Bengaluru Foggy: ನಗರ ನಿವಾಸಿಗಳಿಗೆ ಕಹಿ ಸುದ್ದಿ: ವಾತಾವರಣದಲ್ಲಿ ಭಾರೀ ಬದಲಾವಣೆ
ಬೆಂಗಳೂರು, ಮೇ 22: ರಾಜ್ಯ ರಾಜಧಾನಿ ಬೆಂಗಳೂರು ಕಳೆದ ಎರಡು ವಾರಗಳಿಂದ ಕೋಲ್ ಆಗಿದೆ. ವಾತಾವರಣ ಹಿತಕರ ಎನಿಸಿದೆ ಅನ್ನುವಷ್ಟರಲ್ಲಿ ಹವಾಮಾನ ಇಲಾಖೆ ನಿವಾಸಿಗಳಿಗೆ ಮತ್ತೆ ಕಹಿ ಸುದ್ದಿ ನೀಡಿದೆ. ಏಪ್ರೀಲ್ ನಿಂದ ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಜನರಿಗೆ ನಾಳೆ, ನಾಡಿದ್ದು ಎರಡು ದಿನ ಮತ್ತೆ ತೀವ್ರ ಬಿಸಿಲಿನ ಅನುಭವ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಿಲಿಕಾನ್ ಸಿಟಿಗೆ ಇಂದು ಬುಧವಾರ ಕೆಲವೆಡೆ ಮಳೆಯ ಮುನ್ಸೂಚನೆ ಇದೆ. ಆದರೆ ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಇಂದು ಬೆಳಗ್ಗೆಯಿಂದಲೇ ಉರಿ ಬಿಸಿಲಿನ ದರ್ಶನವಾಗುತ್ತಿದೆ. ನಸುಕಿನ ಜಾವದಿಂದ ಮಂಜಿನ (Bengaluru Foggy Weather) ವಾತಾವರಣ ನಿರ್ಮಾಣವಾಗಿದೆ. ಬಿಸಿಲಿನ ತಾಪಮಾನದಲ್ಲಿ ಏರಿಕೆ ಆಗುತ್ತಿದೆ.

ಸಾಮಾನ್ಯವಾಗಿ ಬೆಳ್ಳಂಬೆಳಗ್ಗೆ ಮಂಜು ಹೆಚ್ಚಾಗಿ ಕಂಡು ಬಂದರೆ, ನಂತರದ ಕೆಲ ಗಂಟೆಗಳಲ್ಲಿ ಬಿಸಿಲಿನ ಆರ್ಭಟ ಜೋರಿರುತ್ತದೆ. ಇಂದು ಸಹ ಅದೇ ರೀತಿಯ ವಾತಾವರಣ ಕಂಡು ಬಂದಿದೆ. ಇದರ ಮುಂದುವರಿದ ಭಾಗವೆಂಬಂತೆ ಮೇ 23 ಮತ್ತು 24ರಂದು ಎರಡು ದಿನ ಬೆಂಗಳೂರಿನಲ್ಲಿ ಮತ್ತೆ ಬಿಸಲಿನ ಶಾಖದ ಅಲೆ ಕಂಡು ಬರಲಿದೆ.
ಏಕಾಎಕಿ ಹೀಗೆ ವಾತಾವರಣ ಬದಲಾಗಿದ್ದರಿಂದ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ಇದೇ ರೀತಿಯ ವಾತಾವರಣ ಮುಂದುವರೆದರೆ ಮತ್ತೆ ಏಪ್ರಿಲ್ ಬಿಸಿಲಿನಂತೆ ಮೇ ತಿಂಗಳ ಬಿಸಿಲು ತಮ್ಮನ್ನು ಹೈರಾಣಾಗಿಸಬಹುದು ಎಂಬ ಆತಂಕ ಕೆಲವರಲ್ಲಿ ಮನೆ ಮಾಡಿದೆ.

