ಬೆಂಗಳೂರು: ದಂಪತಿ ಬ್ಯಾಂಕ್ ಗೆ ವಂಚಿಸಿದ್ದು 16 ಕೋಟಿ!

ಬೆಂಗಳೂರು, ಫೆ. 12: ಅವರು ಅಂತಿಂಥ ಕಿಲಾಡಿ ದಂಪತಿಯಲ್ಲ, ವ್ಯಾಪಾರಕ್ಕೆಂದು ಬ್ಯಾಂಕ್ ನಿಂದ ಸಾಲ ಪಡೆದು ನಡೆಸುತ್ತಿದ್ದುದ್ದು ಫೈನಾನ್ಸ್ ವ್ಯವಹಾರ, ಜನರಿಗೆ ಹಣ ನೀಡಲು ತೆಗೆದುಕೊಂಡ ಕಾಗದ ಪತ್ರಗಳನ್ನೇ ಬ್ಯಾಂಕ್ ನಲ್ಲಿಟ್ಟು ಅಪಾರ ಪ್ರಮಾಣದ ಸಾಲ ಪಡೆದಿದ್ದು ಅಲ್ಲದೇ ತಮ್ಮೆಲ್ಲ ಆಸ್ತಿಯನ್ನು ಮಾರಿ ವಿದೇಶಕ್ಕೆ ಹಾರಿದ್ದಾರೆ.

ಇತ್ತ ಸಾಲ ನೀಡಿದ ಬ್ಯಾಂಕ್, ಕಾಗದ ಪತ್ರ ನೀಡಿದವರು ವಂಚನೆಗೆ ಒಳಗಾಗಿದ್ದಾರೆ. ಲಕ್ಷ್ಮೀ ವಿಲಾಸ್ ಬ್ಯಾಂಕ್ ಗೆ ದಂಪತಿಯೊಂದು ವಂಚನೆ ಮಾಡಿರುವುದು ಲಕ್ಷಾಂತರ ರೂಪಾಯಿಯಲ್ಲ. ಬರೋಬ್ಬರಿ 16.15 ಕೋಟಿ ರೂ![ಎಟಿಎಂನಲ್ಲಿ ವಂಚನೆ ನಡೆದಾಗ ಹೀಗೆ ಮಾಡಿ...]

money

ಮೊದಲು ಸಾಲ ಮರುಪಾವತಿ ಸರಿಯಾಗೇ ಮಾಡುತ್ತದ್ದ ದಂಪತಿ ಬ್ಯಾಂಕ್ ನೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಆದರೆ ಕಳೆದ ಆಗಸ್ಟ್ ನಿಂದ ದಂಪತಿ ಮರುಪಾವತಿ ಮಾಡುವುದನ್ನು ನಿಲ್ಲಿಸಿದ್ದರು. ಈ ಬಗ್ಗೆ ಕೋರಮಂಗಲ ಬ್ಯಾಂಕ್ ಮ್ಯಾನೇಜರ್ ಸುಬ್ಬ ರಾವ್ ವಿಚಾರಣೆ ಮಾಡಿದಾಗ ಸಾಲ ಪಡೆದವರು ಊರಿನಲ್ಲಿ ಇಲ್ಲ ಎಂಬುದು ತಿಳಿದು ಬಂದಿದೆ.

ಬೊಮ್ಮಸಂದ್ರದ ಸುಜಾನ್ ಪ್ರೆಸೊಷನ್ ಪ್ರೈ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದ ಬಿ.ಎಸ್.ಪದ್ಮನಾಭಾಚಾರ್ ಮತ್ತು ಅವರ ಹೆಂಡತಿ ಡಿ. ಭಾರತಿ ವಂಚಕ ದಂಪತಿ. ಮೊದಲು ವ್ಯಾಪಾರಕ್ಕೆಂದು ಬ್ಯಾಂಕ್ ನಿಂದ 4.3 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ದಿವ್ಯಾ ಹರೀಶ್ ಮತ್ತು ತಂಬಿದೊರೈ ಎಂಬುವರ ಹೆಸರಿನಲ್ಲಿದ್ದದ ಆಸ್ತಿಯನ್ನು ದಾಖಲೆಯಾಗಿ ನೀಡಿದ್ದರು.[ಬೆಂಗಳೂರು : 8ನೇ ತರಗತಿ ವಿದ್ಯಾರ್ಥಿ ಅಪಹರಣ, ಕೊಲೆ]

ಇದಾದ ನಂತರ ದಂಪತಿ 2011ನ ರಲ್ಲಿ ಮತ್ತೆ 17.5 ಕೋಟಿ ರೂ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ವರ್ಧನಾಚಾರ್ ಹೆಸರಿನಲ್ಲಿದ್ದ ದಾಖಲೆಗಳನ್ನು ಆಧಾರವಾಗಿ ನೀಡಿದ್ದರು. ಇದಾದ ನಂತರ ಮತ್ತೆ 2012 ರಲ್ಲಿ ಆಸ್ತಿ ಖರೀದಿಗೆಂದು 2 ಕೋಟಿ ಸಾಲ ಪಡೆದುಕೊಂಡಿದ್ದರು ಎಂದು ರಾವ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ದಿನಕಳೆದಂತೆ ಹಣ ಮರುಪಾವತಿ ವಿಧಾನ ತಪ್ಪಿಸಿಕೊಳ್ಳಲಾಗುತ್ತಿತ್ತು. ತಮಗೆ ಸ್ವಲ್ಪ ಸಮಯ ನೀಡುವಂತೆ ದಂಪತಿ ರಾವ್ ಬಳಿ ಮನವಿ ಮಾಡಿದ್ದರು. ಆದರೆ ಈಗ ಬ್ಯಾಂಕ್ ಗೆ ವಂಚಿಸಿ ವಿದೇಶಕ್ಕೆ ಹಾರಿದ್ದಾರೆ.

ಪೊಲೀಸರು ಹೇಳುವಂತೆ ದಂಪತಿ ಫೈನಾನ್ಸ್ ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಜನರಿಗೆ ಹಣ ನೀಡುವ ವೇಳೆ ಪಡೆದುಕೊಂಡ ದಾಖಲೆಗಳನ್ನೆ ಬ್ಯಾಂಕ್ ಸಾಲಕ್ಕೆ ಬಳಸಿಕೊಂಡಿದ್ದರು. ತಮಗೆ ಸೇರಿದ್ದ ಎಲ್ಲ ಆಸ್ತಿಯನ್ನು ಮಾರಿ ದಂಪತಿ ಮಕ್ಕಳೊಂದಿಗೆ ವಿದೇಶಕ್ಕೆ ಹಾರಿದ್ದು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+