ಉದ್ಯೋಗವಿಲ್ಲ, ಬೆಲೆ ಏರಿಕೆ ಬಿಸಿ, ಎಐ ಕಂಟಕ: ಭಾರತದ ಯುವಜನರ ಹತಾಶೆಗೆ ಅಸಲಿ ಕಾರಣ ಬಿಚ್ಚಿಟ್ಟ ಬೆಂಗಳೂರು ಉದ್ಯಮಿ

ಬೆಂಗಳೂರು: ಶಾಲಾ-ಕಾಲೇಜು ದಿನಗಳಲ್ಲಿ ಕಷ್ಟಪಟ್ಟು ಓದಿ, ಉತ್ತಮ ಅಂಕಗಳೊಂದಿಗೆ ಪದವಿ ಪಡೆದರೆ ಕೈತುಂಬಾ ಸಂಬಳ ತರುವ ಒಂದು ಸೆಕ್ಯೂರ್‌ ಜಾಬ್‌ ಸಿಗುತ್ತದೆ ಎಂಬುದು ಹಿಂದಿನಿಂದಲೂ ಜನರಲ್ಲಿ ಬೆಳೆದುಬಂದಿರುವ ನಂಬಿಕೆ. ಆದರೆ, ಇಂದಿನ ವಾಸ್ತವ ಸ್ಥಿತಿಯೇ ಬೇರೆ. ಎಷ್ಟೇ ಕೌಶಲ್ಯಗಳನ್ನ ಬೆಳೆಸಿಕೊಂಡರೂ, ಕಷ್ಟಪಟ್ಟು ಓದಿದರೂ ಯುವಜನತೆಗೆ ಒಂದು ಅರ್ಥಪೂರ್ಣ ಕೆಲಸ ಸಿಗುತ್ತಿಲ್ಲ.

ಐಟಿ ವಲಯದಲ್ಲಿ ಆಗುತ್ತಿರುವ ಉದ್ಯೋಗ ಕಡಿತ, ದಿನನಿತ್ಯಕ್ಕೆ ಬಳಸುವ ವಸ್ತುಗಳ ಬೆಲೆ ಏರಿಕೆ ಹಾಗೂ ಕೃತಕ ಬುದ್ಧಿಮತ್ತೆಯ (ಎಐ) ಅಬ್ಬರದಿಂದಾಗಿ ಭಾರತದ ಯುವಜನತೆ ತೀವ್ರ ಹತಾಶೆಗೊಳಗಾಗಿದ್ದಾರೆ . ಈ ಕುರಿತು ಏಯೋಸ್ ಗೇಮ್ಸ್ ಸಂಸ್ಥಾಪಕ, ಬೆಂಗಳೂರು ಮೂಲದ ಉದ್ಯಮಿ ರೋಹನ್ ಮಯ್ಯ ಅವರು ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ಇದು ಪ್ರಸ್ತುತ ಆರ್ಥಿಕ ಮತ್ತು ಉದ್ಯೋಗ ಮಾರುಕಟ್ಟೆಯ ಚಿತ್ರಣವನ್ನ ಬಿಚ್ಚಿಟ್ಟಿದೆ.

Bengaluru Founder Explains Why Indian Youth Are Frustrated Amid AI Disruption amp amp Rising Job Crisis

