Bengaluru Power Cut: ನವೆಂಬರ್ 10 ರಿಂದ 12ರ ತನಕ ವಿದ್ಯುತ್ ಕಟ್, ಸಮಯ-ಪ್ರದೇಶಗಳ ವಿವರ

ಬೆಂಗಳೂರು, ನವೆಂಬರ್ 09: ಸಿಲಿಕಾನ್ ಸಿಟಿ ಬೆಂಗೂರಿನಲ್ಲಿ ನಾಳೆ ಭಾನುವಾರ ನವೆಂಬರ್ 10ರಿಂದ ಮೂರು ದಿನಗಳ ಕಾಲ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು' ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ' (BESCOM) ಮಾಹಿತಿ ನೀಡಿದೆ. ನಿಮ್ಮ ಬಡಾವಣೆಗಳಲ್ಲಿ ಯಾವಾಗ ವಿದ್ಯುತ್ ಕಡಿತಗೊಳ್ಳಲಿದೆ, ಪ್ರದೇಶಗಳು ಹಾಗೂ ಸಮಯದ ಮಾಹಿತಿ ಇಲ್ಲಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ಮತ್ತು ವಿತರಣೆ ನಿಗಮ ಕಂಪನಿ (KPTCL) ವ್ಯಾಪ್ತಿಯ ಬೆಸ್ಕಾಂ ವಿಭಾಗದಲ್ಲಿ ಬರುವ ಪೀಣ್ಯ ಉಪವಿಭಾಗದಲ್ಲಿ ಭಾನುವಾರ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ ನಗರದ ಕೆಲವು ಬಡಾವಣೆಗಳಲ್ಲಿ ಬೆಳಗ್ಗೆಯಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Bengaluru Few Areas Face Power Cut Issues on November 10 to 12 Affected Areas details

ನವೆಂಬರ್ 10ರಿಂದ ನವೆಂಬರ್ 12ರವರೆಗೆ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 03:30 ಗಂಟೆವರೆಗೆ ಕೆಲವು ಪ್ರದೇಶಗಳಲ್ಲಿ ಸಂಜೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.

ವಿದ್ಯುತ್ ಕಡಿದ ಪ್ರದೇಶಗಳ ವಿವರ

ನಾಳೆ ನವೆಂಬರ್ 10ರಂದು ಪೀಣ್ಯ ಇಸ್ರೋ ಕಚೇರಿಯಲ್ಲಿ (ISRO) ವಿದ್ಯುತ್ ಕಡಿತಗೊಳ್ಳಲಿದೆ. ಇದರೊಂದಿಗೆ ಜಾಲಹಳ್ಳಿ ಕ್ರಾಸ್, ಚೊಕ್ಕಸಂದ್ರ, ಮಾರುತಿ ಬಡಾವಣೆ, ಎಸ್‌ಎಂ ರಸ್ತೆ, ಕೆಂಪಯ್ಯ ಬಡಾವಣೆ, ಜಿ.ಜಿ ಪಾಳ್ಯ, ನಾರಾಯಣಪುರ, ಎನ್‌.ಟಿ.ಟಿ.ಎಫ್ ವೃತ್ತ, ಗಣಪತಿನಗರ ಮತ್ತು ಪೊಲೀಸ್ ಠಾಣೆ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

Bengaluru Few Areas Face Power Cut Issues on November 10 to 12 Affected Areas details

ಆಕಾಶ್ ಚಿತ್ರಮಂದಿರ ರಸ್ತೆ, ವಿ.ಇಗ್ನಾನ ಪಬ್ಲಿಕ್ ಸರ್ಕಲ್ ರಸ್ತೆ, ಚಾಮುಂಡಿಪುರ, ರಾಜೇಶ್ವರಿನಗರ, ಭೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, ಮುನೇಶ್ವರ ಬಡಾವಣೆ ಸೇರಿದಂತೆ ವಿವಿಧೆಡೆ ಭಾನುವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ನವೆಂಬರ್ 11, 12 ರಂದು ವಿವಿಧೆಡೆ ಕರೆಂಟ್ ಕಟ್

ಇನ್ನೂ ಬೆಂಗಳೂರು ಹೊರತುಪಡಿಸಿದರೆ, ನವೆಂಬರ್ 11 ಹಾಗೂ ನವೆಂಬರ್ 12ರಂದು ಚಿಂತಾಮಣಿ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯಲ್ಲಿ, ವೈ ಹುಣಸೆಹಳ್ಳಿ, ಪಲಿಚೆರ್ಲು, ದಿಬ್ಬೂರಹಳ್ಳಿ, ಶಿಡ್ಲಘಟ್ಟ ವಿದ್ಯುತ್ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5ಗಂಟೆವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.

ಅದೇ ರೀತಿ ವಿಜಯಪುರ ಪಟ್ಟಣ, ಯಲುವಹಳ್ಳಿ, ಗುರಪ್ಪನಮಠ, ಮಿತ್ತನಹಳ್ಳಿ, ಕೋಲಾರ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+