ಪರಸ್ಪರ ಅಕ್ರಮ ಸಂಬಂಧ ಗೊತ್ತಾದ್ರೂ ಡಿವೋರ್ಸ್ ಪಡೆಯದ ಬೆಂಗಳೂರಿನ ದಂಪತಿ; ಈ ಕಥೆ ಕೇಳಿದ್ರೆ ಶಾಕ್ ಆಗ್ತೀರಾ!
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿವಾಹ ಮತ್ತು ಸಂಬಂಧಗಳ ಅರ್ಥವೇ ಬದಲಾಗುತ್ತಿದೆ ಅಲ್ಲವೇ?. ಸಣ್ಣ ಪುಟ್ಟ ಜಗಳಗಳಿಗೂ ವಿಚ್ಛೇದನದ ಮೆಟ್ಟಿಲೇರುವ ದಂಪತಿಗಳ ನಡುವೆ, ಇಲ್ಲೊಂದು ವಿಚಿತ್ರ ದಂಪತಿಯ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೌದು, ಗಂಡ ಹೆಂಡತಿ ಇಬ್ಬರು ಪರಸ್ಪರ ವಂಚನೆ ಮಾಡಿದ್ದರೂ, ಅದನ್ನು ಒಪ್ಪಿಕೊಂಡು ಯಾವುದೇ ನಿರ್ಬಂಧಗಳಿಲ್ಲದೆ ಬದುಕಲು ನಿರ್ಧರಿಸಿದ ಬೆಂಗಳೂರಿನ ದಂಪತಿಯ ಕಥೆಯನ್ನು ಆರಾಧ್ಯ ಎಂಬುವವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಈ ಜೋಡಿ, ಮದುವೆ ಆದ ಹೊಸತರಲ್ಲಿ ಇವರ ವಿವಾಹ ಜೀವನ ಅತ್ಯಂತ ಸುಂದರವಾಗಿಯೇ ಇತ್ತು. ಆದರೆ, ಕಾಲಕ್ರಮೇಣ ಪತ್ನಿಗೆ ತಮ್ಮ ಪಕ್ಕದ ಮನೆಯ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಇರುವುದು ಪತಿಗೆ ತಿಳಿದುಬಂದಿದೆ. ಈ ವಿಚಾರ ತಿಳಿದು ಪತಿ ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಆದರೆ, ಈ ಸಂಬಂಧವನ್ನ ಮುರಿದುಕೊಳ್ಳುವ ಬದಲು, ಆತ ತನ್ನ ಪತ್ನಿಯನ್ನ ಕ್ಷಮಿಸಲು ನಿರ್ಧರಿಸಿದ್ದಾನೆ. ತಮ್ಮ ಸಂಸಾರವನ್ನ ಉಳಿಸಿಕೊಳ್ಳುವ ಉದ್ದೇಶದಿಂದ, ಈ ದಂಪತಿ ಬೆಂಗಳೂರನ್ನ ತೊರೆದು ಹೊಸ ಊರಿನಲ್ಲಿ ಹೊಸ ಜೀವನವನ್ನ ಆರಂಭಿಸಿದರು. ಆರಂಭದ ಕೆಲವು ತಿಂಗಳು ಎಲ್ಲವೂ ಸರಿಯಾಗಿಯೇ ಇತ್ತು. ಆ ಮೇಲೊಂದು ಈ ಕಥಟಗೆ ಟ್ವಿಸ್ಟ್ ಸಿಕ್ಕಿತು ನೋಡಿ.
ಬಯಲಾಯ್ತು ಪತಿಯ ವಿವಾಹೇತರ ಸಂಬಂಧ
ಹೊಸ ಊರಿನಲ್ಲಿ ಜೀವನ ಸುಗಮವಾಗಿ ಸಾಗುತ್ತಿದೆ ಎನ್ನುವಾಗಲೇ, ಈ ಕಥೆಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗಿದೆ. ತಾನು ಪಕ್ಕದ ಮನೆಯವನೊಂದಿಗೆ ಸಂಬಂಧ ಹೊಂದಿದ್ದ ಅದೇ ಸಮಯದಲ್ಲಿ, ತನ್ನ ಪತಿ ಕೂಡ ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂಬ ಆಘಾತಕಾರಿ ವಿಚಾರ ಪತ್ನಿಗೆ ಗೊತ್ತಾಗಿದೆ.
ಈ ವಿಚಾರ ತಿಳಿದಾಗ, ಸಾಮಾನ್ಯವಾಗಿ ಎಲ್ಲ ದಂಪತಿಯ ನಡುವೆ ದೊಡ್ಡ ಜಗಳ, ಆರೋಪ-ಪ್ರತ್ಯಾರೋಪಗಳು ನಡೆದು ವಿಚ್ಛೇದನದಲ್ಲಿ ಅಂತ್ಯವಾಗಬೇಕಿತ್ತು. ಆದರೆ, ಈ ಜೋಡಿ ತೆಗೆದುಕೊಂಡ ನಿರ್ಧಾರ ಮಾತ್ರ ಎಲ್ಲರನ್ನೂ ದಂಗಾಗಿಸಿದೆ.
A couple from Bengaluru got married, and in the beginning, everything seemed perfectly normal.
— Aradhya (@ItsAradhya__) September 5, 2026
But after some time, the husband discovered that his wife was having an affair with their neighbour.
He was devastated, but instead of ending the marriage, he decided to forgive her. He… pic.twitter.com/KQNww83gjb
ಮುಕ್ತ ವಿವಾಹ ವ್ಯವಸ್ಥೆಗೆ ದಂಪತಿ ಸೈ
ಪರಸ್ಪರ ಇಬ್ಬರ ಗುಟ್ಟುಗಳು ರಟ್ಟಾದ ನಂತರ, ಜಗಳವಾಡುವ ಬದಲು ಅಥವಾ ದೂರವಾಗುವ ಬದಲು, ಅವರು ಒಂದು ಒಪ್ಪಂದಕ್ಕೆ ಬಂದಿದ್ದಾರೆ. ಇನ್ಮುಂದೆ ಇಬ್ಬರೂ ಮದುವೆಯ ಬಂಧದಲ್ಲೇ ಇದ್ದುಕೊಂಡು, ಹೊರಗಡೆ ಬೇರೆ ವ್ಯಕ್ತಿಗಳೊಂದಿಗೆ ಮುಕ್ತವಾಗಿ ಸಂಬಂಧ ಹೊಂದುವ ಸ್ವಾತಂತ್ರ್ಯವನ್ನ ಒಬ್ಬರಿಗೊಬ್ಬರು ನೀಡಿದ್ದಾರೆ ಎಂದರೆ ನೀವು ನಂಬುತ್ತೀರಾ?.
ಹೌದು, ಯಾರು ಎಲ್ಲಿಗೆ ಹೋಗುತ್ತಾರೆ, ಯಾರೊಂದಿಗೆ ಇರುತ್ತಾರೆ ಎಂಬುದರ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ, ಯಾವುದೇ ಮುಚ್ಚುಮರೆಯಿಲ್ಲ ಹಾಗೂ ಯಾವುದೇ ನಿರ್ಬಂಧಗಳಿಲ್ಲ ಎಂಬ ಷರತ್ತಿನ ಮೇಲೆ ತಮ್ಮ ವಿವಾಹ ಜೀವನವನ್ನ ಮುಂದುವರಿಸಲು ನಿರ್ಧರಿಸಿದ್ದಾರೆ.
ಆಧುನಿಕ ಸಂಬಂಧಗಳ ಬಗ್ಗೆ ಚರ್ಚೆ ಹುಟ್ಟುಹಾಕಿದ ನೆಟ್ಟಿಗರು
ಎಕ್ಸ್ ಬಳಕೆದಾರರಾದ ಆರಾಧ್ಯ ಅವರು ಹಂಚಿಕೊಂಡಿರುವ ಈ ಕಥೆ ಇದೀಗ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಇದನ್ನೇ ನಾವು ಮಾಡರ್ನ್ ರಿಲೇಶನ್‌ಶೀಪ್ ಎಂದು ಕರೆಯುವುದಾದರೆ, ಪ್ರೀತಿ, ನಂಬಿಕೆ, ಬದ್ಧತೆ ಮತ್ತು ನಿಷ್ಠೆಗೆ ಬೆಲೆ ಎಲ್ಲಿದೆ? ಎಂಬ ಗಂಭೀರ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.
ಇಂತಹ ಮದುವೆಗಳು ನಿಜಕ್ಕೂ ವರ್ಷಗಳ ಕಾಲ ಉಳಿಯಲು ಸಾಧ್ಯವೇ? ಅಥವಾ ಒಂಟಿತನವನ್ನ ತಪ್ಪಿಸಿಕೊಳ್ಳಲು ಕಂಡುಕೊಂಡಿರುವ ಒಂದು ವಿಭಿನ್ನ ದಾರಿಯೇ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಕೆಲವರು ಇದೊಂದು ಕೇವಲ ಒಪ್ಪಂದದ ಬದುಕು ಎಂದರೆ, ಮತ್ತೆ ಕೆಲವರು ಇದು ಮದುವೆ ಎಂಬ ಪದ್ಧತಿಯನ್ನ ಅಣಕಿಸುವುದು ಎಂದು ಟೀಕಿಸುತ್ತಿದ್ದಾರೆ.


Click it and Unblock the Notifications