ಪದವೀಧರರ ಸಂಖ್ಯೆ ಹೆಚ್ಚು, ಉದ್ಯೋಗಗಳ ಕೊರತೆ

ವೈ ಕಾಂಬಿನೇಟರ್ ಹಳೆಯ ವಿದ್ಯಾರ್ಥಿಯಾಗಿರುವ ರೋಹನ್ ಮಯ್ಯ ಅವರ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಅಂದಾಜು 10 ದಶಲಕ್ಷ (1 ಕೋಟಿ) ವಿದ್ಯಾರ್ಥಿಗಳು ಪದವಿ ಪೂರೈಸಿ ಹೊರಬರುತ್ತಾರೆ. ಇವರಲ್ಲಿ ಕನಿಷ್ಠ 1.5 ದಶಲಕ್ಷ (15 ಲಕ್ಷ) ಮಂದಿ ಇಂಜಿನಿಯರ್‌ಗಳಿರುತ್ತಾರೆ. ಆದರೆ, ಇಷ್ಟು ದೊಡ್ಡ ಮಟ್ಟದಲ್ಲಿ ಮಾನವ ಸಂಪನ್ಮೂಲವನ್ನ ಬಳಸಿಕೊಳ್ಳುವಂತಹ ಉದ್ಯೋಗಾವಕಾಶಗಳು ನಮ್ಮಲ್ಲಿ ಸೃಷ್ಟಿಯಾಗುತ್ತಿಲ್ಲ.

ವಿಶೇಷವಾಗಿ 2020ರ ಕೋವಿಡ್ ಸಾಂಕ್ರಾಮಿಕದ ನಂತರ ಪರಿಸ್ಥಿತಿ ಬಿಗಡಾಯಿಸಿದೆ. ಡಿಜಿಟಲ್ ಕೌಶಲ್ಯಗಳನ್ನ ಕರಗತ ಮಾಡಿಕೊಂಡಿರುವ ಲಕ್ಷಾಂತರ ಯುವಕರು ಉದ್ಯೋಗ ಮಾರುಕಟ್ಟೆಯಲ್ಲಿದ್ದರೂ, ಅವರಿಗೆ ತಕ್ಕ ಕೆಲಸ ಸಿಗುತ್ತಿಲ್ಲ. ಕೆಲಸಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಟೆಕ್ ಉದ್ಯೋಗಗಳಿಗೆ ಕೃತಕ ಬುದ್ಧಿಮತ್ತೆ ಕಂಟಕ

2023ರ ಬಳಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಆದ ಕ್ರಾಂತಿಕಾರಿ ಬೆಳವಣಿಗೆಗಳು ಟೆಕ್ ಉದ್ಯೋಗ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಹಲವು ಪ್ರಮುಖ ಟೆಕ್ ಕಂಪನಿಗಳು ಸಾಲು ಸಾಲಾಗಿ ಉದ್ಯೋಗ ಕಡಿತ (ಲೇಆಫ್‌) ಮಾಡುತ್ತಿವೆ.

ಇದರಿಂದಾಗಿ ಹೊಸದಾಗಿ ಐಟಿ ಕ್ಷೇತ್ರ ಪ್ರವೇಶಿಸುವ ಎಂಟ್ರಿ-ಲೆವೆಲ್ ಉದ್ಯೋಗಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಟೆಕ್ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗೋಣ ಎಂದರೆ ಅಲ್ಲಿಯೂ ಪರ್ಯಾಯಗಳ ಕೊರತೆಯಿದೆ. ಚೀನಾದಂತೆ ಭಾರತವು ಮೂಲತಃ ಉತ್ಪಾದನಾ ದೇಶವಲ್ಲ. ಸಾಮಾನ್ಯ ಜನರಿಗೆ ಈ ಕ್ಷೇತ್ರಕ್ಕೆ ಹೇಗೆ ಪ್ರವೇಶಿಸಬೇಕು ಎಂಬ ಅರಿವಿಲ್ಲ. ಜೊತೆಗೆ, ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮೇಲಿನ ಹೂಡಿಕೆ ಕೇವಲ ಜಿಡಿಪಿಯ ಶೇ. 0.7ರಷ್ಟಿದೆ. ಹೀಗಾಗಿ ಸಂಶೋಧನೆ ಮಾಡಬಯಸುವವರು ಅನಿವಾರ್ಯವಾಗಿ ವಿದೇಶಗಳಿಗೆ ಹೋಗಬೇಕಾಗಿದೆ.

