ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚಿದ ಡೆಂಗ್ಯೂ: ಕೆಲವೇ ದಿನಗಳಲ್ಲಿ 4,000 ಕ್ಕೂ ಅಧಿಕ ಪ್ರಕರಣ ವರದಿ- ಲಕ್ಷಣ, ವೈದ್ಯರ ಸಲಹೆ ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರು ಮಹಾನಗರದಲ್ಲಿ ಡೆಂಗ್ಯೂ ಪ್ರಕರಣಗಳು ವ್ಯಾಪಕವಾಗಿ ಏರಿಕೆಯಾಗಿವೆ. ಕಳೆದ ಕೆಲವು ದಿನಗಳಲ್ಲಿ 4,000 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಆತಂಕಕಾರಿ ಸಂಗತಿಯೆಂದರೆ, ಮಕ್ಕಳಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದೆ.
ಡೆಂಗ್ಯೂ ಪೀಡಿತ ಮಕ್ಕಳ ಸಂಖ್ಯೆಯ ಕುರಿತು ಆರೋಗ್ಯ ಇಲಾಖೆಯು ಇನ್ನೂ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಆದರೆ, ವೈದ್ಯರು ನೀಡಿರುವ ಮಾಹಿತಿ ಪ್ರಕಾರ ಮಕ್ಕಳಲ್ಲೇ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದೆ.

ಮಕ್ಕಳಲ್ಲಿ 103°F ಹಾಗೂ 104°F ನಡುವೆ ತಾಪಮಾನ ಕಾಣಿಸಿಕೊಳ್ಳುವುದು ಡೆಂಗ್ಯೂ ಸೋಂಕಿನ ಮೊದಲ ಗುಣ ಲಕ್ಷಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ತಾಪಮಾನವನ್ನು ಹೊಂದಿರುವ ಜ್ವರದಿಂದ ದಾಖಲಾಗುವ ಶಿಶುಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವೈದ್ಯರು 'ಟೈಮ್ಸ್ ಆಫ್ ಇಂಡಿಯಾ'ಗೆ ತಿಳಿಸಿದ್ದಾರೆ.
ಪ್ರಸ್ತುತ ನಮ್ಮ ವಾರ್ಡ್‌ಗಳಲ್ಲಿ 12 ಮಕ್ಕಳು ಡೆಂಗ್ಯೂ ಪೀಡಿತರಾಗಿದ್ದಾರೆ ಎಂದು ಆಟ್ರೆಯಾ ಆಸ್ಪತ್ರೆಯ ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕ ಡಾ.ನಾರಾಯಣಸ್ವಾಮಿ ಮಾಹಿತಿ ನೀಡಿದ್ದಾರೆ.
ತಣ್ಣನೆಯ ಕೈಗಳು ಮತ್ತು ಪಾದಗಳು ಗಂಭೀರ ಅನಾರೋಗ್ಯದ ಸಂಕೇತವಾಗಿದೆ. ಡೆಂಗ್ಯೂ ದೇಹದಲ್ಲಿ ದ್ರವದ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ಡಿಎಚ್‌ಇಇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಹಿರಿಯ ಶಿಶುವೈದ್ಯ ಮತ್ತು ಮಕ್ಕಳ ತಜ್ಞೆ ಡಾ. ಸುಪ್ರಜಾ ಚಂದ್ರಶೇಖರ್ ಹೇಳಿದ್ದಾರೆ.
ಡೆಂಗ್ಯೂ ನಿರ್ಣಾಯಕ ಹಂತವನ್ನು ತಲುಪಿದ ನಂತರ, ರಕ್ತನಾಳಗಳಲ್ಲಿನ ದ್ರವಗಳು ಸೋರಿಕೆಯಾಗಲು ಪ್ರಾರಂಭಿಸುತ್ತವೆ. ಇದರ ಪರಿಣಾಮವಾಗಿ ರಕ್ತದ ಪರಿಚಲನೆ ನಿಧಾನವಾಗುತ್ತದೆ. ಈ ಕಾರಣದಿಂದಾಗಿ ಪಾದಗಳು, ಮೂಗಿನ ತುದಿ ಹಾಗೂ ಅಂಗೈಗಳಿಗೆ ಅಸಮರ್ಪಕ ರಕ್ತ ಪೂರೈಕೆಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
'ನೀವು ಮಗುವಿನ ಕೈಯನ್ನು ನಿಮ್ಮ ಬೆರಳುಗಳಿಂದ ಹಿಸುಕಿ ಮೂರು ಸೆಕೆಂಡುಗಳ ನಂತರ ಅದನ್ನು ಸಡಿಲಗೊಳಿಸಿದರೆ ಸಾಮಾನ್ಯ ಬಣ್ಣವು ಹಿಂತಿರುಗುವುದನ್ನು ನೀವು ಕಾಣುವುದಿಲ್ಲ. ಇದು ರಕ್ತಪರಿಚಲನೆಯು ಕಳಪೆಯಾಗಿದೆ ಎಂಬುದಾಗಿ ತೋರಿಸುತ್ತದೆ' ಎಂದು ವೈದ್ಯರು ವಿವರಿಸಿದ್ದಾರೆ.
ಈ ಹಂತದಲ್ಲಿ ಮಗುವಿನಲ್ಲಿ ಹೊಟ್ಟೆ ನೋವು ಉಂಟಾಗಬಹುದು. ಇದಕ್ಕೆ ರಕ್ತ ಪರೀಕ್ಷೆಯ ಅಗತ್ಯವಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮೂರು ಅಥವಾ ಹೆಚ್ಚು ಬಾರಿ ವಾಂತಿಬಹುದು. ದೇಹದಲ್ಲಿ ದದ್ದುಗಳು ಕಾಣಿಸಿಕೊಳ್ಳಬಹುದು. ರಕ್ತಸ್ರಾವವಾಗಬಹುದು. ಇಂತಹ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ತಿಳಿಸಿದ್ದಾರೆ.
ಈ ರೋಗಲಕ್ಷಣಗಳು ಕಂಡುಬಂದ ಮಕ್ಕಳಿಗೆ ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿರುತ್ತದೆ. ಐದನೇ ದಿನದ ನಂತರವೂ ಜ್ವರ ಕಡಿಮೆಯಾಗದಿದ್ದರೆ, ಮಗುವನ್ನು ಆಸ್ಪತ್ರೆಯಲ್ಲಿಯೇ ಇಡಬೇಕಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಡೆಂಗ್ಯೂ ಕಾಣಿಸಿಕೊಳ್ಳುವ ಹೆಚ್ಚಿನ ಮಕ್ಕಳು ಹೆಚ್ಚಿನ ಯಕೃತ್ತಿನ ಸಮಸ್ಯೆಗಳನ್ನು ಹೊಂದಿರುತ್ತಾರೆ. ಸೋಂಕು ಪೀಡಿತ ಮಕ್ಕಳನ್ನು ಹೈಡ್ರೇಟ್ ( ಹೆಚ್ಚು ನೀರಿನ ಅಂಶಗಳುಳ್ಳ ಪಾನೀಯ ಅಥವಾ ಆಹಾರವನ್ನು ಕೊಡುವುದು ) ಆಗಿ ಇಡುವುದು ಮುಖ್ಯ ಎಂದು ತಜ್ಞರು ಹೇಳಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
ವಾಸ್ತು ಅನುಸರಿಸುವುದು ಏಕೆ ಮುಖ್ಯ? ತಿಳಿಯಿರಿ ಕಾರಣಗಳು -
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು












Click it and Unblock the Notifications