ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕೋಟ್ಯಂತರ ಮೌಲ್ಯದ ಮಾದಕ ವಸ್ತು ವಶ, ಭಾರಿ ಜಾಲ ಪತ್ತೆ

|
Google Oneindia Kannada News

ಬೆಂಗಳೂರು, ನವೆಂಬರ್ 29: ಒಂದು ಕೋಟಿ ಮೌಲ್ಯದ ಮಾದಕ ವಸ್ತುವನ್ನು ಹಾಲಿನ ಡಬ್ಬದಲ್ಲಿ ಇಟ್ಟು ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ.

ಚಿನ್ನಕ್ಕಿಂತಲೂ ದುಬಾರಿಯಾದ ಹೈಡ್ರೋಗಾಂಜಾವನ್ನು ವಿದೇಶದಿಂದ ಹಾಲಿನ ಡಬ್ಬದಲ್ಲಿಟ್ಟು ಕೊರಿಯರ್ ಮಾಡಿಸಿಕೊಂಡು ಪ್ರತಿಷ್ಟಿತ ಶಾಲಾ-ಕಾಲೇಜುಗಳ ಬಳಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಆನೆಕಲ್‌ನಲ್ಲಿ ಭರ್ಜರಿ ಭೇಟೆ: ಒಂದು ಸಾವಿರ ಕೆ.ಜಿ ಗಾಂಜಾ ವಶಆನೆಕಲ್‌ನಲ್ಲಿ ಭರ್ಜರಿ ಭೇಟೆ: ಒಂದು ಸಾವಿರ ಕೆ.ಜಿ ಗಾಂಜಾ ವಶ

ಬಂಧಿತ ಅತೀಂ ಸಲೀಂ (26) ನಗರದ ಸದ್ದುಗುಂಟೆ ಪಾಳ್ಯದ ಅಪಾರ್ಟ್‌ಮೆಂಟ್ ಒಂದರಲ್ಲಿ ಆರು ತಿಂಗಳಿನಿಂದಲೂ ವಾಸವಿದ್ದು, ಮಾದಕ ವಸ್ತುವಿನ ಮಾರಾಟ ಮಾಡುತ್ತಿದ್ದ. ಈತ ಬಿಸಿಎ ಪದವೀಧರ ಸಹ ಆಗಿದ್ದಾನೆ.

Bengaluru: Crore Worth Drugs Siezed By Bengaluru Police One Arrested

ತಂತ್ರಜ್ಞಾನದ ಬಗ್ಗೆ ಜ್ಞಾನ ಹೊಂದಿದ್ದ ಅತೀಂ ಸಲೀಂ ಡಾರ್ಕ್‌ ವೆಬ್ ಮೂಲಕ ಕೆನೆಡಾ ದೇಶದ ಮಾದಕ ದ್ರವ್ಯ ವ್ಯಾಪಾರಿಯನ್ನು ಸಂಪರ್ಕಸಿ ಆತನಿಂದ ಮಾದಕ ವಸ್ತುವನ್ನು ತರೆಸಿಕೊಂಡಿದ್ದಾನೆ. ಆತನೊಂದಿಗೆ ವಿಕ್ಕರ್ಮೀ ಎಂಬ ಆಪ್‌ ಮೂಲಕ ನಿರಂತರ ಸಂಪರ್ಕದಲ್ಲಿದ್ದು ಸೈಬರ್ ಪೊಲೀಸರ ಕಣ್ಣು ತಪ್ಪಿಸುತ್ತಿದ್ದ.

ಮಕ್ಕಳ ಆಹಾರದ ಡಬ್ಬಗಳಲ್ಲಿ ಮಾದಕ ದ್ರವ್ಯವನ್ನು ತುಂಬಿಸಿ ಅಮೆಜಾನ್ ಕವರ್‌ಗಳ ಮೂಲಕ ಭಾರತಕ್ಕೆ ಡಿಟಿಡಿಸಿ ಕೊರಿಯರ್ ಮೂಲಕ ಸಾಗಿಸಲಾಗುತ್ತಿತ್ತು. ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಾರದಿರಲೆಂದು ಹೀಗೆ ಮಾಡಲಾಗುತ್ತಿತ್ತು.

Bengaluru: Crore Worth Drugs Siezed By Bengaluru Police One Arrested

ನಂತರ ಅದನ್ನು ಪಡೆದುಕೊಂಡು ಸಣ್ಣ-ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡುತ್ತದ್ದ ಅತೀಂ ಸಲೀಂ ಅದನ್ನು ಮತ್ತೆ ಅಮೆಜಾನ್ ಕವರ್‌ಗಳಲ್ಲಿ ತನ್ನ ಗ್ರಾಹಕರಿಗೆ ಕೊರಿಯರ್ ಮಾಡುತ್ತಿದ್ದ. ಸ್ವಲ್ಪ ಪ್ರಮಾಣದ ಮಾದಕ ವಸ್ತುವನ್ನು ತಾನೇ ಉಳಿಸಿಕೊಂಡು ಅದನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದ.

ಪ್ರತಿಷ್ಟಿತ ಶಾಲಾ-ಕಾಲೇಜು, ಕೆಲವು ಐಶಾರಾಮಿ ಕ್ಲಬ್, ರೆಸ್ಟೊರೆಂಟ್‌ಗಳಲ್ಲಿ ಈ ಮಾದಕ ವಸ್ತುಗಳನ್ನು ಆತ ಮಾರಾಟ ಮಾಡುತ್ತಿದ್ದ. ತನ್ನದೇ ಅಪಾರ್ಟ್‌ಮೆಂಟ್‌ ನಲ್ಲಿ ಕೆಲವು ಮಕ್ಕಳಿಗೆ ಚಾಕಲೇಟ್‌ನಲ್ಲಿ ಹೈಡ್ರಾಗಾಂಜಾ (ಮರಿಜುವಾನಾ) ವನ್ನು ಬೆರೆಸಿ ಮಾರಾಟ ಮಾಡಿದ್ದ.

Bengaluru: Crore Worth Drugs Siezed By Bengaluru Police One Arrested

ಬಂಧಿತ ಆರೋಪಿಯಿಂದ 12 ಚಾಕೊಲೇಟ್ ಪ್ಯಾಕೆಟ್‌ಗಳು, ಇ-ಸಿಗರೇಟ್‌ನಲ್ಲಿ ಉಪಯೋಗಿಸಿ ಹ್ಯಾಶಿಸ್ ಆಯಿಲ್‌ಗಳನ್ನೊಳಗೊಂಡ ವಿಂಡ್ ಫ್ಲೇವರ್‌, 900 ಗ್ರಾಂ ತೂಕದ 100ಸಿಗರೇಟ್ ಟ್ಯೂಬ್‌ಗಳು ಹಾಗೂ ಗಾಂಜಾ ಎಲೆಗಳನ್ನು ಪುಡಿ ಮಾಡಲು ಬಳಸುವ ಮೂರು ಚಿಕ್ಕ ಗಾಂಜಾ ಕ್ರಷರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಬಳಿಯಿಂದ ಒಂದು ಸ್ಕೋಡಾ ಕಾರು, ಒಂದು ಕೆಟಿಎಂ ಡ್ಯೂಕ್ ಬೈಕ್, ಒಂದು ಲಕ್ಷ ರೂಪಾಯಿ ನಗದು, ಒಂದು ಕೋಟಿಗೂ ಹೆಚ್ಚು ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಸುದ್ದಗುಂಟೆ ಪಾಳ್ಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
One man arrested for selling drugs in Bengaluru. more than one crore rupees worth drugs sized by police. He uses high tech for selling drugs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X