ನಿಮ್ಮ ಪ್ರೀತಿಗೆ ಅರ್ಹಳಲ್ಲ, ಮರ್ಯಾದೆ ತೆಗೆಯುವ ಕೆಲಸ ಮಾಡಿಲ್ಲ ಅಪ್ಪ ಎಂದು ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು, ನವೆಂಬರ್ 30: ಕಾಲೇಜು ವಿದ್ಯಾರ್ಥಿನಿಯೊಬ್ಬಳು 8 ಪುಟಗಳ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಪಿ.ಜಿ.ಯೊಂದರಲ್ಲಿ ನಡೆದಿದೆ. ಹಾಗಾದ್ರೆ ಬಳಿಕ ನಡೆದಿದ್ದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹೆಸರುಘಟ್ಟ ರಸ್ತೆಯ ಖಾಸಗಿ ಕಾಲೇಜು ವಿಧ್ಯಾರ್ಥಿನಿ ಸೋಲದೇವನಹಳ್ಳಿಯ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಮೃತಳನ್ನು ಹಾಸನ ಮೂಲದ ವತ್ಸಲಾ (19) ಎಂದು ಗುರುತಿಸಲಾಗಿದೆ. ಈಕೆ ಅಂತಿಮ ವರ್ಷದ ಬಿ ಫಾರ್ಮ್ ವ್ಯಾಸಾಂಗ ಮಾಡುತ್ತಿದ್ದಳು. ಇನ್ನು ಪಿಜಿಯಲ್ಲೇ ಬೆಳಿಗ್ಗೆಯಿಂದ 8 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡೆತ್ ನೋಟ್‌ನಲ್ಲಿ ನನಗೆ ನಿಮ್ಮ ಪ್ರೀತಿಗೆ ಅರ್ಹಳಲ್ಲ ಅಪ್ಪ. ನೀವು ಕೊಟ್ಟಿರುವ ಪ್ರೀತಿ ಇನ್ಯಾರಿಂದಲೂ ಕೊಡಲು ಸಾಧ್ಯವಿಲ್ಲ. ಕೇಳಿದ್ದನ್ನೆಲ್ಲಾ ಕೊಡಿಸಿದ್ದೀರಿ. ಅಪ್ಪ ನಿಮ್ಮ ಮರ್ಯಾದೆ ತೆಗೆಯುವ ಕೆಲಸ ನಾನು ಮಾಡಿಲ್ಲ. ಅಪ್ಪ ನಿಮ್ಮ ಪ್ರೀತಿ ಉಳಿಸಿಕೊಳ್ಳುವ ಭಾಗ್ಯ ನನಗಿಲ್ಲ. ಪ್ರೀತಿಸಿದ ಹುಡುಗನಿಗೂ ಮೋಸ ಮಾಡಲು ನನಗೆ ಇಷ್ಟವಾಗುತ್ತಿಲ್ಲ. ಆದ್ದರಿಂದ ನಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು ಬರೆದಿಟ್ಟು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಷಕರಿಗೂ ಈ ವಿಷಯ ತಲುಪಿಸಿದ್ದಾರೆ. ಇನ್ನೂ ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಹಸ್ತಾಂತರ ಮಾಡುವುದಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಪತ್ನಿ ಕಿರುಕುಳಕ್ಕೆ ಪತಿ ಆತ್ಮಹತ್ಯೆ: ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ವರದಕ್ಷಿಣೆ ಕೊಡಲಿಲ್ಲವೆಂದು ಹೆಣ್ಣಿಗೆ ಗಂಡಿನ ಕಡೆಯವರು ಚಿತ್ರಹಿಂಸೆ ಕೊಟ್ಟಿರುವುದನ್ನು ನಾವು ಕೇಳಿರುತ್ತೇವೆ. ಆದರೆ, ಇದೀಗ ಪತ್ನಿ ಕಿರುಕುಳದಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಂತಹ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಲಿವೆ.
ನಗರದಲ್ಲಿ ಪತ್ನಿ ಕಿರುಕುಳಕ್ಕೆ ಮತ್ತೊಂದು ಪತಿ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗಿರಿನಗರದಲ್ಲಿ ನಡೆದಿದೆ. ಬೆಂಗಳೂರಿನ ಗಿರಿನಗರದಲ್ಲಿ ಗಗನ್ ರಾವ್ ಎಂಬುವರು ಆತ್ಮಹತ್ಯೆಗೆ ಶರಣಾದಂತ ವ್ಯಕ್ತಿ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, ನಡೆದಿದ್ದೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಗಗನ್ ರಾವ್ ಅವರು ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ 8 ತಿಂಗಳ ಹಿಂದಷ್ಟೇ ಗಗನ್ ರಾವ್ ಹಾಗೂ ಮೇಘನ್ ಜಾಧವ್ ವಿವಾಹ ಆಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದಂತಹ ಸಂಸಾರದಲ್ಲಿ ಬಿರುಕು ಮೂಡಿದೆ. ಇದು ಪತಿ-ಪತ್ನಿ ನಡುವೆ ಜಗಳಕ್ಕೆ ಕಾರಣವಾಗಿತ್ತು. ಪತಿ ಗಗನ್ ರಾವ್‌ಗೆ ಪತ್ನಿ ಮೇಘನ ಜಾಧವ್ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ಬೇಸತ್ತು ಪತಿ ಗಗನ್ ರಾವ್ ತಮ್ಮ ಗಿರಿನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗಿರಿನಗರ ಠಾಣೆಯ ಪೊಲೀಸರು, ಮೃತನ ತಂಗಿಯಿಂದ ದೂರು ಪಡೆದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications