BDA: ಬೆಂಗಳೂರು ವಿಮಾನ ನಿಲ್ದಾಣ - ಬೆಂಗಳೂರು ನಗರ ಭಾಗದ ಜನರಿಗೆ ಗುಡ್‌ನ್ಯೂಸ್ ಕೊಟ್ಟ ಬಿಡಿಎ
BDA: ಬೆಂಗಳೂರಿನಲ್ಲಿ ಇನ್ಫ್ರಾಸ್ಟ್ರಕ್ಚರ್‌ಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ನಡೆದಿವೆ. ಬೆಂಗಳೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಗ್ರೇಟರ್ ಬೆಂಗಳೂರು ಆಡಳಿತ ಹಾಗೂ ಬಿಎಂಆರ್‌ಸಿಎಲ್ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳುತ್ತಿದೆ. ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ವಿಮಾನ ನಿಲ್ದಾಣ - ಬೆಂಗಳೂರು ನಗರ ಭಾಗದ ಜನರಿಗೆ ಗುಡ್‌ನ್ಯೂಸ್ ಕೊಟ್ಟಿದೆ.
ಉತ್ತರ ಬೆಂಗಳೂರು ಭಾಗದ ಯಲಹಂಕ, ಜಕ್ಕೂರು, ಸಹಕಾರನಗರ ಕಡೆಯಿಂದ ನಗರದ ಕಡೆಗೆ ಪ್ರವೇಶವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಹೆಬ್ಬಾಳ ಮೇಲ್ಸೇತುವೆಗೆ ಸಂಪರ್ಕಿಸುತ್ತಿರುವ ನೂತನ ಲೂಪ್ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಕಾಮಗಾರಿಯ ಎಲ್ಲಾ ಕಾಲಂಗಳ ಸಿವಿಲ್ ಕಾಮಗಾರಿ ಮುಕ್ತಾಯಗೊಂಡಿದೆ.

ಒಟ್ಟು 03 Spanಗಳ Steel girder ಗಳನ್ನು ಅಳವಡಿಸುವ ಕಾರ್ಯ ಬಾಕಿ ಇದ್ದು, Steel girder ಗಳ ಪ್ರಗತಿ ಕೆಳಕಂಡಂತಿದೆ. Span No 1ರ ಎಲ್ಲಾ Fabrication ಕಾರ್ಯ ಮುಕ್ತಾಯಗೊಂಡಿದ್ದು, Painting ಕಾರ್ಯ ಪ್ರಗತಿಯಲ್ಲಿದ್ದು, Span No 02 ಮತ್ತು 03ರ Fabrication ನಲ್ಲಿ 30 ಜನರ ತಂಡವು ತೊಡಗಿದ್ದು, Welding ಕಾರ್ಯ ಪ್ರಗತಿಯಲ್ಲಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹೇಳಿದೆ.
ಈ ಲೂಪ್ ಪೂರ್ಣಗೊಂಡ ಬಳಿಕ: ಕೆಂಪೇಗೌಡ ವಿಮಾನ ನಿಲ್ದಾಣ ಕಡೆಯಿಂದ ನಗರದ ಕಡೆಗೆ ಪ್ರವೇಶಿಸುವ ವಾಹನಗಳು ತಡೆರಹಿತ ಸುಗಮ ಸಂಚಾರಕ್ಕೆ ಅನುವಾಗಲಿದೆ. ಉತ್ತರ ಬೆಂಗಳೂರು ಭಾಗದಲ್ಲಿ ಬರುವ ಯಲಹಂಕ, ಸಹಕಾರನಗರ, ಜಕ್ಕೂರು ಕಡೆಯಿಂದ ನಗರದ ಕಡೆಗೆ ಚಲಿಸುವ ವಾಹನಗಳಿಗೆ ನಿರ್ಮಿಸಿರುವ ಪ್ರತ್ಯೇಕ ಪಥಗಳ ಮುಖಾಂತರ ತಡೆರಹಿತ ವಾಹನ ಸಂಚಾರಕ್ಕೆ ನೆರವಾಗಲಿದೆ. ಅಲ್ಲದೇ ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ. ಬಿಡಿಎ ವತಿಯಿಂದ ಸುಧಾರಿತ ಸಂಚಾರ ವ್ಯವಸ್ಥೆಗಾಗಿ ನಿರಂತರ ಪ್ರಯತ್ನ ನಡೆದಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಂಠೀರವ ಸ್ಟೇಡಿಯಂ ರಾಜಕಾಲುವೆ: ತುರ್ತು ಕಾಮಗಾರಿಗೆ ಸೂಚನೆ
ಇನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂ ರಾಜಕಾಲುವೆ ತುರ್ತು ಕಾಮಗಾರಿಗೆ ಬೆಂಗಳೂರಿನ ಪ್ರಮುಖ ಪಾಲಿಕೆಯಿಂದ ಸೂಚನೆ ನೀಡಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಈ ಸಂಬಂಧ ಮಹತ್ವದ ಸೂಚನೆ ನೀಡಿದ್ದಾರೆ.
ವಿಧಾನಸೌಧ ಸುತ್ತಮುತ್ತಲಿನ ರಸ್ತೆ, ಮಿನ್ಸ್ ಸ್ಕೈರ್, ಶಿವಾನಂದ ವೃತ್ತ, ಕಬ್ಬನ್ ರಸ್ತೆ, ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ ಹತ್ತಿರ, ಅರಮನೆ ರಸ್ತೆ, ರೇಸ್ ಕೋರ್ಸ್ ರಸ್ತೆ,
ನೃಪತುಂಗ ರಸ್ತೆ ಹಾಗೂ ಕಂಠೀರವ ಸ್ಟೇಡಿಯಂನಲ್ಲಿರುವ ರಾಜಕಾಲುವೆ ಕಾಮಗಾರಿ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಆಯುಕ್ತರು, ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ತುರ್ತಾಗಿ ಕೈಗೊಳ್ಳಲು ಸೂಚಿಸಿದ್ದಾರೆ. ಅಲ್ಲದೇ ಅಗತ್ಯ ಇರುವ ಕಡೆಗಳಲ್ಲಿ ರಸ್ತೆ ಡಾಂಬರಿಕರಣ (resurfacing) ಕಾಮಗಾರಿ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ.
ಕಂಠೀರವ ಸ್ಟೇಡಿಯಂ ನಲ್ಲಿ ಕ್ರೀಡಾರ್ಥಿಗಳಿಗೆ / ಮಕ್ಕಳಿಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕಾಲುವೆ ಕಾಮಗಾರಿ ಶೀಘ್ರ ಪ್ರಾರಂಭಿಸಲು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಎಂಜಿನಿಯರರಾದ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಎಂಜಿನಿಯರರು, ಕಾರ್ಯಪಾಲಕ ಎಂಜಿನಿಯರರು, ರಾಜಕಾಲುವೆ ವಿಭಾಗದ ಎಂಜಿನಿಯರರು ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications