ತನ್ನ ಮೊದಲ YouTube ವಿಡಿಯೋಗೆ ಬರೋಬ್ಬರಿ 1.5 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ಮಹಿಳಾ ಉದ್ಯಮಿ: ಕಾರಣವೇನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಕಂಟೆಂಟ್ ಕ್ರಿಯೇಷನ್ ಎಂಬುದು ಅತಿ ದೊಡ್ಡ ಟ್ರೆಂಡ್ ಆಗಿದೆ. ಕೇವಲ ಒಂದು ಸ್ಮಾರ್ಟ್‌ಫೋನ್ ಹಿಡಿದುಕೊಂಡು ವಿಡಿಯೋ ಮಾಡಿ ಹಣ ಗಳಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಬೆಂಗಳೂರಿನ ಉದ್ಯಮಿಯೊಬ್ಬರು ತಮ್ಮ ಮೊದಲ 20 ನಿಮಿಷದ ಯೂಟ್ಯೂಬ್ ವಿಡಿಯೋಗಾಗಿ ಬರೋಬ್ಬರಿ 1.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.

ಅಷ್ಟಕ್ಕೂ ಕೇವಲ ಒಂದು ವಿಡಿಯೋಗೆ ಇಷ್ಟು ದೊಡ್ಡ ಮೊತ್ತವನ್ನ ಏಕೆ ಖರ್ಚು ಮಾಡಿದ್ದಾರೆ ಎಂಬುದನ್ನ ಅವರು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ವಿವರವಾಗಿ ಹಂಚಿಕೊಂಡಿದ್ದಾರೆ.

Bengaluru Founder Spends Rs 1 5 Lakh On Her First YouTube Video Read Her Viral LinkedIn Post

ಚಂದ್ರಲೇಖಾ ಎಂ.ಆರ್ (Chandralekha MR) ಎಂಬುವವರೇ ಈ ವಿಡಿಯೋಗೆ ಹಣ ಸುರಿದ ಬೆಂಗಳೂರಿನ ಸ್ಟಾರ್ಟ್‌ಅಪ್ ಫೌಂಡರ್. ಹಣಕಾಸು ವಿಷಯದ ಕುರಿತು ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಅವರು ಈ ಹೆಜ್ಜೆ ಇಟ್ಟಿದ್ದಾರೆ. ಈ ಕುರಿತು ಅವರು ಬರೆದುಕೊಂಡಿರುವ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ಲಿಂಕ್ಡ್‌ಇನ್ (LinkedIn) ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಚಂದ್ರಲೇಖಾ, "ನಾನು ಯೂಟ್ಯೂಬ್ ಚಾನೆಲ್ ಆರಂಭಿಸಲು ಬರೋಬ್ಬರಿ 18 ತಿಂಗಳುಗಳಿಂದ ಕಾಯುತ್ತಿದ್ದೆ. ಕೊನೆಗೆ ನನ್ನ ಮೊದಲ ವಿಡಿಯೋಗೆ 1.5 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಇದೊಂದು ದೀರ್ಘಾವಧಿಯ ಫೈನಾನ್ಸ್ ವಿಡಿಯೋ ಆಗಿದ್ದು, ಇದನ್ನು ಸಿದ್ಧಪಡಿಸಲು ಒಂದು ಇಡೀ ತಂಡವೇ ಶ್ರಮಿಸಿದೆ ಹಾಗೂ ಒಂದು ತಿಂಗಳ ಸಮಯಾವಕಾಶ ತೆಗೆದುಕೊಂಡಿದೆ.

ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಏಕೆ ಕುಸಿಯುತ್ತಿದೆ ಎಂಬುದನ್ನ ವಿವರಿಸುವ 20 ನಿಮಿಷದ ವಿಡಿಯೋ ಇದಾಗಿದೆ. ನಾನು ಕೇವಲ ಕ್ಯಾಮೆರಾ ಆನ್ ಮಾಡಿಕೊಂಡು 20 ನಿಮಿಷ ಮಾತನಾಡಿ ಕಡಿಮೆ ಖರ್ಚಿನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಬಹುದಿತ್ತು. ಆದರೆ, ನನಗೆ ಆ ರೀತಿ ಮಾಡಲು ಇಷ್ಟವಿರಲಿಲ್ಲ" ಎಂದು ವಿವರಿಸಿದ್ದಾರೆ.

20 ನಿಮಿಷದ ವಿಡಿಯೋಗೆ 1.5 ಲಕ್ಷ ರೂ. ಖರ್ಚು!

ಹಣಕಾಸು ವಿಚಾರಗಳನ್ನ ವಿಡಿಯೋ ಮೂಲಕ ಜನರಿಗೆ ಅರ್ಥ ಮಾಡಿಸುವುದು ತುಂಬಾ ಸವಾಲಿನ ಕೆಲಸ. ವೀಕ್ಷಕರಿಗೆ ಆರ್ಥಿಕ ವಿಚಾರಗಳು ಸುಲಭವಾಗಿ ಅರ್ಥವಾಗಬೇಕು ಮತ್ತು ಅವರು ವಿಡಿಯೋವನ್ನ ಕೊನೆಯವರೆಗೂ ನೋಡುವಂತೆ ಆಸಕ್ತಿ ಮೂಡಿಸಬೇಕು. "ನನ್ನ ಮೊದಲ ಯೂಟ್ಯೂಬ್ ಪ್ರಯತ್ನ ಕೇವಲ ಒಂದು ಇನ್‌ಸ್ಟಾಗ್ರಾಮ್ ರೀಲ್‌ನಂತೆ ಇರಬಾರದು ಎಂದು ನಾನು ನಿರ್ಧರಿಸಿದ್ದೆ.

