• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ದಕ್ಷಿಣ ಹಾಗೂ ಪೂರ್ವ ಡೇಂಜರ್ ವಲಯ!

|

ಬೆಂಗಳೂರು, ಜುಲೈ 21: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ ರೂಮ್ ನೀಡಿದ ಮಾಹಿತಿಯಂತೆ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಜೋನ್ ಗಳ ಸಂಖ್ಯೆಗೆ ಸೋಮವಾರದಂದು ಹೊಸದಾಗಿ 2200 ಜೋನ್ ಸೇರ್ಪಡೆಗೊಂಡಿವೆ.

   Drone Prathap in Police Custody, what next..? | Oneindia Kannada

   ಜೂನ್ ತಿಂಗಳ ಅಂತ್ಯದ ತನಕ ನಿರಾತಂಕವಾಗಿದ್ದ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂಬರುವ ಕೊರೊನಾ ಅಲೆಯನ್ನು ತಡೆಗಟ್ಟಲು ಅನುಸರಿಸಿದ ಮಾರ್ಗ ಲಾಕ್ಡೌನ್, ಕಂಟೈನ್ಮೆಂಟ್ ಜೋನ್ ಗುರುತಿಸುವಿಕೆ.

   ಕೋವಿಡ್19 ಯುದ್ಧದಲ್ಲಿ ಬಿಬಿಎಂಪಿ ಸೋಲಿಗೆ 6 ಕಾರಣ!

   ಲಾಕ್ಡೌನ್ ಪರಿಣಾಮಕಾರಿಯಾಗಿ ಬಳಸಲಿಲ್ಲ, ಆರೋಗ್ಯ ಇಲಾಖೆ ಮೂಲ ಸೌಕರ್ಯ, ಲಾಜಿಸ್ಟಿಕ್ ಕೊರತೆ ಬಗ್ಗೆ ಯೋಚಿಸಲಿಲ್ಲ, ಹೀಗಾಗಿ ಇಂದಿನ ಪರಿಸ್ಥಿತಿಗೆ ತಲುಪಿದೆ, ಮೇ 30 ರ ವೇಳೆಗೆ ಕೇವಲ 63 ಕಂಟೈನ್ಮೆಂಟ್ ಜೋನ್ ಹೊಂದಿದ್ದ ಬೆಂಗಳೂರು ಜೂನ್ 30ರ ವೇಳೆಗೆ 487 ತಲುಪಿತ್ತು. ಈಗ ಸೋಮವಾರವೇ ಹೊಸದಾಗಿ 2000 ಜೋನ್ ಸೇರ್ಪಡೆಗೊಂಡಿದ್ದು, ಒಟ್ಟಾರೆ, ಸಕ್ರಿಯ ಪ್ರಕರಣ ಹೊಂದಿರುವ ಕಂಟೈನ್ಮೆಂಟ್ ಜೋನ್ ಸಂಖ್ಯೆ 8398ಕ್ಕೇರಿದೆ.

   ಬೆಂಗಳೂರು ದಕ್ಷಿಣದಲ್ಲಿ 50ಕ್ಕೂ ಅಧಿಕ ಸಕ್ರಿಯ ಕೇಸ್

   ಬೆಂಗಳೂರು ದಕ್ಷಿಣದಲ್ಲಿ 50ಕ್ಕೂ ಅಧಿಕ ಸಕ್ರಿಯ ಕೇಸ್

   ಬಿಬಿಎಂಪಿ ವಾರ್ ರೂಮ್ ಬುಲೆಟಿನ್ ಪ್ರಕಾರ, ಬೆಂಗಳೂರು ದಕ್ಷಿಣದಲ್ಲಿ 50ಕ್ಕೂ ಅಧಿಕ ಸಕ್ರಿಯ ಕೊವಿಡ್ 19 ಪ್ರಕರಣಗಳಿವೆ, ಈ ವಲಯದ 39 ವಾರ್ಡ್ ಆತಂಕದಲ್ಲಿದೆ. ಇದೇ ರೀತಿ ಬೆಂಗಳೂರು ಪಶ್ಚಿಮದಲ್ಲಿ 37 ವಾರ್ಡ್, ಪೂರ್ವವಲಯದಲ್ಲಿ 30 ವಾರ್ಡ್, ಬೊಮ್ಮನಹಳ್ಳಿಯಲ್ಲಿ 16, ಮಹದೇವಪುರದಲ್ಲಿ 13, ರಾಜರಾಜೇಶ್ವರಿ ನಗರದಲ್ಲಿ 10ವಾರ್ಡ್, ಯಲಹಂಕದಲ್ಲಿ 8, ದಾಸರಹಳ್ಳಿಯ 2 ವಾರ್ಡ್ ಆತಂಕ ಪಡುವ ಸ್ಥಿತಿಯಲ್ಲಿವೆ. ವಾರ್ಡ್ ಗಳ ಪೈಕಿ ಥಣಿಸಂದ್ರ ವಾರ್ಡ್ 55 ಹೊಸ ಪ್ರಕರಣಗಳೊಂದಿಗೆ ಟಾಪ್ ಸ್ಥಾನಕ್ಕೇರಿದ್ದರೆ, ಶಾಂತಲಾ ನಗರ ವಾರ್ಡ್ 54 ಕೇಸ್ ಗಳನ್ನು 24 ಗಂಟೆಗಳಲ್ಲಿ ದಾಖಲಿಸಿಕೊಂಡಿದೆ.

   ರಾಜ್ಯ ಸರ್ಕಾರದ ಮತ್ತೊಂದು ಯಡವಟ್ಟು, 10100 ಬಾಡಿಗೆ ಬೆಡ್‌ಗಳು!

   ಕಳೆದ 10 ದಿನಗಳಲ್ಲಿ ಬೆಂಗಳೂರು ದಕ್ಷಿಣದಲ್ಲಿ 342 ಕೇಸ್

   ಕಳೆದ 10 ದಿನಗಳಲ್ಲಿ ಬೆಂಗಳೂರು ದಕ್ಷಿಣದಲ್ಲಿ 342 ಕೇಸ್

   ಕಳೆದ 10 ದಿನಗಳಲ್ಲಿ ಬೆಂಗಳೂರು ದಕ್ಷಿಣದಲ್ಲಿ 342 ಕೇಸ್, ಪೂರ್ವದಲ್ಲಿ 314, ಬೊಮ್ಮನಹಳ್ಳಿಯಲ್ಲಿ 136, ಬೆಂಗಳೂರು ಪಶ್ಚಿಮ 206, ಯಲಹಂಕ 43, ರಾಜರಾಜೇಶ್ವರಿ ನಗರ 81, ಮಹದೇವಪುರ 78 ಹಾಗೂ ದಾಸರಹಳ್ಳಿ 29 ಕೇಸ್ ದಾಖಲಿಸಿಕೊಂಡಿವೆ.

   ಬೆಂಗಳೂರಿನಲ್ಲಿ ಸೋಮವಾರದ ಎಣಿಕೆಯಂತೆ 33,229 ಕೊರೊನಾವೈರಸ್ ಕೇಸ್ ಗಳಿದ್ದು, ಈ ಪೈಕಿ 25,574 ಸಕ್ರಿಯ ಪ್ರಕರಣ, ಒಂದೇ ದಿನ 31 ಸಾವು ಕಂಡಿದೆ. ಒಟ್ಟಾರೆ 698 ಮಂದಿ ಮೃತಪಟ್ಟಿದ್ದಾರೆ.

