Beer Shortage: ನೀರಿನ ಕೊರತೆ ಬಳಿಕ ಬೆಂಗಳೂರಿನಲ್ಲಿ ಬಿಯರ್ ಬಿಕ್ಕಟ್ಟು!?

ಬೆಂಗಳೂರು, ಮೇ. 10 : ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಇನ್ನು ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಒಂದು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ಮಳೆ ಬರುತ್ತಿದ್ದು, ತಾಪಮಾನ ಒಂದು ಹಂತಕ್ಕೆ ಬಂದಿದೆ. ಆದರೂ ಬಿಸಿಲು ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಇದರ ಜೊತೆ ಜೊತೆಗೆ ನೀರಿನ ಬಿಕ್ಕಟ್ಟಿಗೆ ಸಾಥ್ ನೀಡುತ್ತಿದೆ ಬಿಯರ್ ಬಿಕ್ಕಟ್ಟು!.

ಹೌದು... ಇತರ ನಗರಗಳ ಬ್ರೂವರೀಸ್‌ಗೆ ಹೋಲಿಸಿದರೆ ಬೆಂಗಳೂರಿನಲ್ಲಿರುವ ಬ್ರೂವರೀಸ್ ವಿಶಿಷ್ಟವಾಗಿವೆ. ಏಕೆಂದರೆ, ರಾಜಧಾನಿಯಲ್ಲಿನ ಕೋಟ್ಯಾಂತರ ಜನರ ಪ್ರಮುಖ ಹ್ಯಾಂಗ್‌ಔಟ್ ತಾಣಗಳಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಈಗ ಬೆಂಗಳೂರಿನ ಈ ಪಬ್, ರೆಸ್ಟೋರೆಂಟ್, ಬಾರ್‌ಗಳು ಕೂಡ ನೀರಿನ ಸಮಸ್ಯೆಯಂತೆಯೇ ಬೆಂಗಳೂರು ಕೂಡ ಬಿಯರ್ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ವರದಿಯಾಗಿದೆ.

Bengaluru facing a beer crisis after water crisis

ಬೆಂಗಳೂರಿನಲ್ಲಿ ಬಿಯರ್ ಬಿಕ್ಕಟ್ಟು ಏಕೆ?

ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ನಗರದಲ್ಲಿ ಹೆಚ್ಚಿನ ತಾಪಮಾನದಿಂದ ಅನೇಕ ಸ್ಥಳಗಳು ಬಿಯರ್ ಪ್ರಿಯರಿಂದ ತುಂಬಿ ತುಳುಕುತ್ತಿವೆ. ಅನೇಕ ಗ್ರಾಹಕರು ತಮ್ಮ ಎಂದಿನ ಹಾರ್ಡ್ ಡ್ರಿಂಕ್ಸ್‌ನಿಂದ ತಣ್ಣಗೀನ ಬಿಯರ್ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದು, ಬಿಯರ್‌ಗೆ ಬೇಡಿಕೆ ಹೆಚ್ಚಾಗಿದೆ. ಇದು ಬೃಹತ್ ಬೇಡಿಕೆಯು ಪೂರೈಕೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಬೇಡಿಕೆಗೆ ಅನುಗುಣವಾಗಿ ಬಿಯರ್ ಪೂರೈಸಲು ಸಾಧ್ಯವಾಗುತ್ತಿಲ್ಲ.

ಒಂದೇ ಮಧ್ಯ ಅಂಗಡಿಯಲ್ಲಿ ಈ ವರ್ಷದ ಮೇ ತಿಂಗಳವರೆಗೆ ಸುಮಾರು 30,000 ಲೀಟರ್ ಬಿಯರ್ ಮಾರಾಟವಾಗಿದ್ದರೆ, ಕಳೆದ ವರ್ಷ, ಇಡೀ ಬೇಸಿಗೆಯಲ್ಲಿ ಕೇವಲ 9,000 ಲೀಟರ್ ಬಿಯರ್ ಮಾತ್ರ ಕಂಡುಬಂದಿದೆ. ಭಾರೀ ಮಾರಾಟದಿಂದಾಗಿ ಹೆಚ್ಚು ಬ್ಯುಸಿನೆಸ್ ಆಗುವ ವಾರಾಂತ್ಯದಲ್ಲಿಯೂ ಪಬ್, ರೆಸ್ಟೋರೆಂಟ್ ಹೊರಗೆ ಸ್ಟಾಕ್ ಇಲ್ಲ ಎಂಬ ಬೋರ್ಡ್‌ಗಳು ಕಾಣಿಸುತ್ತಿವೆ.

Bengaluru facing a beer crisis after water crisis

ಇದರ ಜೊತೆಗೆ ಬೆಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಫ್ರೂಟ್ ಟೆಸ್ಟ್ ಬಿಯರ್‌ಗಳ ಟ್ರೆಂಡ್ ನಿಧಾನವಾಗಿ ಇಳಿಕೆಯಾಗುತ್ತಿದೆ. "ಬಿಯರ್‌ನ ಹೆಚ್ಚಿನ ಉತ್ಪಾದನೆಯಿಂದಾಗಿ, ನಾವು ಬಿಯರ್ ತಯಾರಿಸಲು ಪ್ರೀಮಿಯಂ ಹಣ್ಣುಗಳನ್ನು ಬಳಸಲಾಗುವುದಿಲ್ಲ. ಬಿಯರ್ ತಯಾರಿಸಲು ಕಡಿಮೆ ಗುಣಮಟ್ಟದ ಹಣ್ಣುಗಳನ್ನು ಬಳಸಿದರೆ ಮಾರಾಟ ಕೂಡ ಉತ್ತಮವಾಗುವುದಿಲ್ಲ. ಗ್ರಾಹಕರು ಕೂಡ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಅವರು ಹಣ್ಣಿನ ಬಿಯರ್‌ಗಳ ಬದಲಿಗೆ ಸಾಮಾನ್ಯ ಬಿಯರ್‌ಗಳಿಗೆ ಮೊರೆ ಹೋಗುತ್ತಿದ್ದಾರೆ" ಎಂದು ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ.

ಇತ್ತ, ಸಾಮಾನ್ಯವಾಗಿ ಪಬ್‌ಗಳು ನೀಡುತ್ತಿದ್ದ ಹ್ಯಾಪಿ ಅವರ್ಸ್ ಅಥವಾ ಬೈ1 ಗೆಟ್ 1 ಆಫರ್‌ಗನ್ನು ಕೂಡ ನೀಡುತ್ತಿಲ್ಲ. ಸದ್ಯ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದು, ಪಬ್, ರೆಸ್ಟೋರೆಂಟ್, ರೆಸಾರ್ಟ್‌ಗಳು ಗ್ರಾಹಕರನ್ನು ಸೆಳೆಯಲು ಅಲ್ಲಿ ಗ್ರಾಹಕರಿಗೆ ಪಂದ್ಯಗಳನ್ನು ಪ್ರದರ್ಶಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+