Bengaluru double murder: ಬ್ರಾಡ್‌ಬ್ಯಾಂಡ್ ಮಾಲೀಕನನ್ನು ವಿಮಾನ ನಿಲ್ದಾಣದಿಂದ ಕರೆತಂದ ಪೊಲೀಸರು

ಬೆಂಗಳೂರು ಜೋಡಿ ಕೊಲೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದಲ್ಲಿ ಬ್ರಾಡ್‌ಬ್ಯಾಂಡ್ ಮಾಲೀಕನನ್ನು ವಿಮಾನ ನಿಲ್ದಾಣದಿಂದ ಪೊಲೀಸರು ತಡರಾತ್ರಿ ಕರೆದೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಂಗಳವಾರ ಮಧ್ಯಾಹ್ನ ಹೆಬ್ಬಾಳ-ಕೆಂಪಾಪುರದಲ್ಲಿ (ಅಮೃತ ಹಳ್ಳಿ) ವರದಿಯಾದ ಅವಳಿ ಕೊಲೆಗಳ ಬಗ್ಗೆ ತನಿಖೆಗಾಗಿ ಬೆಂಗಳೂರು ಪೊಲೀಸರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ರಾಡ್‌ಬ್ಯಾಂಡ್ ಕಂಪನಿಯ ಮಾಲೀಕರನ್ನು ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ಗ್ನೆಟ್ ಬ್ರಾಡ್‌ಬ್ಯಾಂಡ್‌ನ ಮಾಲೀಕ ಅರುಣ್ ಕುಮಾರ್ ಆಜಾದ್ ಅವರು ದೆಹಲಿಯಿಂದ ಮಧ್ಯರಾತ್ರಿಯ ವೇಳೆಗೆ ವಿಮಾನದಲ್ಲಿ ಬಂದು ಇಳಿದಿದ್ದಾರೆ. ತಕ್ಷಣ ಅವರನ್ನು ತನಿಖೆಗಾಗಿ ಕರೆದೊಯ್ಯಲಾಯಿತು ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.

Bengaluru double murder: Broadband owner brought by police from airport

ಫೈಬರ್‌ನೆಟ್ ಕಂಪನಿ ಐರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯ ಅವರನ್ನು ತೆಗೆದುಹಾಕಲು ಆಜಾದ್ ಅವರು ಕನ್ನಡ ರಾಪರ್ ಮತ್ತು ಇನ್‌ಸ್ಟಾಗ್ರಾಮ್ ಪ್ರಭಾವಿ 'ಜೋಕರ್' ಫೆಲಿಕ್ಸ್ ಸೇರಿದಂತೆ ಮೂವರನ್ನು ನೇಮಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮಂಗಳವಾರ ಮಧ್ಯಾಹ್ನ 3.35ರ ಸುಮಾರಿಗೆ ಹೆಬ್ಬಾಳ-ಕೆಂಪಾಪುರದ ಪಂಪಾ ಎಕ್ಸ್‌ಟೆನ್ಶನ್‌ನಲ್ಲಿರುವ ಕಂಪನಿಯ ಕಚೇರಿಯಲ್ಲಿ ಮೂವರು ಸದಸ್ಯರ ತಂಡ ಸುಬ್ರಹ್ಮಣ್ಯ ಮತ್ತು ಏರೋನಿಕ್ಸ್ ಸಿಇಒ ವಿನುಕುಮಾರ್ ಅವರ ಮಾರಣಾಂತಿಕ ಕೊಲೆಗೆ ಸಂಬಂಧಿಸಿದಂತೆ ಈ ಬೆಳವಣಿಗೆ ಕಂಡು ಬಂದಿದೆ.

ಏರೋನಿಕ್ಸ್ ಮತ್ತು ಗ್ನೆಟ್ ಬ್ರಾಡ್‌ಬ್ಯಾಂಡ್ ನಡುವಿನ ವ್ಯಾಪಾರ ಪೈಪೋಟಿಯೇ ಈ ಕೊಲೆಯ ಹಿಂದಿರುವ ಕಾರಣ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+