ಹಾಗಾಗಿ ಉತ್ತಮ ಸಂಶೋಧನೆ, ಸ್ಕ್ರಿಪ್ಟ್, ಉದಾಹರಣೆಗಳು, ದೃಶ್ಯ ಸಂಯೋಜನೆ ಹಾಗೂ ಎಡಿಟಿಂಗ್ ಕಡೆಗೆ ಹೆಚ್ಚಿನ ಗಮನ ಹರಿಸಿದೆವು. ಇದರಲ್ಲಿ ಒಂದು ಸಣ್ಣ ತಪ್ಪು ನಿರ್ಧಾರ ಇಡೀ ವಿಡಿಯೋವನ್ನೇ ನೀರಸಗೊಳಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ವೃತ್ತಿಪರ ತಂಡದೊಂದಿಗೆ ಸೇರಿ ಈ ಗುಣಮಟ್ಟದ ಕಂಟೆಂಟ್ ಸಿದ್ಧಪಡಿಸಿದ್ದೇವೆ" ಎಂದು ಚಂದ್ರಲೇಖಾ ಹೇಳಿದ್ದಾರೆ.

ಲಿಂಕ್ಡ್‌ಇನ್ ವೈರಲ್ ಪೋಸ್ಟ್ ಮೂಲಕ ಮಾಹಿತಿ

ಮುಂದಿನ 20 ವಿಡಿಯೋಗಳಿಗೂ ಇದೇ ರೀತಿ 1.5 ಲಕ್ಷ ರೂಪಾಯಿ ಖರ್ಚು ಮಾಡುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂಬುದನ್ನು ಚಂದ್ರಲೇಖಾ ಒಪ್ಪಿಕೊಂಡಿದ್ದಾರೆ. ಆದರೆ, ಈ ಮೊದಲ ವಿಡಿಯೋಗೆ ಇಷ್ಟು ದೊಡ್ಡ ಬಂಡವಾಳ ಹೂಡಿದ್ದು, ಅವರಲ್ಲಿದ್ದ 18 ತಿಂಗಳಿಂದ ಹಿಂದೇಟು ಹಾಕುತ್ತಿದ್ದ ಮನಸ್ಥಿತಿಯನ್ನ ಮುರಿಯಲು ಸಹಾಯ ಮಾಡಿದೆ.

"ಉದ್ಯಮಿಗಳು ಸಾಮಾನ್ಯವಾಗಿ ಯಾವುದೇ ಹೊಸ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಅತಿಯಾಗಿ ಯೋಚಿಸುತ್ತಾರೆ. ನನಗೂ ಯೂಟ್ಯೂಬ್‌ನಲ್ಲಿ ಯಶಸ್ಸು ಸಿಗುತ್ತದೆ ಎಂಬ ಯಾವುದೇ ಖಚಿತತೆ ಇರಲಿಲ್ಲ. ಆದರೆ, ನನ್ನ ಆಸಕ್ತಿಯ ವಿಷಯ, ಜೊತೆಯಾಗಿ ಕೆಲಸ ಮಾಡಲು ಸಿದ್ಧವಿದ್ದ ತಂಡ ಹಾಗೂ ದೊಡ್ಡ ಮೊತ್ತದ ಕಮಿಟ್‌ಮೆಂಟ್ ನನ್ನನ್ನ ಈ ಹಂತಕ್ಕೆ ತಂದು ನಿಲ್ಲಿಸಿದೆ" ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಚಂದ್ರಲೇಖಾ ಅವರ ಈ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಅವರ ಗುಣಮಟ್ಟದ ವಿಡಿಯೋವನ್ನ ಮೆಚ್ಚಿಕೊಂಡಿದ್ದಾರೆ. "ಸಂಕೀರ್ಣವಾದ ಹಣಕಾಸು ವಿಚಾರಗಳನ್ನ 20 ನಿಮಿಷಗಳಲ್ಲಿ ಅರ್ಥೈಸಲು ಇಂತಹ ಗುಣಮಟ್ಟದ ಅಗತ್ಯವಿದೆ" ಎಂದು ಅನೇಕರು ಶ್ಲಾಘಿಸಿದ್ದಾರೆ.

ಆದರೆ ಬಳಕೆದಾರರೊಬ್ಬರು, "ಈ 1.5 ಲಕ್ಷ ರೂಪಾಯಿಯನ್ನ ಯೂಟ್ಯೂಬ್ ಜಾಹೀರಾತುಗಳಿಗೆ ಏಕೆ ಖರ್ಚು ಮಾಡಬಾರದಿತ್ತು?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಜಾಣ್ಮೆಯ ಉತ್ತರ ನೀಡಿರುವ ಚಂದ್ರಲೇಖಾ, "ಜಾಹೀರಾತುಗಳು ಕೇವಲ ಜನರನ್ನ ತಲುಪುತ್ತವೆ, ಆದರೆ ಗುಣಮಟ್ಟದ ಕಂಟೆಂಟ್ ಜನರ ವಿಶ್ವಾಸವನ್ನ ಗಳಿಸುತ್ತದೆ. ರೀಚ್ ಪಡೆಯುವ ಬದಲು ಕಂಟೆಂಟ್ ಗುಣಮಟ್ಟದ ಮೇಲೆ ಹೂಡಿಕೆ ಮಾಡುವುದು ನನ್ನ ಗುರಿಯಾಗಿತ್ತು" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+