Get Updates
Get notified of breaking news, exclusive insights, and must-see stories!

'ಬೆಂಗಳೂರು ಮತದಾರರ ಕರಡು ಪಟ್ಟಿ' ಬಿಡುಗಡೆ: ಪರಿಶೀಲನೆ ಹೇಗೆ?, ಆಕ್ಷೇಪಣೆ ಸಲ್ಲಿಕೆ ದಿನಾಂಕ, ಮುಖ್ಯಾಂಶಗಳು

ಬೆಂಗಳೂರು, ಅಕ್ಟೋಬರ್ 27: ಲೋಕಸಭಾ ಚುನಾವಣೆ 2024 ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 97,90,499 ಮತದಾರರಿದ್ದಾರೆ ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ವಿಶೇಷ ಮತದಾರರ ಪರಿಷ್ಕರಣೆ ಮಾಡಲಾಗಿದ್ದು, ಒಟ್ಟು ಮತದಾರರ ಪೈಕಿ 50,61,883 ಪುರುಷ ಮತದಾರರು, 47,26,856 ಮಹಿಳೆ ಮತದಾರರು ಹಾಗೂ 1760 ಮಂದಿ ಇತರೆ ಮತದಾರರು ಇದ್ದಾರೆ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

bengaluru-draft-voters-list-of-2024

ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿ ಹಾಗೂ ವಾರ್ಡ್ ಕಛೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ವರ್ಷ 2024ರ ಜನವರಿ 5 ರಂದು 'ಅಂತಿಮ ಮತದಾರರ ಪಟ್ಟಿ' ಪ್ರಕಟಿಸಲಾಗುತ್ತದೆ.

ಮತದಾರರ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿಕೊಳ್ಳಿ

ಕರಡು ಮತದಾರರ ಪಟ್ಟಿಯನ್ನು CEO Karnataka website www.ceokarnataka.kar.nic.in website ಮತ್ತು ಬಿಬಿಎಂಪಿ www.bbmp.gov.in website ನಲ್ಲಿ ಪರಿಶೀಲಿಸುವ ಮೂಲಕ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸಾರ್ವಜನಿಕರು/ಮತದಾರರು ತಮ್ಮ ಮೊಬೈಲ್‌ನಲ್ಲಿ VHA (Voter Helpline App) ಆ್ಯಪ್ ಅಥವಾ Web Portal-Voters.eci.gov.in ಮೂಲಕ ಖುದ್ದಾಗಿ ಮತದಾರರ ಮಾಹಿತಿ ಪರಿಶೀಲಿಸಬಹುದು.

ಈ ಹಿಂದೆ 2023ರಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ 8,615 ಮತಗಟ್ಟೆಗಳಿದ್ದು, ಇವು ಇದೀಗ 8,982 ಮತಗಟ್ಟೆಗಳಿಗೆ ಹೆಚ್ಚಿಸಲಾಗಿದೆ. ಯುವ (18-19) ಆರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಲು 17 ವರ್ಷ ತುಂಬಿದವರು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.

bengaluru-draft-voters-list-of-2024

ಹೊಸದಾಗಿ ಹೆಸರು ಸೇರಿಸುವವರು ಹೀಗೆ ಮಾಡಿ

ಪ್ರಸ್ತುತ ಮತದಾರರ ಪಟ್ಟಿ ಕುರಿತು ಹೆಸರು ಸೇರಿಸಲು, ತೆಗೆದು ಹಾಕಲು, ತಪ್ಪುಗಳು ಆಗಿದ್ದು, ಸಾರ್ವಜನಿಕ ಆಕ್ಷೇಪಗಳ ಸಲ್ಲಿಕೆಗೆ ಇಂದಿನಿಂದ (ಅ.27) ಡಿಸೆಂಬರ್ 9ರವರೆಗೆ ಅವಕಾಶ ನೀಡಲಾಗಿದೆ. ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವವರು 02.01.2024ಕ್ಕೆ ಅನ್ವಯವಾಗುವಂತೆ 01.01.2006ರ ಹಿಂದೆ ಜನನವಾಗಿರುವ ಯುವಕ/ಯುವತಿಯರು ಅರ್ಜಿ ನಮೂನೆ-6ನ್ನು ಆನ್ಲೈನ್ ಮುಖಾಂತರ ಸ್ವಯಂ ಪ್ರೇರಿತವಾಗಿ Portal-Voters.eci.gov.in ಅಥವಾ Voter Helpline Mobile App ನಲ್ಲಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಯಸ್ಸಿನ ದೃಢಿಕರಣಕ್ಕಾಗಿ

• ಜನನ ಪ್ರಮಾಣ ಪತ್ರ (Birth Certificate)

• 10ನೇ ತರಗತಿಯ ಅಂಕಪಟ್ಟಿ (Marks Sheet of 10th)

• ಭಾರತೀಯ ರಹದಾರಿ ಪತ್ರ (Indian Passport)

• ಪಾನ್ ಕಾರ್ಡ್ (PAN Card)

• ಚಾಲನಾ ಪರವಾನಗಿ (Driving License)

• ಆಧಾರ್ ಕಾರ್ಡ್ (Aadhaar Card) ಕಡ್ಡಾಯಗೊಳಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಹರೀಶ್ ಕುಮಾರ್, ಡಾ. ದಾಕ್ಷಾಯಿಣಿ, ಡಾ. ಕೆ. ಜಗದೀಶ್ ನಾಯ್ಕ್, ಚುನವಾವಣಾ ವಿಭಾಗದ ವಿಶೇಷ ಆಯುಕ್ತರಾದ ಅಜಯ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+