ಗರಿಷ್ಠ 30-32 ಡಿಗ್ರಿ ಸೆಲ್ಸಿಯಸ್ ತಾಪಮಾನ
ಇಂದಿನಿಂದ ಮೂರು ದಿನ (ಮೇ 24ರವರೆಗೆ) ಗರಿಷ್ಠ ತಾಪಮಾನದಲ್ಲಿ ಏರಿಳಿತ ಕಂಡು ಬರಲಿದೆ. ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 30-32 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ ತಿಂಗಳಲ್ಲಿ ಉತ್ತಮ ಮಳೆ ಆಗಿತ್ತು. ಇದೀಗ ಇದ್ದಕ್ಕಿದ್ದಂತೆ ಬಿಸಲಿನ ಆರ್ಭಟ ಕಂಡು ಬರಲಿದೆ. ಬುಧವಾರ ಬೆಂಗಳೂರಿನ ಒಂದೆರಡು ಕಡೆಗಳಲ್ಲಿ ಸಂಜೆ ಇಲ್ಲವೇ ರಾತ್ರಿ ಹಗುರ ಮಳೆ ಆಗಬಹುದು. ಮೇ 24ರ ನಂತರ ಬೆಂಗಳೂರು ವಾತಾವರಣ ಸಹಜ ಸ್ಥಿತಿಗೆ ಮರಳಿದ್ದು, ಮತ್ತೆ ಮಳೆ ಆರ್ಭಟ ಶುರುವಾಗಲಿದೆ ಎಂದು ಸದ್ಯದ ಹವಾಮಾನ ವರದಿ ಮಾಹಿತಿ ನೀಡಿದೆ.
FOGGY WEDNESDAY MORNING IN BENGALURU
— Namma Karnataka Weather (@namma_vjy) May 22, 2024
Good Morning Friends. A foggy start to the morning across Bengaluru.
We started the month after the roasting-burning April. May rains have brought the Max and Min temperature down to below normal levels. Not just in Bengaluru , but across… pic.twitter.com/qiEiqgiNNs
ಮರೆಯಾದ ತಂಪು ವಾತಾವರಣ
ಕಳೆದ ಎರಡು ವಾರಗಳಿಂದ ಬೆಂಗಳೂರಿನಲ್ಲಿ ಮಳೆ ಆರ್ಭಟದಿಂದಾಗಿ ಮೋಡ ಕವಿದ, ತಂಪು ವಾತಾವರಣ ನಿರ್ಮಾಣವಾಗಿತ್ತು. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಸ್ಟ್ರಫ್ ಉಂಟಾಗಿತ್ತು. ಅಲ್ಲದೇ ರಾಜ್ಯದ ಒಳನಾಡಿನ ಭಾಗದ ಭೂ ಮೇಲ್ಮೈ ಮೇಲೂ ಸ್ಟ್ರಫ್ ಉಂಟಾಗಿದ್ದರಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಿತ್ತು.
ಬುಧವಾರ ಬೆಳಗ್ಗೆ ವಾತಾವರಣದ ಬದಲಾವಣೆ, ಎಲ್ಲೆಡೆ ಮಂಜು ಕವಿತ ವಾತಾವರಣದ ಫೋಟೋಗಳು ವೈರಲ್ ಆಗುತ್ತಿವೆ. ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪೋಸ್ಟ್ ಶೇರ್ ಮಾಡಿದ್ದು, ಮಳೆ ನಡುವೆ ಬಿಸಲಿನ ತಾಪಮಾನ ಏರಿಕೆ ಆಗಿದೆ. ಇದು ನಿಜವೆಂಬಂತೆ ಬೆಳಗ್ಗೆ ಇಬ್ಬನಿ, ಫಾಗ್ ಕ್ರಿಯೇಟ್ ಆಗಿದೆ. ಮಳೆ ಮರೆಯಾಗಿ ಶಾಖದ ಅಲೆ ಎದುರಾಗಬಹುದು. ಮೇ 30ರ ನಂತರ ಮತ್ತೆ ಮಳೆ ಆವರಿಸಬಹುದು ಎಂದೆಲ್ಲ ಬರೆದುಕೊಂಡಿದ್ದಾರೆ.
ಇದೀಗ ಮಧ್ಯಾಹ್ನ ಬೆಂಗಳೂರು ನಗರದ ಕೆಲವೆಡೆ ನಿರೀಕ್ಷೆಯಂತೆ ಮಳೆ ಆಗುತ್ತಿದೆ. ಹುಗರದಿಂದ ಸಾಧಾರಣ ಮಳೆ ಸುರಿಯುತ್ತಿದೆ. ನಾಳೆಯಿಂದ ಮತ್ತೆ ಒಣಹವೆಯ ನಿರೀಕ್ಷೆ ಇದೆ ಎಂದು ಮುನ್ಸೂಚನಾ ವರದಿ ತಿಳಿಸಿದೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ











Click it and Unblock the Notifications