ಸತತ 4 ತಿಂಗಳು ಐಸಿಯುನಲ್ಲಿದ್ದ ಬೆಂಗಳೂರು ಉದ್ಯಮಿಗೆ ಸಿಕ್ಕ ಅತಿ ದೊಡ್ಡ ಜೀವನ ಪಾಠವಿದು: ವಿಶ್ರಾಂತಿಯೇ ನಿಜವಾದ ಮದ್ದು

ಬೆಂಗಳೂರಿನಂತಹ ಐಟಿ ಮತ್ತು ಸ್ಟಾರ್ಟ್‌ಅಪ್ ನಗರಿಯಲ್ಲಿ ಉದ್ಯಮಿಗಳಿಗೆ ಭಾನುವಾರ ಕೂಡ ರಜಾ ಇರುದಿಲ್ಲ. ಸದಾ ಕೆಲಸ, ಮೀಟಿಂಗ್, ಬ್ಯುಸಿನೆಸ್ ಎಂದು ಓಡಾಡುವವರಿಗೆ ತಮ್ಮ ಆರೋಗ್ಯದ ಕಡೆ ಗಮನಹರಿಸಲು ಸಮಯವೇ ಇರುವುದಿಲ್ಲ. ಇಲ್ಲೊಬ್ಬ ಬೆಂಗಳೂರು ಉದ್ಯಮಿ ತಮ್ಮ ಕೆಲಸವೇ ಸರ್ವಸ್ವ ಎಂದುಕೊಂಡಿದ್ದರು. ಆದರೆ, ಸತತ ನಾಲ್ಕು ತಿಂಗಳು ಐಸಿಯುನಲ್ಲಿ ಕಳೆದ ನಂತರ ಅವರ ಜೀವನದ ದೃಷ್ಟಿಕೋನವೇ ಬದಲಾಗಿದೆ.

ಮಿಲ್‌ಡಿ ಸಹ-ಸಂಸ್ಥಾಪಕ ಮತ್ತು ಬ್ರಿಯಾಸ್ ಸಂಸ್ಥಾಪಕ ಶಿವರಾಮ್ ಬ್ರಿಯಾಸ್ ತಾವು ಕಲಿತ ಬದುಕಿನ ಮಹತ್ವದ ಪಾಠವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ.

Bengaluru Entrepreneur Sivaram Briyas Shares Life Changing Lessons After Spending 4 Months in ICU

ಹಲವು ವರ್ಷಗಳ ಕಾಲ ಶಿವರಾಮ್ ಬ್ರಿಯಾಸ್ ಅವರಿಗೆ ಭಾನುವಾರ ಎಂದರೆ ಕೇವಲ ನಿಧಾನಗತಿಯ ಸೋಮವಾರದಂತಿತ್ತು. ರಜಾ ದಿನವೆಂದು ಮನೆಯಲ್ಲಿರದೆ ಫೋನ್ ಕರೆಗಳನ್ನ ಸ್ವೀಕರಿಸುವುದು, ಫ್ಯಾಕ್ಟರಿಗೆ ಭೇಟಿ ನೀಡುವುದು ಅವರ ದಿನನಿತ್ಯದ ಅಭ್ಯಾಸವಾಗಿತ್ತು.

"ಬರಿ ಐದೇ ನಿಮಿಷದಲ್ಲಿ ಬರುತ್ತೇನೆ" ಎಂದು ಮನೆಯವರಿಗೆ ಹೇಳಿ ಹೋಗುತ್ತಿದ್ದ ಅವರು, ಗಂಟೆಗಟ್ಟಲೆ ಫ್ಯಾಕ್ಟರಿಯಲ್ಲೇ ಕಾಲ ಕಳೆಯುತ್ತಿದ್ದರು. ಒಬ್ಬ ಉದ್ಯಮಿಯಾದವನು ರಜೆ ತೆಗೆದುಕೊಳ್ಳಬಾರದು, ಸದಾ ಕೆಲಸಕ್ಕೆ ಇರಬೇಕು ಎಂಬುದು ಅವರ ನಂಬಿಕೆಯಾಗಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಸದಾ ಕಾರ್ಯನಿರತ ಬದುಕಿನ ಬಗ್ಗೆ ಅತಿಯಾದ ಹೆಮ್ಮೆ ಪಡುತ್ತಿದ್ದರು.

4 ತಿಂಗಳ ಐಸಿಯುನಲ್ಲಿ ಕಲಿತ ಬದುಕಿನ ಪಾಠ

ಆದರೆ, ಅವರ ಈ ಮನಸ್ಥಿತಿ ದಿಢೀರನೆ ಬದಲಾಗಲು ಕಾರಣವಾಗಿದ್ದು ಅವರ ಅನಾರೋಗ್ಯ. ಸತತ ನಾಲ್ಕು ತಿಂಗಳು ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡಿದಾಗ, ಅವರಿಗೆ ರಜೆಯ ನಿಜವಾದ ಅರ್ಥವೇನೆಂದು ಅರಿವಾಯಿತು. "ನಾನು ಐಸಿಯುನಲ್ಲಿದ್ದಾಗ ನನ್ನೆಲ್ಲಾ ರಜೆಗಳನ್ನು ಒಟ್ಟಿಗೆ ಪಡೆದುಕೊಂಡೆ" ಎಂದು ಅವರು ಬರೆದುಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಗ ವೈದ್ಯರು ಹೇಳಿದ ಒಂದು ಮಾತು ಅವರ ಬದುಕನ್ನೇ ಬದಲಿಸಿತು. "ನಾವು ಕೆಲಸ ಮಾಡುವಾಗ ಅಥವಾ ಶ್ರಮಪಡುವಾಗ ದೇಹ ಬಲಶಾಲಿಯಾಗುವುದಿಲ್ಲ, ಬದಲಾಗಿ ಕೆಲಸದ ನಂತರ ತೆಗೆದುಕೊಳ್ಳುವ ವಿಶ್ರಾಂತಿಯ ಸಮಯದಲ್ಲಿ ದೇಹಕ್ಕೆ ಶಕ್ತಿ ಬರುತ್ತದೆ. ಶಸ್ತ್ರಚಿಕಿತ್ಸೆ ಎನ್ನುವುದು ಒಂದು ರೀತಿಯ ದೇಹಕ್ಕಾಗುವ ಹಾನಿ. ಆದರೆ ನಿಜವಾದ ಗುಣಮುಖವಾಗುವುದು ನಾವು ನಿದ್ರಿಸುವಾಗ, ಊಟ ಮಾಡುವಾಗ ಮತ್ತು ವಿಶ್ರಾಂತಿ ಪಡೆಯುವಾಗ" ಎಂದು ವೈದ್ಯರು ವಿವರಿಸಿದ್ದರು.

ಉದ್ಯಮದಲ್ಲಿ ಆರೋಗ್ಯ ಮತ್ತು ವಿಶ್ರಾಂತಿಯ ಮಹತ್ವ

ವೈದ್ಯರ ಈ ಮಾತುಗಳನ್ನ ಶಿವರಾಮ್ ಅವರು ತಮ್ಮ ಉದ್ಯಮಕ್ಕೂ ಅನ್ವಯಿಸಿಕೊಂಡರು. ದಶಕಗಳ ಕಾಲ ಆಹಾರ ಉದ್ಯಮದಲ್ಲಿದ್ದ ಅವರು, ಆಸ್ಪತ್ರೆಯಿಂದ ಹೊರಬಂದ ನಂತರ ವಿಶ್ರಾಂತಿಯ ಪ್ರಾಮುಖ್ಯತೆಯನ್ನು ಅರಿತರು. ಕೇವಲ ಮೀಟಿಂಗ್‌ಗಳಲ್ಲಿ ಕುಳಿತಾಗ ಅಥವಾ ಲ್ಯಾಪ್‌ಟಾಪ್ ಸ್ಕ್ರೀನ್ ನೋಡುತ್ತಿರುವಾಗ ಮಾತ್ರ ಹೊಸ ಐಡಿಯಾಗಳು ಬರುವುದಿಲ್ಲ. ಮೀಟಿಂಗ್ ಮುಗಿದ ನಂತರ ಮಾಡುವ ಒಂದು ಸಣ್ಣ ವಾಕ್ ಅಥವಾ ಭಾನುವಾರ ಕುಟುಂಬದೊಂದಿಗೆ ಊಟ ಮಾಡುವಾಗಲೂ ಗ್ರಾಹಕರ ನಡವಳಿಕೆಗಳ ಬಗ್ಗೆ ಅದ್ಭುತ ಐಡಿಯಾಗಳು ಹೊಳೆಯಬಹುದು ಎಂಬುದನ್ನು ಅವರು ಕಂಡುಕೊಂಡರು. "ಯಾವುದೇ ದೊಡ್ಡ ಸಾಧನೆಗೆ ಅಥವಾ ಜಿಗಿತಕ್ಕೆ ಸ್ವಲ್ಪ ಜಾಗ ಮತ್ತು ಸಮಯದ ಅಗತ್ಯವಿರುತ್ತದೆ" ಎಂದು ಅವರು ಹೇಳುತ್ತಾರೆ.

ಹಾಗೆಂದ ಮಾತ್ರಕ್ಕೆ ಶಿವರಾಮ್ ಬ್ರಿಯಾಸ್ ಅವರು ಈಗ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ. ಬದಲಾಗಿ, ಹಿಂದಿಗಿಂತಲೂ ಹೆಚ್ಚು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಅವರ ಕೆಲಸದಲ್ಲಿ ಸ್ಪಷ್ಟವಾದ ಉದ್ದೇಶವಿದೆ ಹಾಗೂ ಅನಗತ್ಯ ಸಮಯ ಪೋಲು ಮಾಡುವುದನ್ನು ಕಡಿಮೆ ಮಾಡಿದ್ದಾರೆ.

ಭಾನುವಾರದ ರಜೆಯನ್ನು ಕೇವಲ ಮೋಜು ಮಾಡಲು ಅಲ್ಲ, ಬದಲಾಗಿ ಮುಂದಿನ ಕೆಲಸಗಳನ್ನ ಪೂರ್ಣಗೊಳಿಸಲು ಬೇಕಾದ ಶಕ್ತಿ ತುಂಬಿಕೊಳ್ಳಲು ಬಳಸುತ್ತಿದ್ದಾರೆ. "ಕೆಲವೊಮ್ಮೆ ತುರ್ತು ಕೆಲಸಗಳು ಬರಬಹುದು, ಆದರೆ ಈಗ ಸದಾ ಕೆಲಸ ಮಾಡುವುದೇ ನನ್ನ ಜೀವನದ ಭಾಗವಾಗಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+