ಒಳ ಉಡುಪು ಧರಿಸಲ್ಲ: ಹಸುಗಳ ಕೆಚ್ಚಲು ಕೊಯ್ದು ಆರೋಪಿ ಮನಸ್ಥಿತಿ ಎಂತಹದ್ದು ಗೊತ್ತಾ?

ಬೆಂಗಳೂರು, ಜನವರಿ 14: ಬೆಂಗಳೂರನ್ನೇ ಬೆಚ್ಚಿ ಬೀಳಿಸುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಘಟನೆಯಿಂದ ನಗರದಾದ್ಯಂತ ಹಸುಗಳನ್ನು ಸಾಕುವವರು ಆತಂಕಕ್ಕೊಳಗಾಗಿದ್ದಾರೆ. ವ್ಯಕ್ತಿಯೊಬ್ಬ ರಾತ್ರಿ ವೇಳೆ ಕುಡಿದ ಮತ್ತಿನಲ್ಲಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ನಡೆದಿದೆ.

ರಾಜ್ಯಾದ್ಯಂತ ಸದ್ದು ಮಾಡಿದ ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಈಗಾಗಲೇ ಕಾಟನ್​ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಸೈಯದ್ ನಸ್ರು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆದರೆ ಓರ್ವ ಆರೋಪಿಯಿಂದ ಇದು ಸಾಧ್ಯವಿಲ್ಲ ಎನ್ನುವ ಆರೋಪದ ಮೇಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು ಆತನ ಮನಸ್ಥಿತಿ ಹಾಗೂ ಜೀವನ ನಡೆಸುವ ರೀತಿ ಕೇಳಿ ಶಾಕ್‌ ಆಗಿದ್ದಾರೆ.

Bengaluru Cow Abuse Incident Details About Accused Lifestyle And Mental State

ಆರೋಪಿ ಸೈಯದ್ ನಸ್ರು ಬೆಂಗಳೂರಿನ ಹಳೆ ಪೆನ್ಷನ್ ಮೊಹಲ್ಲದಲ್ಲಿ ಸಣ್ಣದೊಂದು ಪ್ಲಾಸ್ಟಿಕ್ ಹಾಗೂ ಬಟ್ಟೆ ಬ್ಯಾಗ್ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಆಶ್ರಯ ಪಡೆದಿದ್ದ ಸೈಯದ್ ನಸ್ರು ಕುಡಿತದ ಚಟಕ್ಕೆ ದಾಸನಾಗಿದ್ದ. ಅಲ್ಲದೇ ನೀಲಿ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಿದ್ದನಂತೆ. ಈತ ಒಂದು ವರ್ಷದ ಹಿಂದೆ ಕೂಡ ಹಸುಗಳ ಜೊತೆಗೆ ವಿಚಿತ್ರವಾಗಿ ನಡೆದುಕೊಂಡಿದ್ದ ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ.

ವಾರಕ್ಕೊಮ್ಮೆ ಸ್ನಾನ ಮಾಡುವ ಸೈಯದ್ ನಸ್ರು, ಒಳ ಉಡುಪು ಧರಿಸದೇ ಕೇವಲ ಲುಂಗಿ ಧರಿಸಿ ಎಲ್ಲೆಂದರಲ್ಲಿ ಓಡಾಡುತ್ತಿದ್ದ. ಇನ್ನು ಈ ಬಾರಿಯೂ ಕುಡಿದ ಅಮಲಿನಲ್ಲಿ ಹಸುಗಳ ಕೆಚ್ಚಲಿಗೆ ಚಾಕು ಹಾಕಿರುವುದಾಗಿ ಆರೋಪಿ ಸೈಯದ್ ನಸ್ರು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಕಾಟನ್​ಪೇಟೆ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಸುವಿನ ಮಾಲೀಕರ ಆರೋಪವೇನು?

ಇನ್ನು ಆರೋಪಿ ಸೈಯದ್ ನಸ್ರು ಬಂಧನದ ಬಗ್ಗೆ ಹಸುವಿನ ಮಾಲೀಕ ಕರ್ಣ ಪ್ರತಿಕ್ರಿಯಿಸಿದ್ದು, ಬಂಧಿತ ಆರೋಪಿಯನ್ನು ಈಗ ಮಾನಸಿಕ ಅಸ್ವಸ್ಥ ಎನ್ನುತ್ತಿದ್ದಾರೆ. ಮಾನಸಿಕ ಅಸ್ವಸ್ಥ ಆಗಿದ್ದರೆ ಈ ಕೃತ್ಯ ಎಸಗಲು ಸಾಧ್ಯನಾ? ಮೊದಲು ಅವನನ್ನು ಕೆಲಸದಲ್ಲಿ ಇಟ್ಟುಕೊಂಡಿರುವ ಅಂಗಡಿ ಮಾಲೀಕನನ್ನು ಬಂಧಿಸಬೇಕು. ಈ ಕೃತ್ಯ ಒಬ್ಬನೇ ಮಾಡಲು ಸಾಧ್ಯ ಇಲ್ಲ. ಇದರ ಹಿಂದೆ ಯಾರೋ ಇದ್ದಾರೆ. ಆರೋಪಿಯನ್ನು ತನಿಖೆಗೆ ಒಳಪಡಿಸದೇ ಒಂದೇ ದಿನಕ್ಕೆ ತರಾತುರಿಯಲ್ಲಿ ಜೈಲಿಗೆ ಹಾಕಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೂ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+