   ಬೆಂಗಳೂರಿನಲ್ಲಿ ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿ

   8 ವಲಯಗಳ ಪೈಕಿ 7ರಲ್ಲಿ 50ಕ್ಕೂ ಅಧಿಕ ಪ್ರಕರಣಗಳು

   8 ವಲಯಗಳ ಪೈಕಿ 7ರಲ್ಲಿ 50ಕ್ಕೂ ಅಧಿಕ ಪ್ರಕರಣಗಳು

   8 ವಲಯಗಳ ಪೈಕಿ 7ರಲ್ಲಿ 50ಕ್ಕೂ ಅಧಿಕ ಪ್ರಕರಣಗಳು ಕಂಡು ಬಂದಿವೆ. ದಕ್ಷಿಣ ವಲಯದಲ್ಲಿ ಅತ್ಯಧಿಕ ಸಕ್ರಿಯ ಪ್ರಕರಣಗಳಿದ್ದರೆ, ನಂತರದ ಸ್ಥಾನದಲ್ಲಿ ಪೂರ್ವ, ಪಶ್ಚಿಮ, ಬೊಮ್ಮನಹಳ್ಳಿ, ಮಹದೇವಪುರ, ರಾಜರಾಜೇಶ್ವರಿನಗರ, ಯಲಹಂಕ ವಲಯಗಳಿವೆ.

   ದಕ್ಷಿಣ ವಲಯ: ಜೆಪಿ ನಗರ, ಬಿಟಿಎಂ ಲೇಔಟ್, ಜಯನಗರ, ಹನುಮಂತ ನಗರ, ಬಸವನಗುಡಿ, ವಿದ್ಯಾಪೀಠ, ಕುಮಾರಸ್ವಾಮಿ ಲೇಔಟ್, ವಿ.ವಿ ಪುರಂ, ಕಾಟನ್ ಪೇಟೆ.

   ಪೂರ್ವ ವಲಯ: ದೊಮ್ಮಲೂರು, ಶಾಂತಿ ನಗರ, ಶಾಂತಲಾ ನಗರ, ವಸಂತನಗರ, ಬಾಣಸವಾಡಿ, ಹಲಸೂರು, ಶಿವಾಜಿನಗರ.

   ಯಾವ ಯಾವ ವಲಯದಲ್ಲಿ ಯಾವ ವಾರ್ಡ್ ಆತಂಕಕಾರಿ

   ಯಾವ ಯಾವ ವಲಯದಲ್ಲಿ ಯಾವ ವಾರ್ಡ್ ಆತಂಕಕಾರಿ

   ಪಶ್ಚಿಮ ವಲಯ: ಕೆಆರ್ ಮಾರುಕಟ್ಟೆ, ನಂದಿನಿ ಲೇ ಔಟ್, ಪಾದರಾಯನಪುರ, ಮಲ್ಲೇಶ್ವರ, ಚಾಮರಾಜಪೇಟೆ, ಮಾರೇನಹಳ್ಳಿ, ಚಿಕ್ಕಪೇಟೆ, ರಾಜಾಜಿನಗರ.

   ಮಹದೇವಪುರ: ಎಚ್ಎಎಲ್ ವಿಮಾನ ನಿಲ್ಡಾಣ, ಬೆಳ್ಳಂದೂರು, ಹೊರಮಾವು.

   ಬೊಮ್ಮನಹಳ್ಳಿ: ಬೇಗೂರು, ಯಲಚೇನಹಳ್ಳಿ, ಅಂಜನಾಪುರ, ವಸಂತಪುರ

   ಆರ್ ಆರ್ ನಗರ; ಕೆಂಗೇರಿ, ರಾಜರಾಜೇಶ್ವರಿ ನಗರ, ಕೊಟ್ಟಿಗೆಪಾಳ್ಯ, ಉಳ್ಳಾಲ,

   ಯಲಹಂಕ ವಲಯ: ಕೆಂಪೇಗೌಡ ವಾರ್ಡ್, ಥಣಿಸಂದ್ರ, ವಿದ್ಯಾರಣ್ಯಪುರ.

   ಬೆಂಗಳೂರಿನ ಜನರಿಗೆ ಆರೋಗ್ಯ ಇಲಾಖೆಯ ಮನವಿ

   English summary
   Bengaluru Containment Zones: Bengaluru South has the most number of containment zones, followed by Bengaluru East. there were only 63 containment zones as on May 30, it rose to 487 by June 30.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X