ಬೆಂಗಳೂರು ಕಾಲೇಜಿನಲ್ಲಿ ಸೀನಿಯರ್ ಮೇಲೆ ಅ*ತ್ಯಾಚಾರ ಎಸಗಿ ಮಾತ್ರೆ ಬೇಕಾ? ಎಂದ ಜ್ಯೂನಿಯರ್
ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್ ಕ್ಯಾಂಪಸ್‌ನಲ್ಲೇ ಘೋರ ದುರಂತ ನಡೆದಿದೆ. ವಿದ್ಯಾರ್ಥಿಯೊಬ್ಬ ಸೀನಿಯರ್ ವಿದ್ಯಾರ್ಥಿನಿ ಮೇಲೆ ಕಾಲೇಜು ಆವರಣದಲ್ಲೇ ಅತ್ಯಾ*ಚಾರ ಎಸಗಿರುವ ಕೃತ್ಯ ವರದಿಯಾಗಿದೆ. ಜೂನಿಯರ್ ವಿದ್ಯಾರ್ಥಿಯೊಬ್ಬ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತನ್ನ ಸೀನಿಯರ್ ವಿದ್ಯಾರ್ಥಿನಿಯ ಮೇಲೆ ಅ*ತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಈ ಘಟನೆ ಕಂಡು ಇಡೀ ಬೆಂಗಳೂರು ಬೆಚ್ಚಿಬಿದ್ದಿದೆ.
ಖಾಸಗಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಈ ಕೃತ್ಯ ನಡೆದಿದೆ. ತನ್ನದೇ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯ ಮೇಲೆ ಅ*ತ್ಯಾಚಾರ ಎಸಗಿದ ಆರೋಪದ ಮೇಲೆ ಆರೋಪಿ ಜೀವನ್ ಗೌಡ ಎಂಬ ವಿದ್ಯಾರ್ಥಿಯನ್ನ ಹನುಮಂತನಗರ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಿ.ಟೆಕ್ ವಿದ್ಯಾರ್ಥಿನಿ ಮೇಲೆ ಈ ದೌರ್ಜನ್ಯ ನಡೆದಿದ್ದು, ಮೂರು ತಿಂಗಳಿನಿಂದ ಆರೋಪಿ ಜೊತೆ ಪರಿಚಯವಿತ್ತು ಎನ್ನಲಾಗಿದೆ. ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಒಂದೇ ವಿಭಾಗಕ್ಕೆ ಸೇರಿದವರಾಗಿದ್ದು, ಕ್ಯಾಂಪಸ್ ಆವರಣದಲ್ಲೇ ಈ ಘಟನೆ ನಡೆದಿದೆ.

ಟಾಯ್ಲೆಟ್‌ಗೆ ಎಳೆದೊಯ್ದು ಕೃತ್ಯ!
ಇತ್ತೀಚೆಗೆ ಕಾಲೇಜಿನಲ್ಲಿ ಊಟದ ಬ್ರೇಕ್ ವೇಳೆ ಆರೋಪಿ ಈ ವಿದ್ಯಾರ್ಥಿನಿಗೆ ಹಲವು ಬಾರಿ ಫೋನ್ ಮಾಡಿದ್ದ. ಆರ್ಕಿಟೆಕ್ಚರ್ ಬ್ಲಾಕ್ ಬಳಿ ಭೇಟಿಯಾಗೋಣ ಬಾ ಎಂದು ಕರೆದಿದ್ದ. ಅದರಂತೆ ವಿದ್ಯಾರ್ಥಿನಿ ಅಲ್ಲಿಗೆ ಬಂದಾಗ ಬಲವಂತವಾಗಿ ಮುತ್ತು ಕೊಟ್ಟಿದ್ದ, ನಂತರ ಪುರುಷರ ಶೌಚಾಲಯಕ್ಕೆ ಎಳೆದುಕೊಂಡು ಹೋಗಿ ಬಾಗಿಲು ಲಾಕ್ ಮಾಡಿಕೊಂಡು, ಮಧ್ಯಾಹ್ನ 1.30ರ ಸಮಯದಲ್ಲಿ ಅ*ತ್ಯಾಚಾರ ಎಸಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಅತ್ಯಾ*ಚಾರದ ನಂತರ ವಿದ್ಯಾರ್ಥಿನಿಗೆ ಫೋನ್ ಮಾಡಿ "ಮಾತ್ರೆ ಬೇಕಾ" ಎಂದು ಕೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬಳಿಕ ಯುವತಿ ತನ್ನ ಸ್ನೇಹಿತರಿಗೆ ವಿಚಾರ ತಿಳಿಸಿದ್ದು, ಈ ಘಟನೆ ನಡೆದ ಐದು ದಿನಗಳ ಬಳಿಕ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಅಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವ ಕಾರಣ ತನಿಖೆಗೆ ಸಮಸ್ಯೆಯಾಗಿದೆ. ಪೊಲೀಸರು ವಿಧಿವಿಜ್ಞಾನ ಪರೀಕ್ಷೆಗಳನ್ನು ಪ್ರಾರಂಭಿಸಿದ್ದಾರೆ.
ಮಹಿಳಾ ಆಯೋಗಕ್ಕೆ ಅಶೋಕ್ ಪತ್ರ
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ಕೇವಲ 4 ತಿಂಗಳಲ್ಲಿ ಹುಡುಗಿಯರ ಮೇಲೆ 979 ಲೈಂಗಿಕ ದೌರ್ಜನ್ಯಗಳು. ಬೆಂಗಳೂರಿನಲ್ಲೇ 114ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಾಂಗ್ರೆಸ್ ಸರ್ಕಾರದಿಂದಾಗಿ ನಮ್ಮ ಮಹಿಳೆಯರು ಮತ್ತು ಮಕ್ಕಳು ಭಯದಲ್ಲಿ ಬದುಕುತ್ತಿದ್ದಾರೆ. ನಾನು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ತುರ್ತು ಪತ್ರ ಬರೆದಿದ್ದಾರೆ. ಕರ್ನಾಟಕದಲ್ಲಿ ನಮಗೆ ಈಗ ಸತ್ಯಶೋಧನಾ ತಂಡ ಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications