೀವು ನಂಬಲೇಬೇಕು. ಬೆಂಗಳೂರು ಮೂಲದ ಜೆನ್-ಜೀ ಉದ್ಯಮಿ ಆಕಾಶ್ ನಾರಾಯಣ್ ಅವರ ಈ ಸಾಧನೆ ಇದೀಗ ಯುವಜನತೆಗೆ ದೊಡ್ಡ ಸ್ಫೂರ್ತಿ ಎನ್ನಬಹುದು.

Bengaluru

ಕೌಟುಂಬಿಕ ಸವಾಲುಗಳು ಹಾಗೂ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಛಲ ಬಿಡದೆ ಹೋರಾಡಿದ ಆಕಾಶ್, ಇಂದು ವಾರ್ಷಿಕ 13 ಕೋಟಿ ರೂ. ಆದಾಯ ಗಳಿಸುವ ಲೀಗಲ್‌ ಟೆಕ್‌ ಸ್ಟಾರ್ಟ್‌ಅಪ್ ಕಂಪನಿಯನ್ನ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ವಿಶೇಷವೆಂದರೆ, ತಮ್ಮ ಈ ಸಾಧನೆಯನ್ನ ವೈಯಕ್ತಿಕ ಎಂದು ಹೇಳಿಕೊಳ್ಳದ ಆಕಾಶ್, ಇದರ ಸಂಪೂರ್ಣ ಶ್ರೇಯಸ್ಸನ್ನ ತಮ್ಮ ತಾಯಿ ಹಾಗೂ ಆರಂಭಿಕ ದಿನಗಳಿಂದ ಜೊತೆಗಿದ್ದ ತಂಡಕ್ಕೆ ಅರ್ಪಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

13 ಕೋಟಿ ರೂ. ಆದಾಯ ಗಳಿಸುತ್ತಿರುವ 'ಲೀಗಲಿಟ್'

ಆಕಾಶ್ ನಾರಾಯಣ್ ಅವರು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಲಾದಲ್ಲಿ ಕಾನೂನು ಪದವಿ ಪಡೆದಿದ್ದು, ಬಳಿಕ ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಡೇಟಾ ಸೈನ್ಸ್ ವ್ಯಾಸಂಗ ಮಾಡಿದ್ದಾರೆ. 2023ರಲ್ಲಿ ವಕೀಲರಿಗಾಗಿ 'ಲೀಗಲಿಟ್' ಎಂಬ ಪ್ರಾಕ್ಟೀಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಸ್ಟಾರ್ಟ್‌ಅಪ್ ಆರಂಭಿಸಿದರು.

ಯಾವುದೇ ಅನುಭವವಿಲ್ಲದೆ ಆರಂಭಿಸಿದ ಈ ಸಂಸ್ಥೆ, ಕೇವಲ ಕೆಲವೇ ವರ್ಷಗಳಲ್ಲಿ ವಾರ್ಷಿಕ 13 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದು ನಿಂತಿದೆ ನೋಡಿ. ವಕೀಲರ ವೃತ್ತಿಪರ ಕೆಲಸಗಳನ್ನ ಸುಲಭಗೊಳಿಸುವ ತಂತ್ರಜ್ಞಾನವನ್ನ ಈ ಕಂಪನಿ ಒದಗಿಸುತ್ತಿದ್ದು, ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಎಲೆಕ್ಟ್ರಾನಿಕ್ ಸಿಟಿ ಬಳಿ ಐಷಾರಾಮಿ ಮನೆ

ತಮ್ಮ ಉದ್ಯಮದ ಯಶಸ್ಸಿನ ಫಲವಾಗಿ ಆಕಾಶ್ ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ 'ಕ್ಯಾಸಾಗ್ರಾಂಡ್ ವಿವ್ಯಾಸಿಟಿ' ಪ್ರಾಜೆಕ್ಟ್‌ನಲ್ಲಿ 1.8 ಕೋಟಿ ರೂ. ಮೌಲ್ಯದ ಐಷಾರಾಮಿ ಫ್ಲ್ಯಾಟ್ ಖರೀದಿಸಿದ್ದಾರೆ. ಈ ಅಪಾರ್ಟ್‌ಮೆಂಟ್ ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು, 2027ರ ಏಪ್ರಿಲ್ ವೇಳೆಗೆ ಗೃಹಪ್ರವೇಶಕ್ಕೆ ಲಭ್ಯವಾಗಲಿದೆ.

"24ನೇ ವಯಸ್ಸಿನಲ್ಲಿ ನಾನು ನನ್ನ ಮೊದಲ ಅಪಾರ್ಟ್‌ಮೆಂಟ್ ಖರೀದಿಸಿದ್ದೇನೆ. ಈ ಸಾಧನೆ ಕೇವಲ ನನ್ನದಲ್ಲ; ಇದು ನನ್ನ ಕುಟುಂಬ, ಮಾರ್ಗದರ್ಶಕರು, ತಂಡ ಮತ್ತು ಕಷ್ಟದ ಸಮಯದಲ್ಲಿ ಜೊತೆಗಿದ್ದ ಸ್ನೇಹಿತರಿಗೆ ಸಲ್ಲಬೇಕು. ಜೀವನದಲ್ಲಿ ಕಲಿತ ಪ್ರತಿ ಪಾಠ, ನಿದ್ದೆಯಿಲ್ಲದ ಅದೆಷ್ಟೋ ರಾತ್ರಿಗಳು ಮತ್ತು ನಾನು ಮಾಡಿದ ತ್ಯಾಗ ನನ್ನನ್ನ ಇಂದು ಈ ಹಂತಕ್ಕೆ ತಂದು ನಿಲ್ಲಿಸಿದೆ. ಇದು ಕೇವಲ ಆರಂಭವಷ್ಟೇ" ಎಂದು ಆಕಾಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಾಯಿ ಮತ್ತು ತಂಡಕ್ಕೆ ಶ್ರೇಯಸ್ಸು

ಹಿಂದುಸ್ತಾನ್ ಟೈಮ್ಸ್ ಜೊತೆ ತಮ್ಮ ಅನುಭವ ಹಂಚಿಕೊಂಡಿರುವ ಆಕಾಶ್, "ನನಗೆ ಮನೆಯ ಕೀ ಸಿಕ್ಕಾಗ ಫೋಟೋ ಹಾಕಿ ಸಂಭ್ರಮಿಸಬೇಕು ಎಂದು ಎನ್ನಿಸಲೇ ಇಲ್ಲ. ಬದಲಿಗೆ, ಈ ಹಂತಕ್ಕೆ ಬರುವ ಮುನ್ನ ನಾನು ಕಳೆದ ಕಷ್ಟದ ದಿನಗಳು ನೆನಪಾದವು. ಕೌಟುಂಬಿಕ ಸಮಸ್ಯೆಗಳ ನಡುವೆ ಇಂತಹದ್ದೊಂದು ಮನೆ ತೆಗೆದುಕೊಳ್ಳಬೇಕು ಎನ್ನುವುದು ದೊಡ್ಡ ಕನಸಾಗಿತ್ತು. ಇದು ಒಬ್ಬ ವ್ಯಕ್ತಿಯ ಸಾಧನೆಯಂತೆ ಕಂಡರೂ ಸತ್ಯ ಅದಲ್ಲ" ಎಂದಿದ್ದಾರೆ.

" ಕಷ್ಟದ ದಿನಗಳಲ್ಲಿ ಪ್ರತಿದಿನ ನನಗೆ ನನ್ನ ತಾಯಿ ಧೈರ್ಯ ನೀಡುತ್ತಿದ್ದರು. ಯಾವುದೇ ಅನುಭವವಿಲ್ಲದ ನನ್ನ ಮೇಲೆ ಮತ್ತು ಮಾರುಕಟ್ಟೆಯಲ್ಲಿ ಸಾಬೀತಾಗದ ನನ್ನ ಉತ್ಪನ್ನದ ಮೇಲೆ ನನ್ನ ತಂಡ ನಂಬಿಕೆಯಿಟ್ಟು ಕೆಲಸ ಮಾಡಿತು. ಹಾಗಾಗಿ ಈ ಯಶಸ್ಸನ್ನ ನಾನು ಒಬ್ಬನೇ ಸಂಭ್ರಮಿಸುವುದು ಸರಿಯಲ್ಲ" ಎಂದು ಆಕಾಶ್ ಭಾವುಕರಾಗಿ ನುಡಿದಿದ್ದಾರೆ. ಆಕಾಶ್ ಅವರ ಈ ಡೌನ್‌ ಟು ಅರ್ತ್‌ ಬಿಹೇವಿಯರ್‌ ಹಾಗೂ ಅವರ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ಹಾಗೂ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+