ಭ್ರಷ್ಟಾಚಾರ ಹಾಗೂ ಅಧಿಕಾರಿಶಾಹಿ ವ್ಯವಸ್ಥೆಯಿಂದಾಗಿ ಸಾಂಪ್ರದಾಯಿಕ ವ್ಯವಹಾರಗಳನ್ನ ಮಾಡುವುದು ಕಷ್ಟಕರವಾಗಿದೆ. ಹಾಗಾಗಿ ಯುವಜನರಿಗೆ ಸಾಫ್ಟ್‌ವೇರ್ ಕ್ಷೇತ್ರವೊಂದೇ ಅಂತಿಮ ಆಶ್ರಯವಾಗಿತ್ತು, ಈಗ ಅದಕ್ಕೂ ಕುತ್ತು ಬಂದಿದೆ ಎಂದು ಮಯ್ಯ ವಿಶ್ಲೇಷಿಸಿದ್ದಾರೆ.

ಹಣದುಬ್ಬರ ಹಾಗೂ ಕೈಗೆಟುಕದ ರಿಯಲ್ ಎಸ್ಟೇಟ್ ಬೆಲೆ

ಒಂದೆಡೆ ನಿರುದ್ಯೋಗ ತಾಂಡವವಾಡುತ್ತಿದ್ದರೆ, ಮತ್ತೊಂದೆಡೆ ಮಿತಿಮೀರಿದ ಹಣದುಬ್ಬರ (Inflation) ಜನಸಾಮಾನ್ಯರ ಉಳಿತಾಯವನ್ನ ಕರಗಿಸುತ್ತಿದೆ. ಷೇರುಪೇಟೆ ಬೆಳೆದರೂ ಸಾಮಾನ್ಯ ಜನರ ಉಳಿತಾಯದ ಮೇಲೆ ಹೇಳಿಕೊಳ್ಳುವಂತಹ ಬಂಡವಾಳ ಲಾಭ ಸಿಗುತ್ತಿಲ್ಲ.

ಇನ್ನು ರಿಯಲ್ ಎಸ್ಟೇಟ್ ಕ್ಷೇತ್ರವಂತೂ ಊಹೆಗೂ ನಿಲುಕದಷ್ಟು ದುಬಾರಿಯಾಗಿದೆ. ಒಂದು ಸಾಮಾನ್ಯ ಅಪಾರ್ಟ್‌ಮೆಂಟ್ ಖರೀದಿಸಬೇಕೆಂದರೂ ಅಂದಾಜು $300k ಅಂದರೆ ಸುಮಾರು 2.5 ಕೋಟಿ ರೂಪಾಯಿ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಷ್ಟಪಟ್ಟು ಓದಿ, ಕೌಶಲ್ಯ ಬೆಳೆಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂಬ ವ್ಯವಸ್ಥೆಯ ಭರವಸೆ ಇಂದು ಹುಸಿಯಾಗಿದೆ. "ಪದವಿಗಳು ಬಹುತೇಕ ಮೌಲ್ಯ ಕಳೆದುಕೊಂಡಿವೆ" ಎಂದಿರುವ ಅವರು, ಆರ್ಥಿಕತೆಯ 'ಕೆ-ಆಕಾರದ ಚೇತರಿಕೆ' ಕೇವಲ ಶೇ. 1ರಷ್ಟು ಶ್ರೀಮಂತರಿಗೆ ಮಾತ್ರ ಲಾಭ ಮಾಡಿಕೊಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದೀರ್ಘಾವಧಿಯಲ್ಲಿ ತಂತ್ರಜ್ಞಾನವೊಂದೇ ಈ ಎಲ್ಲಾ ಆರ್ಥಿಕ ಮತ್ತು ಉದ್ಯೋಗ ಬಿಕ್ಕಟ್ಟುಗಳನ್ನ ಸರಿಪಡಿಸುವ ಭರವಸೆಯಾಗಿದೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+